ಪುಣೆ (ಮಹಾರಾಷ್ಟ್ರ): ಅನೇಕ ರಂಗಗಳಿಂದ ಹೊರಹೊಮ್ಮುವ ಹೈಬ್ರಿಡ್ ಬೆದರಿಕೆಗಳಿಗೆ ಸಶಸ್ತ್ರ ಪಡೆಗಳು ಸಿದ್ಧವಾಗಬೇಕಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್.ಭದೌರಿಯಾ ಹೇಳಿದ್ದಾರೆ.
ಉನ್ನತ ಮಟ್ಟದ ಜ್ಞಾನ, ಸಮರ್ಪಣೆ, ಬದ್ಧತೆ, ತ್ಯಾಗ ಮತ್ತು ನಾಯಕತ್ವವನ್ನು ಎಲ್ಲ ಹಂತಗಳಲ್ಲಿಯೂ ಹೊಂದಿ ಬಹುಮುಖಿಗಳಾಬೇಕು ಎಂದು ಅವರು ಹೇಳಿದ್ದಾರೆ.
ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ನಡೆದ 139ನೇ ಕೋರ್ಸ್‌ನ 217 ಕೆಡೆಟ್‌ಗಳಿಗೆ ಪಾಸಿಂಗ್ ಔಟ್ ಪರೇಡ್‌ನಲ್ಲಿ ಅವರು ಮಾತನಾಡಿದರು.
ಇಂದು ಪ್ರದರ್ಶಿಸಲಾದ ಅತ್ಯುತ್ತಮ ಗುಣಮಟ್ಟದ ಮೆರವಣಿಗೆ "ಈ ಮಹಾನ್ ಸಂಸ್ಥೆಯ ನೀತಿಗೆ ಉದಾಹರಣೆಯಾಗಿದೆ" ಎಂದು ಇದೇ ವೇಳೆ ಕೆಡೆಟ್ಗಳ ಬೆನ್ನುತಟ್ಟಿದರು.