ETV Bharat / bharat

ಜಮ್ಮು ಕಾಶ್ಮೀರ: ಎನ್​ಕೌಂಟರ್‌ ವೇಳೆ ನಾಪತ್ತೆಯಾಗಿದ್ದ ಯೋಧ ಶವವಾಗಿ ಪತ್ತೆ - ಗಾಯ ಅಥವಾ ಪ್ರಾಣಹಾನಿ

ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಯೋಧನ ಮೃತದೇಹ ಪತ್ತೆಯಾಗಿದೆ. ಇನ್ನೊಂದೆಡೆ, ಸಿಆರ್​ಪಿಎಫ್​ ವಾಹನದ ಮೇಲೆ ಶಸ್ತ್ರಸಜ್ಜಿತ ಭಯೋತ್ಪಾದಕ ದಾಳಿ ನಡೆಸಿದ್ದಾನೆ.

Armed terrorists attack CRPF vehicle
ಸಿಆರ್​ಪಿಎಫ್​ ವಾಹನದ ಮೇಲೆ ಶಸ್ತ್ರಸಜ್ಜಿತ ಭಯೋತ್ಪಾದಕರ ದಾಳಿ
author img

By ANI

Published : Sep 19, 2023, 6:57 AM IST

Updated : Sep 19, 2023, 10:27 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಳೆದ ಆರು ದಿನಗಳಿಂದ ಅನಂತ್​ನಾಗ್​ ಜಿಲ್ಲೆಯ ಕೋಕರ್​ನಾಗ್​ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಭಯೋತ್ಪಾದಕರ ನಡುವೆ ನಡೆಯುತ್ತಿರುವ ಎನ್‌ಕೌಂಟರ್​ನಲ್ಲಿ ಸೆಪ್ಟೆಂಬರ್​ 13ರಂದು ನಾಪತ್ತೆಯಾಗಿದ್ದ ಪ್ರದೀಪ್​ ಸಿಂಗ್​ (27) ಎಂಬ ಯೋಧ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಇವರು ಉಗ್ರ ದಮನ ಜಂಟಿ ಕಾರ್ಯಾಚರಣೆಯ ಭಾಗವಾಗಿದ್ದರು. ಸೋಮವಾರ ಸಂಜೆ 5 ಗಂಟೆಗೆ ಮೃತದೇಹ ದೊರೆತಿದೆ.

ಶಸ್ತ್ರಸಜ್ಜಿತ ಭಯೋತ್ಪಾದಕನಿಂದ ದಾಳಿ: ಶಸ್ತ್ರಸಜ್ಜಿತ ಭಯೋತ್ಪಾದಕನೊಬ್ಬ ಶ್ರೀನಗರ ಜಿಲ್ಲೆಯ ಖನ್ಯಾರ್​ ಪ್ರದೇಶದಲ್ಲಿ ಸಿಆರ್​ಪಿಎಫ್​ನ ಬುಲೆಟ್​ ಪ್ರೂಫ್​ ವಾಹನವೊಂದರ ಮೇಲೆ ದಾಳಿ ನಡೆಸಿದ್ದಾನೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ದಾಳಿಯನ್ನು ಹಿಮ್ಮೆಟ್ಟಿಸಿದರು ಎಂದು ಶ್ರೀನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಶ್ರೀನಗರ ಪೊಲೀಸರು ಅಧಿಕೃತ ಎಕ್ಸ್​ ಖಾತೆಯಲ್ಲಿ (ಹಿಂದಿನ ಟ್ವಿಟರ್​) ಈ ಕುರಿತು ಪೋಸ್ಟ್​ ಹಂಚಿಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿ ವರದಿಯಾಗಿಲ್ಲ. ಸಿಆರ್‌ಪಿಎಫ್​ ವಾಹನದ ಮೇಲೆ ಗುಂಡು ಹಾರಿಸಿದ ಬಳಿಕ ಭಯೋತ್ಪಾದಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

7ನೇ ದಿನವೂ ಮುಂದುವರಿದ ಕಾರ್ಯಾಚರಣೆ: ಸೆಪ್ಟೆಂಬರ್​​ 13 ರಂದು ಸಂಜೆ ಭಾರತೀಯ ಸೇನೆ, ಪೊಲೀಸ್​ ಪಡೆ, ಅರೆಸೇನಾ ಪಡೆ ಹಾಗೂ ಸಿಆರ್​ಪಿಎಫ್​ ಜಂಟಿಯಾಗಿ ಭಯೋತ್ಪಾದನಾ ವಿರೋಧಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಅನಂತ್​ನಾಗ್​ ಜಿಲ್ಲೆಯ ಕೋಕರ್​ನಾಗ್​ ಹಾಗೂ ಗಡೂಲ್​ ಗುಡ್ಡಕಾಡು ಪ್ರದೇಶಗಳಲ್ಲಿ ಎರಡರಿಂದ ಮೂವರು ಉಗ್ರರು ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿ ಆಧಾರದಲ್ಲಿ ಭದ್ರತಾ ಪಡೆ ಎನ್​ಕೌಂಟರ್ ಪ್ರಾರಂಭಿಸಿತ್ತು.

ಭಯೋತ್ಪಾದಕರು ಹಾಗೂ ಭದ್ರತಾ ಪಡೆಯ ನಡುವಿನ ಎನ್​ಕೌಂಟರ್​ನಲ್ಲಿ ಕರ್ನಲ್​ ಮನ್​ಪ್ರೀತ್​ ಸಿಂಗ್​, 19 ರಾಷ್ಟ್ರೀಯ ರೈಫಲ್ಸ್​ನ ಮೇಜರ್​ ಆಶಿಶ್​ ಧೋಂಚಕ್​ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಇಲಾಖೆಯ ಡಿಎಸ್​ಪಿ ಹುಮಾಯೂನ್​ ಭಟ್​ ಹುತಾತ್ಮರಾಗಿದ್ದರು. ಮೊದಲ ದಿನ ಎನ್​ಕೌಂಟರ್​ನಲ್ಲಿ ನಾಪತ್ತೆಯಾಗಿದ್ದ ಒಬ್ಬ ಯೋಧ ನಿನ್ನೆ ಶವವಾಗಿ ಪತ್ತೆಯಾಗಿದ್ದಾರೆ. ಭಯೋತ್ಪಾದಕರು ಅಡಗಿರುವ ಕಾಡನ್ನು ಭದ್ರತಾ ಪಡೆ ಸುತ್ತುವರೆದಿದ್ದು, ವ್ಯಾಪಕ ಬಂದೋವಸ್ತ್​ ಮಾಡಲಾಗಿದೆ. ಕಳೆದ ಆರು ದಿನಗಳಿಂದ ನಡೆಯುತ್ತಿರುವ ಎನ್​ಕೌಂಟರ್​ನಲ್ಲಿ ಇಂದೂ ಮುಂದುವರಿದಿದ್ದು, ಉಗ್ರರಿಂದ ಯಾವುದೇ ಗುಂಡಿನ ದಾಳಿ ನಡೆಯುತ್ತಿಲ್ಲವಾದ್ದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿದೆ.

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣದ ಹತ್ಲಂಗಾ ಫಾರ್ವರ್ಡ್​ ಪ್ರದೇಶದಲ್ಲಿಯೂ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಮೂರು ದಿನಗಳ ಹಿಂದೆ ಎನ್​ಕೌಂಟರ್​ ನಡೆದಿದ್ದು, ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಉರಿ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಮೂವರನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು.

ಇದನ್ನೂ ಓದಿ: ಅನಂತ್​ನಾಗ್​ ಜಿಲ್ಲೆಯಲ್ಲಿ 6 ದಿನವಾದರೂ ಮುಗಿಯದ ಉಗ್ರ ದಮನ ಕಾರ್ಯಾಚರಣೆ: ಈ ಕಾರಣಗಳಿಗಾಗಿ ವಿಳಂಬ..

Last Updated : Sep 19, 2023, 10:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.