ETV Bharat / bharat

ಅಸ್ಸೋಂನಲ್ಲಿ ಜಾನುವಾರುಗಳ ಸಂರಕ್ಷಣೆ ಮಸೂದೆಗೆ ಇನ್ನಷ್ಟು ಬಲ.. ತಿದ್ದುಪಡಿ ಬಿಲ್‌ ವಿಧಾನಸಭೆಯಲ್ಲಿ ಪಾಸ್​..

ಹೊಸ ಕಾನೂನಿನಂತೆ ಪಶುಗಳ ಕಣ್ಣಸಾಗಣೆದಾರರಿಗೆ ಕಠಿಣ ಶಿಕ್ಷೆ ವಿಧಿಸುವ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಜಾನುವಾರುಗಳನ್ನು ಬಳಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಟ್ವೀಟ್​ ಮಾಡಿದ್ದಾರೆ..

cattle preservation act
ಜಾನುವಾರುಗಳ ಸಂರಕ್ಷಣೆ ಮಸೂದೆ
author img

By

Published : Dec 24, 2021, 9:54 AM IST

ಗುವಾಹಟಿ (ಅಸ್ಸೋಂ) : ಜಾನುವಾರುಗಳ ಸಂರಕ್ಷಣೆಗೆ ಇನ್ನಷ್ಟು ಕಾನೂನು ಬಲ ತರಲು ಅಸ್ಸೋಂ ಸರ್ಕಾರ ಜಾನುವಾರುಗಳ ಸಂರಕ್ಷಣಾ (ತಿದ್ದುಪಡಿ) ಮಸೂದೆ 2021 ಅನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.

ತಿದ್ದುಪಡಿ ಮಸೂದೆಯಲ್ಲಿ ಕೃಷಿ ಉದ್ದೇಶಗಳಿಗೆ ಜಾನುವಾರುಗಳ ಬಳಕೆಗೆ ಅವಕಾಶ ನೀಡಿದೆ. ಅಲ್ಲದೇ, ಪ್ರಮುಖವಾಗಿ ಜಾನುವಾರುಗಳ ಕಳ್ಳಸಾಗಣೆದಾರರಿಗೆ ಕಠಿಣ ಶಿಕ್ಷೆ ವಿಧಿಸುವುದನ್ನು ಇದು ಖಚಿತಪಡಿಸುತ್ತದೆ ಎಂದು ಹೇಳಲಾಗಿದೆ.

  • In our mission to strengthen protection of cattle in the state, we have brought an amendment to the Cattle Preservation Act 2021. The new additions will ease transportation of cattle for agricultural purposes & ensure stringent punishment for cattle smugglers. pic.twitter.com/bMqHqQ1X3b

    — Himanta Biswa Sarma (@himantabiswa) December 23, 2021 " class="align-text-top noRightClick twitterSection" data=" ">

ರಾಜ್ಯದಲ್ಲಿ ಪಶುಗಳ ಕಳ್ಳಸಾಗಣೆ ಮತ್ತು ಹರಣವನ್ನು ಹತ್ತಿಕ್ಕಲು ಸರ್ಕಾರ ಜಾನುವಾರುಗಳ ಸಂರಕ್ಷಣೆ ಕಾಯ್ದೆ-1950ಕ್ಕೆ ತಿದ್ದುಪಡಿ ತಂದು, ಜಾನುವಾರುಗಳ ಸಂರಕ್ಷಣಾ(ತಿದ್ದುಪಡಿ) ಕಾಯ್ದೆ 2021 ಅನ್ನು ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ: ಉತ್ತರಪ್ರದೇಶ ಚುನಾವಣೆ ಮುಂದೂಡಲು ಪಿಎಂ ಮೋದಿ, ಚುನಾವಣಾ ಆಯೋಗಕ್ಕೆ ಅಲಹಾಬಾದ್​ ಹೈಕೋರ್ಟ್ ಮನವಿ

ಹೊಸ ಕಾನೂನಿನಂತೆ ಪಶುಗಳ ಕಣ್ಣಸಾಗಣೆದಾರರಿಗೆ ಕಠಿಣ ಶಿಕ್ಷೆ ವಿಧಿಸುವ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಜಾನುವಾರುಗಳನ್ನು ಬಳಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಟ್ವೀಟ್​ ಮಾಡಿದ್ದಾರೆ.

ಹೊಸ ಕಾಯ್ದೆಯ ಪ್ರಕಾರ, ಜಾನುವಾರುಗಳ ಕಳ್ಳಸಾಗಣೆ ವೇಳೆ ವಶಪಡಿಸಿಕೊಂಡ ಜಾನುವಾರುಗಳ ಸಂರಕ್ಷಣೆ ಮಾಡುವುದಲ್ಲದೇ, ಈ ವೇಳೆ ಆರೋಪಿಗಳಿಂದ ವಶಪಡಿಸಿಕೊಂಡ ವಾಹನ, ವಸ್ತು ಇನ್ನಿತರ ಸಾಮಗ್ರಿಗಳನ್ನು ಪೊಲೀಸರು ನ್ಯಾಯಾಲಯ ಆದೇಶದ ಮೇರೆಗೆ ಹರಾಜು ಹಾಕಲು ಅವಕಾಶ ನೀಡಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.