ತಿರುವರೂರ್: ವಿಶ್ವದ ಪ್ರಸಿದ್ಧ ತಿರುವರೂರು ತ್ಯಾಗರಾಜ ದೇವಸ್ಥಾನದ ಪಂಗುನಿ ಉತಿರಾಮ್ ಉತ್ಸವ ಅದ್ಧೂರಿಯಾಗಿ ಜರುಗಿದೆ.
ಮಾರ್ಚ್ 2 ರಂದು ಧ್ವಜಾರೋಹಣದೊಂದಿಗೆ ಈ ಉತ್ಸವ ಆರಂಭವಾಯಿತು. ಹಬ್ಬದ ಸಂದರ್ಭದಲ್ಲಿ ಸಾವಿರಾರು ಭಕ್ತರು ತೇರು ಎಳೆದರು.
ಇದು ಏಷ್ಯಾದಲ್ಲಿಯೇ ಅತೀ ದೊಡ್ಡ ರಥವಾಗಿದೆ. 96 ಅಡಿ ಎತ್ತರ ಮತ್ತು 400 ಟನ್ ತೂಕದ ಈ ತೇರು ಹೈಡ್ರಾಲಿಕ್ ಬ್ರೇಕ್ ಹೊಂದಿದೆ.