ETV Bharat / bharat

ಮಣಿಪುರದಲ್ಲಿ ಹಿಂಸಾಚಾರ: 328 ಕುಕಿ ಗ್ರಾಮಸ್ಥರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಸೇನೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ಮಣಿಪುರದಲ್ಲಿ ನಾಗರಿಕರನ್ನು ರಕ್ಷಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್ ತಮ್ಮ ಪ್ರಯತ್ನಗಳನ್ನು ನಡೆಸುತ್ತಿವೆ.

ಮಣಿಪುರದಲ್ಲಿ ಹಿಂಸಾಚಾರ
ಮಣಿಪುರದಲ್ಲಿ ಹಿಂಸಾಚಾರ
author img

By

Published : May 29, 2023, 9:57 PM IST

ಮಣಿಪುರ : ಮಣಿಪುರದ ಹಲವು ಭಾಗಗಳಲ್ಲಿ ಹಿಂಸಾಚಾರದ ಜೊತೆಗೆ ಮತ್ತಷ್ಟು ಇದೀಗ ಹೊಸ ಘರ್ಷಣೆಗಳು ನಡೆದಿವೆ. ಹೀಗಾಗಿ ಭಾರತೀಯ ಸೇನೆಯು ವಿವಿಧ ಸ್ಥಳಗಳಲ್ಲಿ ನಾಗರಿಕರ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, 328 ಕುಕಿ ಗ್ರಾಮಸ್ಥರನ್ನು ಸುಗ್ನುವಿನಿಂದ ಸಾಜಿಕ್ ಟಂಪಕ್‌ಗೆ ಭಾರತೀಯ ಸೇನೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ.

ಮಾನವ ರಹಿತ ವೈಮಾನಿಕ ವಾಹನಗಳು ಮತ್ತು ಗಣಿ ಸಂರಕ್ಷಿತ ವಾಹನಗಳೊಂದಿಗೆ ಸೇನೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಸೇನೆಯು ಈ ಕಾರ್ಯಾಚರಣೆಯ ಮೂಲಕ ಕುಕಿ ಗ್ರಾಮಸ್ಥರನ್ನು ರಕ್ಷಿಸಿದೆ. ಮೇ 28 ರಂದು ಕಕ್ಚಿಂಗ್ ಜಿಲ್ಲೆಯ ಚುಗ್ನು ಮತ್ತು ಚೆರೌ ಗ್ರಾಮಗಳಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗಳಲ್ಲಿ ಅನೇಕ ಜನರು ಸಂಕಷ್ಟಕ್ಕೆ ಸಿಲುಕಿ ತಮ್ಮ ಅನೇಕ ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಣಿಪುರದ ಮೈತೆ ಮತ್ತು ಕುಕಿ ಸಮುದಾಯಗಳನ್ನು ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.

ಶಸ್ತ್ರಸಜ್ಜಿತ 3 ದಾಳಿಕೋರರ ಬಂಧನ
ಶಸ್ತ್ರಸಜ್ಜಿತ 3 ದಾಳಿಕೋರರ ಬಂಧನ

ಮತ್ತೊಂದೆಡೆ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪೊಲೀಸ್, ರಾಜ್ಯ ಆಡಳಿತ ಮತ್ತು ವಿವಿಧ ಸಂಘಟನೆಗಳ ಸಮನ್ವಯದಲ್ಲಿ ಚೆರುವಿನಿಂದ ಸುಮಾರು 2,000 ನಾಗರಿಕರನ್ನು ಪಂಗಲ್ಟಾಬಿ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಿದೆ. ಅಸ್ಸಾಂ ರೈಫಲ್ಸ್‌ನ ರಕ್ಷಣೆಯಲ್ಲಿ ವಾಹನಗಳ ಮೂಲಕ ಅವರನ್ನು ಸ್ಥಳಾಂತರಿಸಲಾಗಿದ್ದು, ವರ್ಗಾವಣೆಯ ಸಮಯದಲ್ಲಿ ಮಾನವ ರಹಿತ ವೈಮಾನಿಕ ಹಾರಾಟದ ಮೂಲಕ ವಾಹನಗಳನ್ನು ತಪಾಸಣೆ ಮಾಡಲಾಗಿದೆ. ಹಾಗೂ ಸ್ಥಳಾಂತರ ಮಾಡಿರುವವರಲ್ಲಿಏನಾದರೂ ವೈದ್ಯರ ಆರೋಗ್ಯ ತಪಾಸಣೆ ಅಗತ್ಯವಿದ್ದವರಿಗೂ ಎಲ್ಲ ವ್ಯವಸ್ಥೆ ಮಾಡಲಾಗಿದೆ.

ಶಸ್ತ್ರಸಜ್ಜಿತ 3 ದಾಳಿಕೋರರ ಬಂಧನ : ಇಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡುವ ಮುನ್ನ ನಿನ್ನೆ (ಭಾನುವಾರ) ರಾತ್ರಿಯೇ ಮೂವರು ದಾಳಿಕೋರರನ್ನು ಸೇನೆ ಬಂಧಿಸಿದೆ. ದಾಳಿಕೋರರಿಂದ ಕೆಲವೊಂದು ನಿಯತಕಾಲಿಕೆ, INCAS ರೈಫಲ್, 5.56 ಎಂಎಂ ಮದ್ದುಗುಂಡುಗಳ 60 ಸುತ್ತುಗಳು, ಚೀನಾದ ಕೈ ಗ್ರೆನೇಡ್ ಮತ್ತು ಡಿಟೋನೇಟರ್ ಅನ್ನು ಸೇನೆ ವಶಪಡಿಸಿಕೊಂಡಿದೆ.

ಇದಕ್ಕೂ ಮೊದಲು ಇಂಪಾಲ್​ ಪೂರ್ವ ಜಿಲ್ಲೆಯ ಸಿಟಿ ಕನ್ವೆನ್ಷನ್ ಸೆಂಟರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಗುಪ್ತಚರ ಇಲಾಖೆಯಿಂದ ಸೇನೆಗೆ ಸುಳಿವು ಸಿಕ್ಕಿದೆ. ಈ ಮಾಹಿತಿ ಮೇರೆಗೆ ಸಿಟಿ ಕನ್ವೆನ್ಷನ್ ಸೆಂಟರ್ ಪ್ರದೇಶದಲ್ಲಿ ಸೇನೆ ಬಿಗಿ ಭದ್ರತೆ ಕೈಗೊಂಡು, ಆ ಪ್ರದೇಶದ ವಿವಿಧ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸಹ ಸ್ಥಾಪಿಸಿದ್ದರು.

ಈ ವೇಳೆ ಚೆಕ್‌ಪೋಸ್ಟ್‌ ಬಳಿ ನಾಲ್ವರು ಪ್ರಯಾಣಿಕರಿದ್ದ ಅನುಮಾನಾಸ್ಪದ ವಾಹನವೊಂದನ್ನು ಸೇನೆ ಗುರುತಿಸಿತ್ತು. ಇದರಿಂದ ಗಾಬರಿಗೊಂಡ ದಾಳಿಕೋರರು ವಾಹನದಿಂದ ಇಳಿದು ಪರಾರಿಯಾಗಲು ಯತ್ನಿಸಿದರು. ಆದರೆ, ಸೇನೆಯು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಮೂವರು ದಾಳಿಕೋರರನ್ನು ಮತ್ತು ವಶ ಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ಮಣಿಪುರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದೀಗ ಘಟನಾ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೇನೆ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ : ಮಣಿಪುರಕ್ಕೆ ಇಂದು ಅಮಿತ್ ಶಾ ಭೇಟಿ: ಜನಾಂಗೀಯ ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.