ETV Bharat / bharat

ಸಿಯಾಚಿನ್​: ಸೇನೆಯ ಟೆಂಟ್​ಗಳಲ್ಲಿ ಅಗ್ನಿ ದುರಂತ.. ಸೇನಾಧಿಕಾರಿ ಸಾವು, ಆರು ಯೋಧರಿಗೆ ಗಾಯ - ಶಾರ್ಟ್ ಸರ್ಕ್ಯೂ

ಭಾರತೀಯ ಸೇನೆಯ ಟೆಂಟ್​ಗಳಲ್ಲಿ ಬೆಂಕಿ ಕಾಣಿಸಿಕೊಂಡು ಸೇನಾಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಲಡಾಖ್‌ನ ಸಿಯಾಚಿನ್​ನಲ್ಲಿ ನಡೆದಿದೆ.

army-officer-killed-soldiers-injured-in-fire-accident-at-siachen
ಸಿಯಾಚಿನ್​: ಸೇನೆಯ ಟೆಂಟ್​ಗಳಲ್ಲಿ ಅಗ್ನಿ ದುರಂತ... ಸೇನಾಧಿಕಾರಿ ಸಾವು, ಆರು ಯೋಧರಿಗೆ ಗಾಯ
author img

By

Published : Jul 19, 2023, 7:33 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಸಿಯಾಚಿನ್​ನಲ್ಲಿ ಬುಧವಾರ ಭಾರಿ ದುರಂತ ಸಂಭವಿಸಿದೆ. ಭಾರತೀಯ ಸೇನೆಯ ಮದ್ದು ಗುಂಡುಗಳ ಬಂಕರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ ಉಂಟಾದ ಪರಿಣಾಮ ಹಲವಾರು ಟೆಂಟ್​ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ದುರ್ಘಟನೆಯಲ್ಲಿ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಇತರ ಆರು ಸೈನಿಕರು ಗಾಯಗೊಂಡಿದ್ದಾರೆ.

ಸಿಯಾಚಿನ್​ ಹಿಮನದಿಯಲ್ಲಿ ಇಂದು ಬೆಳಗಿನ 3.30ರ ಸುಮಾರಿಗೆ ಭಾರತೀಯ ಸೇನೆಯ ಹಲವಾರು ಟೆಂಟ್​ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮದ್ದುಗುಂಡುಗಳ ಬಂಕರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಟೆಂಟ್​ಗಳಲ್ಲಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ದುರದೃಷ್ಟಕರ ಘಟನೆಯಲ್ಲಿ ರೆಜಿಮೆಂಟ್ ಮೆಡಿಕಲ್ ಆಫೀಸರ್ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಎಂಬುವವರು ಗಂಭೀರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಜೊತೆಗೆ ಆರು ಯೋಧರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರನ್ನು ಚಿಕಿತ್ಸೆಗಾಗಿ ಚಂಡೀಗಢಕ್ಕೆ ರವಾನಿಸಲಾಗಿದೆ ಎಂಬ ಸೇನಾ ಮೂಲಗಳು ತಿಳಿಸಿವೆ.

ಈ ಘಟನೆಯ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಪಿಆರ್‌ಒ, ಲೇಹ್ ಲೆಫ್ಟಿನೆಂಟ್ ಕರ್ನಲ್ ಪಿಎಸ್ ಸಿಧು, ಇಂದು ಸಿಯಾಚಿನ್ ಹಿಮನದಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಅಧಿಕಾರಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ಆರು ಯೋಧರು ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು ಸೈನಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಚಂಡೀಗಢದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ರೆಜಿಮೆಂಟ್ ಮೆಡಿಕಲ್ ಆಫೀಸರ್ ಆಗಿದ್ದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದರು. ಮೂವರು ಗಾಯಾಳು ಸಿಬ್ಬಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

2011ರಲ್ಲಿ ಸಿಯಾಚಿನ್​ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇದರಲ್ಲಿ ಇಬ್ಬರು ಲೆಫ್ಟಿನೆಂಟ್ ಶ್ರೇಣಿಯ ಅಧಿಕಾರಿಗಳು ಸಾವನ್ನಪ್ಪಿದ್ದರು ಮತ್ತು ನಾಲ್ವರು ಸೈನಿಕರು ಗಾಯಗೊಂಡಿದ್ದರು. 71 ಕಿಲೋಮೀಟರ್ ಉದ್ದದ ವಿಶ್ವದ ಅತಿದೊಡ್ಡ ಹಿಮನದಿಗಳಲ್ಲಿ ಒಂದಾದ ಸಿಯಾಚಿನ್ ಗ್ಲೇಸಿಯರ್ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿದೆ.

ಸಿಯಾಚಿನ್‌ನಲ್ಲಿ ಹವಾಮಾನ ಪರಿಸ್ಥಿತಿದಿಂದಾಗಿ ಭಾರತೀಯ ಸೇನೆಯು ಮೂರು ತಿಂಗಳ ಅವಧಿಗೆ ಮಾತ್ರ ಸೈನಿಕರನ್ನು ಬದಲಾಯಿಸುತ್ತದೆ. ಇಲ್ಲಿ ಗುಂಡಿನ ಚಕಮಕಿಗಳಿಗಿಂತ ಹೆಚ್ಚು ಸೈನಿಕರು ಪ್ರತಿಕೂಲ ಹವಾಮಾನ ಮತ್ತು ಹಿಮಕುಸಿತ ಪೀಡಿತದ ಕಾರಣದಿಂದ ಮೃತಪಟ್ಟಡುತ್ತಾರೆ. ಕಳೆದ 37 ವರ್ಷಗಳಲ್ಲಿ ಸಿಯಾಚಿನ್‌ನಲ್ಲಿ ಭೂಪ್ರದೇಶ, ಹವಾಮಾನ ವೈಪರೀತ್ಯ, ಶತ್ರುಗಳ ಗುಂಡಿನ ದಾಳಿ ಮತ್ತು ಇತರ ಕಾರಣ ಪರಿಣಾಮವಾಗಿ 800ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳುತ್ತವೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಕುಪ್ವಾರದಲ್ಲಿ ಇಬ್ಬರು ಉಗ್ರರ ಹತ್ಯೆಗೈದ ಸೇನೆ; ಅಪಾರ ಶಸ್ತ್ರಾಸ್ತ್ರ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.