ಹೈದರಾಬಾದ್: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ADR ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ನ್ಯೂ) 763 ಹಾಲಿ ಸಂಸದರ ಸ್ವಯಂ ಪ್ರಮಾಣ ಪತ್ರಗಳನ್ನ ವಿಶ್ಲೇಷಣೆ ಮಾಡಿದೆ. ಇದರಲ್ಲಿ 306 ಅಂದರೆ ಶೇ 40 ರಷ್ಟು ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿದ್ದಾರೆ ಎಂಬುದನ್ನು ಕಂಡುಕೊಂಡಿದೆ.
ದೇಶಾದ್ಯಂತ ಲೋಕಸಭೆ ಮತ್ತು ರಾಜ್ಯಸಭೆಯ 776 ಸ್ಥಾನಗಳಲ್ಲಿ, 763 ಹಾಲಿ ಸಂಸದರ ಡೇಟಾವನ್ನು ಹೀಗೆ ವಿಶ್ಲೇಷಣೆಗೆ ಒಳಪಡಿಸಿದೆ. ಇವರೆಲ್ಲ ಕಳೆದ ಚುನಾವಣೆಗಳು ಮತ್ತು ನಂತರದ ಉಪಚುನಾವಣೆಗಳಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿದ ಅಫಿಡವಿಟ್‌ಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ. 776 ಸ್ಥಾನಗಳ ಪೈಕಿ ನಾಲ್ಕು ಲೋಕಸಭೆ ಮತ್ತು ರಾಜ್ಯಸಭೆಯ ಒಂದು ಸ್ಥಾನ ಖಾಲಿ ಇದೆ. ಜಮ್ಮು ಮತ್ತು ಕಾಶ್ಮೀರದ ನಾಲ್ಕು ರಾಜ್ಯಸಭಾ ಸ್ಥಾನಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಒಬ್ಬ ಲೋಕಸಭೆ ಸಂಸದ ಮತ್ತು ಮೂವರು ರಾಜ್ಯಸಭಾ ಸಂಸದರ ಅಫಿಡವಿಟ್‌ಗಳು ಲಭ್ಯವಿಲ್ಲದ ಕಾರಣ ವಿಶ್ಲೇಷಿಸಲು ಸಾಧ್ಯವಿಲ್ಲ ಎಂದು ಎಡಿಆರ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
ಚುನಾವಣಾ ಆಯೋಗಕ್ಕೆ 763 ಸಂಸದರು ಸಲ್ಲಿಸಿರುವ ಡೇಟಾವನ್ನು ವಿಶ್ಲೇಷಿಸಿದಾಗ ಇದರಲ್ಲಿ ಸುಮಾರು ಶೇ 40 ರಷ್ಟು ಅಂದರೆ 306 ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. 763 ಹಾಲಿ ಸಂಸದರ ಒಟ್ಟಾರೆ ನಿವ್ವಳ ಮೌಲ್ಯ 29,251 ಕೋಟಿ ರೂ. ಎಂದು ಅಂಕಿ- ಅಂಶಗಳಿಂದ ಗೊತ್ತಾಗಿದೆ.
ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಂಸದರು: ಸುಮಾರು 194 ಅಂದರೆ ಶೇ 25 ರಷ್ಟು ಸಂಸದರು ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ, ಈ ಬಗ್ಗೆ ಅವರೇ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ದಾಖಲಿಸಿದ್ದಾರೆ.
ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಅತಿ ಹೆಚ್ಚು ಹಾಲಿ ಸಂಸದರನ್ನು ಹೊಂದಿರುವ ರಾಜ್ಯಗಳು: ಲಕ್ಷದ್ವೀಪದಲ್ಲಿ ಇರುವ ಏಕೈಕ ಸಂಸದರು ಕ್ರಿಮಿನಲ್ ಪ್ರಕರಣದ ಬಗ್ಗೆ ಘೋಷಿಸಿಕೊಂಡಿದ್ದಾರೆ. ಇನ್ನು ಕೇರಳದ 29( ಲೋಕಸಭಾ- ರಾಜ್ಯಸಭೆ ಸೇರಿ) ಸಂಸದರಲ್ಲಿ 23 ಅಂದರ ಶೇ 79ರಷ್ಟು, ಬಿಹಾರದ 56 ಸಂಸದರಲ್ಲಿ 41 (73%), (ಮಹಾರಾಷ್ಟ್ರದ 65 ಸಂಸದರಲ್ಲಿ ಶೇ 37 %), ತೆಲಂಗಾಣದ 24 ಸಂಸದರಲ್ಲಿ 13 (54%) ಮತ್ತು ದೆಹಲಿಯ 10 ಸಂಸದರಲ್ಲಿ 5 (50%) ರಷ್ಟು ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅಫಿಡವಿಟ್‌ನಲ್ಲಿ ದಾಖಲಿಸಿದ್ದಾರೆ.
ಗಂಭೀರ ಕ್ರಿಮಿನಲ್ ಮೊಕದ್ದಮೆ: ಬಿಹಾರದ 56 ಸಂಸದರಲ್ಲಿ 28 , ತೆಲಂಗಾಣದ 24 ಸಂಸದರಲ್ಲಿ ಒಂಬತ್ತು, ಕೇರಳದ 29 ಸಂಸದರಲ್ಲಿ 10, ಮಹಾರಾಷ್ಟ್ರದ 65 ಸಂಸದರಲ್ಲಿ 22 ಮತ್ತು ಉತ್ತರ ಪ್ರದೇಶದ 108 ಸಂಸದರಲ್ಲಿ 37 ಮಂದಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದಾರೆ.
ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಪಕ್ಷವಾರು ಹಾಲಿ ಸಂಸದರ ಮಾಹಿತಿ: ಬಿಜೆಪಿಯ 385 ಸಂಸದರಲ್ಲಿ 139 ಅಂದರೆ ಶೇ 36 ರಷ್ಟು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನ 81 ಸಂಸದರಲ್ಲಿ 43 ಶೇ 53ರಷ್ಟು, ತೃಣಮೂಲ ಕಾಂಗ್ರೆಸ್‌ನ 36 ಸಂಸದರಲ್ಲಿ 14 (39%), ರಾಷ್ಟ್ರೀಯ ಜನತಾ ದಳ ಆರ್‌ಜೆಡಿಯ 6 ಸಂಸದರಲ್ಲಿ ಐದು ಸಂಸದರು, ಸಿಪಿಐಎಂನ 8 ಸಂಸದರಲ್ಲಿ 6 ಶೇ75%ರಷ್ಟು, ಆಮ್ ಆದ್ಮಿ ಪಕ್ಷದ 11 ಸಂಸದರಲ್ಲಿ 3, YSRCP ಯ 31 ಸಂಸದರಲ್ಲಿ 13 ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ 8 ಸಂಸದರಲ್ಲಿ 3 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ ಎಂದು ಪ್ರಕಟಿಸಿಕೊಂಡಿದ್ದಾರೆ.
ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿರುವ ಪಕ್ಷವಾರು ಸಂಸದರು: ಬಿಜೆಪಿಯ 385 ಸಂಸದರಲ್ಲಿ 98 (25%), ಕಾಂಗ್ರೆಸ್‌ನ 81 ಸಂಸದರಲ್ಲಿ 26 (32%), ತೃಣಮೂಲ ಕಾಂಗ್ರೆಸ್‌ನ 36 ಸಂಸದರಲ್ಲಿ 7 (19%), 3 (50%) ) ಆರ್‌ಜೆಡಿಯ 6 ಸಂಸದರಲ್ಲಿ, ಸಿಪಿಐ(ಎಂನ 8 ಸಂಸದರಲ್ಲಿ 2 (25%), ಎಎಪಿಯ 11 ಸಂಸದರಲ್ಲಿ ಒಬ್ಬರು (9%), ವೈಎಸ್‌ಆರ್‌ಸಿಪಿಯ 31 ಸಂಸದರಲ್ಲಿ 11 (35%) ಮತ್ತು 2 (25) %) ಎನ್‌ಸಿಪಿಯ 8 ಸಂಸದರಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿರುವುದು ಕಂಡುಬಂದಿದೆ.
ಕೊಲೆ, ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣ ಎದುರಿಸುತ್ತಿರುವವರು: ಸುಮಾರು ಹನ್ನೊಂದು ಹಾಲಿ ಸಂಸದರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿ ಕೊಲೆಗೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. 32 ಹಾಲಿ ಸಂಸದರು ಸೆಕ್ಷನ್ 307 ರ ಅಡಿ ಕೊಲೆ ಯತ್ನ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಮತ್ತೊಂದು ಕಡೆ, 21 ಹಾಲಿ ಸಂಸದರು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು ತಮ್ಮ ವಿರುದ್ಧ ದಾಖಲಾಗಿವೆ ಎಂದು ಘೋಷಿಸಿಕೊಂಡಿದ್ದಾರೆ. 21 ಸಂಸದರ ಪೈಕಿ ನಾಲ್ವರು ಐಪಿಸಿ ಸೆಕ್ಷನ್ 376 ರ ಅಡಿ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾರೆ.
ಹಾಲಿ ಸಂಸದರ ಸರಾಸರಿ ಆಸ್ತಿ: ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿ ಸಂಸದರ ಆಸ್ತಿ ಸರಾಸರಿ 38.33 ಕೋಟಿ ರೂ. ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಂಸದರ ಸರಾಸರಿ ಆಸ್ತಿ ಅಂದಾಜು 50.03 ಕೋಟಿ ರೂ.ಗಳಾಗಿವೆ, ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದ ಸಂಸದರ ಆಸ್ತಿ ಸುಮಾರು 30.50 ಕೋಟಿ ರೂ.ಗಳಾಗಿವೆ
ಅತ್ಯಧಿಕ ಸರಾಸರಿ ಆಸ್ತಿ ಹೊಂದಿರುವ ಸಂಸದರಿರುವ ರಾಜ್ಯ: ಪ್ರತಿ ಸಂಸದರಿಗೆ ಅತ್ಯಧಿಕ ಸರಾಸರಿ ಆಸ್ತಿ ಹೊಂದಿರುವ ರಾಜ್ಯ ಎಂದರೆ ಅದು ತೆಲಂಗಾಣ ಇಲ್ಲಿನ 24 ಸಂಸದರ ನಿವ್ವಳ ಸರಾಸರಿ ಆಸ್ತಿ ರೂ 262.26 ಕೋಟಿ ರೂಗಳು. ಇನ್ನು ಆಂಧ್ರ ಪ್ರದೇಶ 36 ಸಂಸದರು ಸರಾಸರಿ 150.76 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ಮೂರನೇ ಸ್ಥಾನದಲ್ಲಿದ್ದು, ಇಲ್ಲಿನ 20 ಸಂಸದರು ಸರಾಸರಿ ಆಸ್ತಿ 88.94 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಕಡಿಮೆ ಸರಾಸರಿ ಆಸ್ತಿ ಹೊಂದಿರುವ ಸಂಸದರಿರುವ ರಾಜ್ಯ: ಸಂಸದರ ಕಡಿಮೆ ಸರಾಸರಿ ಆಸ್ತಿ ಹೊಂದಿರುವ ರಾಜ್ಯ ಎಂದರೆ ಅದು ಲಕ್ಷದ್ವೀಪ ಇಲ್ಲಿ ಒಬ್ಬ ಸಂಸದರಿದ್ದು, 9.38 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ತ್ರಿಪುರಾದ 3 ಸಂಸದರು ಸರಾಸರಿ 1.09 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಇನ್ನು ಮಣಿಪುರ ರಾಜ್ಯದ 3 ಸಂಸದರು ಸರಾಸರಿ 1.12 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಪಕ್ಷವಾರು ಸರಾಸರಿ ಆಸ್ತಿ: ಪ್ರಮುಖ ಪಕ್ಷಗಳ ಪೈಕಿ 385 ಬಿಜೆಪಿ ಸಂಸದರನ್ನು ಹೊಂದಿದ್ದು, ಈ ಸಂಸದರ ಸರಾಸರಿ ಆಸ್ತಿ 18.31 ಕೋಟಿ ರೂ., ಇನ್ನು ಒಟ್ಟಾರೆ ಎರಡೂ ಸದನಗಳಲ್ಲಿ 81 ಕಾಂಗ್ರೆಸ್ ಸಂಸದರಿದ್ದು, ಇವರ ಸರಾಸರಿ ಆಸ್ತಿ 39.12 ಕೋಟಿ ರೂ. ಆಗಿದೆ, 36 ತೃಣಮೂಲ ಕಾಂಗ್ರೆಸ್ ಸಂಸದರ ಸರಾಸರಿ ಆಸ್ತಿ 8.72 ಕೋಟಿ ರೂ ಆದರೆ, 31 YSRCP ಸಂಸದರು ಸರಾಸರಿ ಆಸ್ತಿ ರೂ. 153.76 ಕೋಟಿ, 16 BRS ಸಂಸದರು ಸರಾಸರಿ ಆಸ್ತಿ ರೂ. 383.51 ಕೋಟಿ, ಇನ್ನು 8 ಸಂಸದರನ್ನು ಹೊಂದಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸಂಸದರು ರೂ. 30.11 ಕೋಟಿ ಮೌಲ್ಯದ ಸರಾಸರಿ ಆಸ್ತಿ ಹೊಂದಿದ್ದಾರೆ. ಇನ್ನು 11 ಆಮ್ ಆದ್ಮಿ ಪಕ್ಷದ ಸಂಸದರು ಸುಮಾರು 119.84 ಕೋಟಿ. ರೂ ಮೌಲ್ಯದ ಸರಾಸರಿ ಆಸ್ತಿ ಹೊಂದಿದ್ದಾರೆ.
ಬಿಲಿಯನೇರ್ ಸಂಸದರು: 763 ಸಂಸದರ ಪೈಕಿ 53 ಸಂಸದರು ಅಂದರೆ ಶೇ 7ರಷ್ಟು ಮಂದಿ ಬಿಲಿಯನೇರ್‌ಗಳಿದ್ದಾರೆ. ತೆಲಂಗಾಣದ 24 ಸಂಸದರಲ್ಲಿ ಏಳು ಅಂದರೆ ಶೇ 29ರಷ್ಟು, ಆಂಧ್ರಪ್ರದೇಶದ 36 ಸಂಸದರಲ್ಲಿ 9, ದೆಹಲಿಯ 10 ಸಂಸದರಲ್ಲಿ ಇಬ್ಬರು, ಪಂಜಾಬ್‌ನ 20 ಸಂಸದರಲ್ಲಿ 4 (20%), 1 ಉತ್ತರಾಖಂಡದ 8 ಸಂಸದರಲ್ಲಿ (13%), ಮಹಾರಾಷ್ಟ್ರದ 65 ಸಂಸದರಲ್ಲಿ 6 (9%) ಮತ್ತು ಕರ್ನಾಟಕದ 39 ಸಂಸದರಲ್ಲಿ 3 (8%) 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ
ಇದನ್ನು ಓದಿ: ರಾಜ್ಯಸಭೆಯ ಅತ್ಯಂತ ಶ್ರೀಮಂತ ಕುಬೇರರಿವರು: 225 ಸದಸ್ಯರ ಪೈಕಿ ಇವರಿಬ್ಬರಲ್ಲೇ ಇದೆ ಶೇ.43ರಷ್ಟು ಆಸ್ತಿ..!