ಅಮೃತಸರ, ಪಂಜಾಬ್: ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್ನ ಐಎಸ್ಐ ಏಜೆಂಟ್ಗಳೊಂದಿಗೆ ಸಂಪರ್ಕದಲ್ಲಿದ್ದ ಯೋಧನೋರ್ವನನ್ನು ಬಂಧಿಸಿ, ಬೇಹುಗಾರಿಕಾ ಜಾಲವನ್ನು ಭೇದಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಗುಜರಾತ್ ನಿವಾಸಿಯಾದ ಯೋಧ ಕೃನಾಲ್ ಕುಮಾರ್ ಬರಿಯಾ ಎಂಬಾತನನ್ನು ಸ್ಟೇಟ್ ಸ್ಪೆಷಲ್ ಆಪರೇಷನ್ ಸೆಲ್ ಸಿಬ್ಬಂದಿ ಅಮೃತಸರದಲ್ಲಿ ಬಂಧಿಸಿದ್ದಾರೆ. ಕೃನಾಲ್ ಫಿರೋಜ್ಪುರ ಕಂಟೋನ್ಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದನು ಎಂದು ತಿಳಿದುಬಂದಿದೆ.
ಐಟಿ ಸೆಲ್‌ನಲ್ಲಿ ಸೇವೆಗೆ ನಿಯೋಜನೆಯಾಗಿದ್ದ ಕೃನಾಲ್ ಅದರ ಲಾಭ ಪಡೆದುಕೊಂಡು, ಅತ್ಯಂತ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದನು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ ಹಣವನ್ನೂ ಆತ ಪಡೆಯುತ್ತಿದ್ದನು ಎಂದು ಮೂಲಗಳು ತಿಳಿಸಿದೆ.
ಐಟಿ ಸೆಲ್‌ನಲ್ಲಿ ತನ್ನ ನಿಯೋಜನೆಯ ಲಾಭವನ್ನು ಪಡೆದುಕೊಂಡು, ಅವನು ತನ್ನ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳಿಗೆ ಸೇನೆಯ ಬಗ್ಗೆ ಅತ್ಯಂತ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದನು. ಅದಕ್ಕಾಗಿ ಅವರಿಗೆ ಹಣ ಪಾವತಿಸಲಾಗಿದೆ ಎಂದು ಅವರು ಹೇಳಿದರು.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಕೃನಾಲ್ 2020ರಲ್ಲಿ ಪಾಕಿಸ್ತಾನದ ಗುಪ್ತಚರ ಇಲಾಖೆಯ ಮಹಿಳಾ ಅಧಿಕಾರಿಯಾದ ಸಿದ್ರಾ ಖಾನ್ ಅವರೊಂದಿಗೆ ಫೇಸ್‌ಬುಕ್ ಮೂಲಕ ಸಂಪರ್ಕಕ್ಕೆ ಬಂದಿರುವುದು ಕಂಡುಬಂದಿದೆ. ನಂತರ ವಾಟ್ಸಪ್ ಮತ್ತು ಇತರ ಅಪ್ಲಿಕೇಷನ್ಗಳ ಮೂಲಕವೂ ಕೂಡಾ ಇಬ್ಬರೂ ಸಂಪರ್ಕದಲ್ಲಿರುವುದು ತಿಳಿದಿಬಂದಿದೆ.
ಇದನ್ನೂ ಓದಿ: ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ, ಮನೆಗೂ ಹಾನಿ