ETV Bharat / bharat

2015ರಲ್ಲೇ ತನ್ನ ಮಾವನನ್ನು ಚೀನಾದ ಸೈನಿಕರು ಕರೆದೊಯ್ದಿದ್ದಾರೆ: ಅರುಣಾಚಲ​ ಪ್ರದೇಶ ಮಹಿಳೆ ಆರೋಪ - Arunachal youth Miram Teron kidnap case

ಸಿಯೊಮಿ ಜಿಲ್ಲೆಯ ಮಹಿಳೆಯೊಬ್ಬರು ಏಳು ವರ್ಷಗಳ ಹಿಂದೆ ತನ್ನ ಮಾವನನ್ನು ಚೀನಾದ ಸೈನಿಕರು ವಶಪಡಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.

Arunachali Woman claims her father taken by Chinese soldiers in 2015
ಅರುಣಾಚಲ ವ್ಯಕ್ತಿಯ ಅಪಹರಣ
author img

By

Published : Feb 4, 2022, 12:29 PM IST

Updated : Feb 4, 2022, 12:55 PM IST

ತೇಜ್‌ಪುರ (ಅರುಣಾಚಲ ಪ್ರದೇಶ): ಅರುಣಾಚಲ ಯುವಕ ಮಿರಾಮ್‌ ಟ್ಯಾರೋನ್​ನನ್ನು ಚೀನಾದ ಪಿಎಲ್‌ಎ ವಶದಿಂದ ಮರಳಿ ಕರೆತರಲಾದ ಬೆನ್ನಲ್ಲೇ ಇದೀಗ ಸಿಯೊಮಿ ಜಿಲ್ಲೆಯ ಮಹಿಳೆಯೊಬ್ಬರು ಏಳು ವರ್ಷಗಳ ಹಿಂದೆ ತನ್ನ ಮಾವನನ್ನು ಕೂಡ ಚೀನಾದ ಸೈನಿಕರು ವಶಕ್ಕೆ ಪಡೆದಿದ್ದರು. ಅಂದಿನಿಂದ ಅವರು ಪತ್ತೆಯಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಅಮೋನಿ ಡಿರೋ ಪುಲೋಮ್ ಎಂಬ ಮಹಿಳೆ, ತನ್ನ ಮಾವ ತಪೋರ್ ಪುಲೋಮ್ ಅವರು ಇಂಡೋ ಚೀನಾ ಗಡಿಯಲ್ಲಿರುವ ತಾಗಿ ಬೋಗು ಪಾಸ್‌ಗೆ ಬೇಟೆಯಾಡಲು ಹೋಗಿದ್ದರು. ಅವರು 2015ರ ಆಗಸ್ಟ್ ಮೊದಲ ವಾರದಿಂದ ಹಿಂತಿರುಗಿಲ್ಲ. ತಪೋರ್ ಪುಲೋಮ್ ತಮ್ಮ ಸ್ನೇಹಿತನೊಂದಿಗೆ ಬೇಟೆಗೆ ಹೋಗಿದ್ದರು. ಅವರ ಸ್ನೇಹಿತ ತಾಕಾ ಯೋರ್ಚಿ ಕೆಲವು ದಿನಗಳ ನಂತರ ಮನೆಗೆ ಹಿಂದಿರುಗಿದ್ದರು, ಆದರೆ ತಪೋರ್ ಪುಲೋಮ್ ಮಾತ್ರ ಅಂದಿನಿಂದ ಹಿಂತಿರುಗಲಿಲ್ಲ ಎಂದು ಅವರು ಹೇಳಿದ್ದಾರೆ.

ಅವರಿಬ್ಬರೂ ಬೇಟೆಯಾಡುತ್ತಿದ್ದಾಗ ಕೆಲವು ಚೀನೀ ಸೈನಿಕರು ಬಂದು ತಪೋರ್ ಪುಲೋಮ್​ನನ್ನು ಕರೆದೊಯ್ಯುವುದನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದು ಸ್ನೇಹಿತ ತಾಕಾ ಯೋರ್ಚಿಯು ಪುಲೋಮ್ ಅವರ ಕುಟುಂಬಕ್ಕೆ ತಿಳಿಸಿದ್ದಾರೆ. ಘಟನೆಯಿಂದ ಹೆದರಿದ್ದ ಯೋರ್ಚಿ ಪುಲೋಮ್ ಕುಟುಂಬಕ್ಕೆ ತಪೋರ್ ಬಗ್ಗೆ ತಕ್ಷಣ ಏನನ್ನೂ ಹೇಳಲಿಲ್ಲವಂತೆ. ಆದಾಗ್ಯೂ ನಂತರ ತಾಪೋರ್‌ಗೆ ಏನಾಯಿತು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದರು ಎಂದು ಮಹಿಳೆ ಅಮೋನಿ ಡಿರೋ ಪುಲೋಮ್ ತಿಳಿಸಿದ್ದಾರೆ.

ನಂತರ ತಪೋರ್‌ನ ಮಗ ಬಿಕಿ ಪುಲೋಮ್ ಮತ್ತು ಸೊಸೆ ಅಮೋನಿ ಡಿರೋ ಪುಲೋಮ್ ಅವರು ತಾಗಿ ಬೋಗು ಪಾಸ್ ಬಳಿಯ ಕಾಡಿಗೆ ಹೋಗಿದ್ದಾರೆ. ಅಲ್ಲಿ ತಪೋರ್ ಕೊಂಡೊಯ್ದಿದ್ದ ಪಾತ್ರೆಗಳು, ಸ್ವಲ್ಪ ಒಣ ಮಾಂಸ, ಅವರ ಜಾಕೆಟ್ ಮತ್ತು ಬೇಟೆಯಾಡುವ ಬಂದೂಕು ಅವರಿಗೆ ಸಿಕ್ಕಿದ್ದವಂತೆ.

ಇದನ್ನೂ ಓದಿ: Watch.. ಚಿರತೆ ಬಂತು ಚಿರತೆ... ಓಡು..ಓಡು.. ಅರಣ್ಯ ಅಧಿಕಾರಿ ಸೇರಿ ನಾಲ್ವರಿಗೆ ಗಾಯ.. ಮೈಜುಮ್ಮೆನ್ನಿಸುವ ವಿಡಿಯೋ!

ಇನ್ನೂ, ನಾವು ಘಟನೆಯ ಬಗ್ಗೆ ಸೇನಾ ಸಿಬ್ಬಂದಿಗೆ ತಿಳಿಸಿದ್ದೇವೆ. ಆದರೆ ಯಾರೂ ನಮಗೆ ಸಹಾಯ ಮಾಡಲಿಲ್ಲ. ನಾವು ಅದೇ ವರ್ಷ ಡಿಸೆಂಬರ್‌ನಲ್ಲಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿ ಚೀನಾದ ಸೆರೆಯಿಂದ ತಪೋರ್ ಅನ್ನು ಮುಕ್ತಗೊಳಿಸಲು ಸಹಾಯವನ್ನು ಕೋರಿದ್ದೇವೆ.

ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಮಿರಾಮ್ ಟ್ಯಾರೋನ್ ಅವರನ್ನು ಚೀನಾದಿಂದ ಮರಳಿ ಕರೆತರಲಾಗಿದೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇವೆ. ಹಾಗಾಗಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸೇರಿದಂತೆ ಎಲ್ಲರಿಗೂ ತನ್ನ ಮಾವ ತಪೋರ್ ಪುಲೋಮ್ ಅವರನ್ನು ಮರಳಿ ಕರೆತರುವಂತೆ ನಾವು ವಿನಂತಿಸುತ್ತೇವೆ ಎಂದು ಅಮೋನಿ ಡಿರೋ ಪುಲೋಮ್ ತಿಳಿಸಿದರು.

ನನ್ನ ಮಾವ ಇನ್ನೂ ಜೀವಂತವಾಗಿದ್ದಾರೆಯೇ ಎಂಬುದು ನಮಗೆ ತಿಳಿದಿಲ್ಲ. ಅವರು (ಚೀನೀ ಸೈನಿಕರು) ಅವರನ್ನು ಕೊಂದಿದ್ದರೆ, ಅವರ ಮೃತದೇಹ ಮತ್ತು ಬೇಟೆಯಾಡುವ ಸಾಧನಗಳನ್ನು ಹಿಂದಿರುಗಿಸಬೇಕು ಎಂದು ಕೇಳಿಕೊಳ್ಳುತ್ತೇವೆ. ಅವರ ಅಂತ್ಯಸಂಸ್ಕಾರವನ್ನಾದರು ಮಾಡಬಹುದು ಎಂದು ಅಮೋನಿ ಡಿರೋ ಪುಲೋಮ್ ತಿಳಿಸಿದ್ದಾರೆ.

ಇನ್ನೂ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಯುವಕನಾದ 17 ವರ್ಷದ ಮಿರಾಮ್ ಟ್ಯಾರೋನ್ ಚೀನಾ ಸೇನೆ ಅಪಹರಿಸಿತ್ತು. ಆ ಯುವಕನನ್ನು ಚೀನಾ ಸೇನೆ ಭಾರತೀಯ ಸೇನೆಗೆ ಒಪ್ಪಿಸಿತ್ತು. ಈ ಪ್ರಕರಣದ ಬೆನ್ನಲ್ಲೇ ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

Last Updated : Feb 4, 2022, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.