ಜಮ್ಮು: ಉತ್ತರಾಖಂಡದಲ್ಲಿ ಭೂಕುಸಿತ ಉಂಟಾಗಿ ಗುಡ್ಡದಿಂದ ಉರುಳಿದ ದೊಡ್ಡ ಬಂಡೆ ಬಿದ್ದು ಯೋಧ ಹುತಾತ್ಮರಾಗಿ, ಇನ್ನಿಬ್ಬರು ಗಾಯಗೊಂಡಿದ್ದಾರೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಭಾರತ - ಚೀನಾ ಗಡಿಯ ಬಳಿ ಈ ದುರ್ಘಟನೆ ನಡೆದಿದೆ.
ಜಮ್ಮು ಕಾಶ್ಮೀರದ ಸುಖಜಿಂದರ್ ಸಿಂಗ್ ಹುತಾತ್ಮ ಯೋಧ. ಇವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ರವಾನಿಸಲಾಗುತ್ತಿದ್ದು, ಯೋಧನ ಸಾವಿನ ಸುದ್ದಿ ಹುಟ್ಟೂರಿನಲ್ಲಿ ತಳಮಳ ಉಂಟು ಮಾಡಿದೆ.
ರಕ್ಷಣಾ ಮೂಲಗಳ ಪ್ರಕಾರ, ಭಾರತ - ಚೀನಾ ಗಡಿಯಲ್ಲಿ ಭೂಕುಸಿತ ಉಂಟಾಗಿದೆ. ಈ ವೇಳೆ, ಗುಡ್ಡದಿಂದ ದೊಡ್ಡ ಬಂಡೆಯೊಂದ ಉರುಳಿ, ಅದೇ ಮಾರ್ಗದಲ್ಲಿ ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಬಿದ್ದಿದೆ. ಇದರಿಂದ ಸುಖಜಿಂದರ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಓದಿ: ಹಾವು ಕಚ್ಚಿ ಮೃತಪಟ್ಟ ಬಾಲಕ.. ಮಾಂತ್ರಿಕನ ಮಾತು ಕೇಳಿ ಹೂತಿದ್ದ ಶವ ತೆಗೆದ ಜನರು