ETV Bharat / bharat

ಅಸಾನಿ ಚಂಡಮಾರುತಕ್ಕೆ 1 ಕೋಟಿಗೂ ಹೆಚ್ಚು 'ಆಲಿವ್ ರಿಡ್ಲೆ' ಕಡಲಾಮೆ ಮೊಟ್ಟೆಗಳು ನಾಶ - Olive Ridley Eggs Destroyed

ಅಸಾನಿ ಚಂಡಮಾರುತದಿಂದ ಉಂಟಾದ ಉಬ್ಬರವಿಳಿತದಿಂದಾಗಿ ಅಳಿವಿನಂಚಿನಲ್ಲಿರುವ 'ಆಲಿವ್ ರಿಡ್ಲೆ ಕಡಲಾಮೆ'ಗಳ ಒಂದು ಕೋಟಿಗೂ ಹೆಚ್ಚು ಮೊಟ್ಟೆಗಳು ನಾಶವಾಗಿರಬಹುದು ಎಂದು ಅಂದಾಜಿಸಲಾಗಿದೆ.

Olive Ridley Eggs Destroyed
ಅಸಾನಿ ಚಂಡಮಾರುತದ ಪ್ರಭಾವ: ಆಲಿವ್ ರಿಡ್ಲಿ ಕಡಲಾಮೆ ಮೊಟ್ಟೆಗಳು ನಾಶ
author img

By

Published : May 13, 2022, 9:29 AM IST

Updated : May 13, 2022, 9:53 AM IST

ಬೆರ್ಹಾಂಪುರ(ಒಡಿಶಾ): ರಾಜ್ಯ 'ಅಸಾನಿ' ಚಂಡಮಾರುತದ ಹೊಡೆತದಿಂದ ಪಾರಾಗಿದೆ. ಆದರೆ, ಅದರ ಪ್ರಭಾವದಿಂದ ಕಡಲ ತೀರಗಳಲ್ಲಿ ಉಂಟಾದ ಉಬ್ಬರವಿಳಿತ ಅಳಿವಿನಂಚಿನಲ್ಲಿರುವ 'ಆಲಿವ್ ರಿಡ್ಲೆ ಕಡಲಾಮೆ'ಗಳ ಒಂದು ಕೋಟಿಗೂ ಹೆಚ್ಚು ಮೊಟ್ಟೆಗಳು ನಾಶವಾಗಿರಬಹುದು ಎಂದು ಬೆರ್ಹಾಂಪುರ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಆಮ್ಲನ್ ನಾಯಕ್ ತಿಳಿಸಿದ್ದಾರೆ.

ಸಾವಿರಾರು ಮೊಟ್ಟೆಗಳು ಕಡಲತೀರದ ಸವೆತದಿಂದ ನಾಶವಾಗುತ್ತವೆ. ಇದು ಸಾಮಾನ್ಯವಾಗಿದೆ. ಅದರಲ್ಲಿ ಶೇ. 10-15 ರಷ್ಟು ಮೊಟ್ಟೆಗಳು ನೈಸರ್ಗಿಕವಾಗಿ ನಾಶವಾಗುತ್ತವೆ. ಪ್ರತಿ ವರ್ಷ ಒಡಿಶಾ ಕಡಲತೀರಗಳಲ್ಲಿ ಸುಮಾರು 5.5 ಲಕ್ಷ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆಯಿಡಲು ಬರುತ್ತವೆ. ಒಂದು ಆಲಿವ್ ರಿಡ್ಲಿ 100 ಮೊಟ್ಟೆಗಳನ್ನು ಇಡುವುದರಿಂದ, ಆಮೆಗಳು ಸುಮಾರು ಐದು ಕೋಟಿ ಮೊಟ್ಟೆಗಳನ್ನು ಇಟ್ಟಿರಬಹುದು. ಈ ವರ್ಷ ಶೇ 15-20 ರಷ್ಟು ಮೊಟ್ಟೆಗಳು ಹಾನಿಗೊಳಗಾಗಬಹುದು ಎಂದು ನಾಯಕ್ ವಿವರಿಸಿದರು.

ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಈಗಾಗಲೇ ವಿವಿಧ ಸ್ಥಳಗಳಲ್ಲಿ ಬೀಚ್ ಪ್ರೊಫೈಲಿಂಗ್ ಮಾಡಿದೆ. ಚಂಡಮಾರುತದಿಂದಾಗಿ ಸಮುದ್ರದ ಸ್ಥಿತಿ ಪ್ರಕ್ಷುಬ್ಧವಾಗಿದ್ದು ಹೆಚ್ಚಿನ ಮೊಟ್ಟೆಗಳಿಗೆ ಹಾನಿಯಾಗುವ ಸಂಭವವಿದೆ ವಿಭಾಗೀಯ ಅರಣ್ಯಾಧಿಕಾರಿ ಹೇಳಿದರು.

'ಆಲಿವ್ ರಿಡ್ಲೆ' ಮಹತ್ವ: 100 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಆಮೆಗಳು ಮೂಲಭೂತವಾಗಿ ವಲಸೆ ಹೋಗುತ್ತವೆ. ಆದರೆ ಸಂತಾನಾಭಿವೃದ್ಧಿ ಅವಧಿಯಲ್ಲಿ ಹೆಣ್ಣಾಮೆಗಳು ದಡ ಸೇರುತ್ತವೆ. ಒಣ ಮರಳಿನಲ್ಲಿ 12 ರಿಂದ 20 ಇಂಚು ಆಳದ ರಂಧ್ರಗಳನ್ನು ಕೊರೆದು ಅಲ್ಲಿ ಸುಮಾರು 100-150 ಮೊಟ್ಟೆಗಳನ್ನಿಡುತ್ತವೆ. ಆದಾಗ್ಯೂ, ಬದುಕುಳಿಯುವಿಕೆಯ ಪ್ರಮಾಣ ತುಂಬಾ ಕಡಿಮೆ. ಕೇವಲ 1 ಪ್ರತಿಶತದಷ್ಟು (ಅಥವಾ, 100 ರಲ್ಲಿ ಒಂದು ಮಾತ್ರ ಬದುಕುಳಿಯುತ್ತವೆ) ಮೊಟ್ಟೆಗಳು ಅಥವಾ ಮೊಟ್ಟೆಯೊಡೆದ ಮರಿಗಳನ್ನು ವಿವಿಧ ಭೂ ಮತ್ತು ವೈಮಾನಿಕ ಪರಭಕ್ಷಕಗಳು ತಿನ್ನುತ್ತವೆ. ಸಮುದ್ರ ಆಮೆಗಳು ಸಮತೋಲಿತ ಸಾಗರ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಅವಶ್ಯಕ. ಏಕೆಂದರೆ, ಅವು ಸತ್ತ ಮೀನು ಮತ್ತು ಸೀಗ್ರಾಸ್ ಅನ್ನು ಸೇವಿಸುವ ಮೂಲಕ ಸಮುದ್ರದ ನೀರನ್ನು ಸ್ವಚ್ಛವಾಗಿರಿಸಿಕೊಳ್ಳುತ್ತವೆ.

ಒಡಿಶಾ ಕರಾವಳಿ ಆಲಿವ್ ರಿಡ್ಲೆ ಆಮೆಗಳ ವಿಶ್ವದ ಅತಿದೊಡ್ಡ ಗೂಡುಕಟ್ಟುವ ಸ್ಥಳವಾಗಿದೆ. ಆದರೆ ಈ ಬಾರಿ ಕಡಲ ತೀರಗಳಲ್ಲಿ ಸವೆತ ಉಂಟಾಗಿದ್ದು, ಆಮೆಗಳ ಆವಾಸಸ್ಥಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಇದನ್ನೂ ಓದಿ: ಏನಿದು ವಿಸ್ಮಯ : ಮೊಟ್ಟೆಯಿಡಲು ಒಡಿಶಾದ ರುಶಿಕುಲ್ಯ ಬೀಚ್​ಗೆ ಬಂದ ಆಲಿವ್ ರಿಡ್ಲೆ ಆಮೆಗಳು

Last Updated : May 13, 2022, 9:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.