ETV Bharat / bharat

ವಿದ್ಯಾರ್ಥಿಗಳನ್ನು ಕೋಚಿಂಗ್​ ಕೇಂದ್ರಗಳಿಗೆ ಕಳುಹಿಸುವ ಮುನ್ನ ಬೇಕಿದೆ ಸಾಮರ್ಥ್ಯ ಪರೀಕ್ಷೆ - ವಿದ್ಯಾರ್ಥಿಗಳ ಆತ್ಮಹತ್ಯೆ ಆತಂಕ

ಕೋಚಿಂಗ್​ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಕಳವಳ ಮೂಡಿಸುತ್ತಿವೆ.

ವಿದ್ಯಾರ್ಥಿಗಳನ್ನು ಕೋಚಿಂಗ್​ ಕೇಂದ್ರಗಳಿಗೆ ಕಳುಹಿಸುವ ಮುನ್ನ ಅವಶ್ಯಕವಾಗಿ ಬೇಕಾಗಿದೆ ಸಾಮರ್ಥ್ಯ ಪರೀಕ್ಷೆ
aptitude-test-is-necessary-before-sending-students-to-coaching-centers
author img

By

Published : Dec 30, 2022, 7:46 PM IST

ಕೋಟಾ (ರಾಜಸ್ಥಾನ): ಕೋಚಿಂಗ್ ಹಬ್​ ಆಗಿರುವ ಕೋಟಾದಲ್ಲಿ ಕಳೆದೊಂದು ತಿಂಗಳಲ್ಲಿ ನಾಲ್ಕು ವಿದ್ಯಾರ್ಥಿಗಳ ಆತ್ಮಹತ್ಯೆ ಆತಂಕ ಮೂಡಿಸಿದೆ. ಅನೇಕ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಜೆಇಇ ನೀಟ್​ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಕಳುಹಿಸುತ್ತಾರೆ. ಶೈಕ್ಷಣಿಕ ಸೇರಿದಂತೆ ಸಾಮಾಜಿಕ ಒತ್ತಡದಿಂದ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದು ಶೈಕ್ಷಣಿಕ ಮತ್ತು ಮಾನಸಿಕ ತಜ್ಞರಲ್ಲಿ ಕಳವಳ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಇಲ್ಲಿಗೆ ಕಳುಹಿಸುವ ಪೋಷಕರು ತಮ್ಮ ಮಕ್ಕಳ ಸಾಮರ್ಥ್ಯದ ಕುರಿತು ಮೌಲ್ಯಮಾಪನ ನಡೆಸಬೇಕು ಎಂದಿದ್ದಾರೆ. ಅಲ್ಲದೇ, ಮಕ್ಕಳನ್ನು ಮಾನಸಿಕವಾಗಿ ಮಕ್ಕಳನ್ನು ಸಿದ್ಧಗೊಳಿಸಬೇಕು. ದೈನಂದಿನ ಕೆಲಸಗಳನ್ನು ತಾವೇ ನಿರ್ವಹಣೆ ಮಾಡುವಂತೆ ಮಕ್ಕಳಿಗೆ ತರಬೇತಿ ನೀಡಬೇಕು. ಕೋಚಿಂಗ್​​ ಸಿದ್ದತೆ ತರಬೇತಿ ಕುರಿತು ಕೂಡ ಅವರನ್ನು ಮಾನಸಿಕವಾಗಿ ತಯಾರು ಮಾಡಬೇಕು ಎನ್ನುತ್ತಾರೆ. ​

ಮಕ್ಕಳನ್ನು ಡಾಕ್ಟರ್​ ಮತ್ತು ಇಂಜಿನಿಯರ್​ ಆಗಬೇಕು ಎಂದು ತಳ್ಳುವ ಮೊದಲು, ಪೋಷಕರು ಮಕ್ಕಳಿಗೆ ಸಾಮರ್ಥ್ಯದ​ ಪರೀಕ್ಷೆ ನಡೆಸಿ ಅವರಿಗೆ ಯಾವುದು ಬೆಸ್ಟ್​ ಎಂಬುದನ್ನು ನೋಡಬೇಕು. ಪೋಷಕರು ಕೋಚಿಂಗ್​ ಕುರಿತು ಶೂನ್ಯ ಸಿದ್ದತೆಯೊಂದಿಗೆ ಕೇವಲ ಆರ್ಥಿಕ ಸಹಾಯವನ್ನು ಮಾಡಿ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಾರೆ ಎಂದು ಕೋಟಾದ ನ್ಯೂ ಮೆಡಿಕಲ್​ ಕಾಲೇಜ್​ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ.ಚಂದ್ರ ಶೇಖರ್​ ಸುಶೀಲ್​ ತಿಳಿಸಿದ್ದಾರೆ. 2022ರಲ್ಲಿ ದಾಖಲೆ ಅನುಸಾರ 2 ಲಕ್ಷ ವಿದ್ಯಾರ್ಥಿಗಳು ಕೋಟಾದ ವಿವಿಧ ಕೋಚಿಂಗ್​ ಸೆಂಟರ್​ಗಳಿಗೆ ದಾಖಲಾತಿ ಪಡೆದಿದ್ದಾರೆ. ಶಿಕ್ಷಣದ ಒತ್ತಡದಿಂದ ಕನಿಷ್ಠ 14 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಡಿಸೆಂಬರ್​ 11ರಂದು ಕೇವಲ 12 ಅವಧಿಯಲ್ಲಿ ಮೂರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಶೈಕ್ಷಣಿಕ ಒತ್ತಡ. ವೇಗದ ಪಠ್ಯಕ್ರಮ, ಕೌಟುಂಬಿಕ ನಿರೀಕ್ಷೆಗಳು ಮತ್ತು ಸಾಮಾಜಿಕ ಒತ್ತಡವೇ ಆಗಿದ್ದು, ಇದು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ತಜ್ಞರಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ತಯಾರಿ ಅಗತ್ಯ: ವಿದ್ಯಾರ್ಥಿಗಳ ಸಾವಿನಲ್ಲಿ ಕೋಚಿಂಗ್​ ಕೇಂದ್ರಗಳ ಪಾತ್ರ ಪ್ರಮುಖವಾಗಿದೆ ಎಂಬುದನ್ನು ನಾನು ನಂಬುವುದಿಲ್ಲ. ಜೆಇಇ ಮತ್ತು ನೀಟ್​ನಂಹ ಕಷ್ಟದ ಪರೀಕ್ಷೆಗೆ ನಾವು ದಾಖಲಾಗುತ್ತೇವೆ. ಈ ವೇಳೆ ಕಲಿಕೆ ಮತ್ತು ಶಿಕ್ಷಣ ಎರಡೂ ಅದೇ ಮಟ್ಟದಲ್ಲಿ ಇರಬೇಕು. ಕೋಚಿಂಗ್​ ಕೇಂದ್ರಗಳಿಗೆ ಕಳುಹಿಸುವ ಮುನ್ನ ಸಾಮರ್ಥ್ಯದ​ ಪರೀಕ್ಷೆ ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ಮನೆ ಬಿಟ್ಟ ಹೊರಗಿರದ ಇಲ್ಲಿಗೆ ಏಕಾಏಕಿ ಕಳುಹಿಸುವ ಮೊದಲು ಕನಿಷ್ಠ ಎರಡು ವರ್ಷಗಳ ಮೊದಲಿನಿಂದಲೇ ದೂರ ಕಳುಹಿಸುತ್ತಿರುವ ಸಂಬಂಧ ಸಮಾಲೋಚನೆಗೆ ಒಳಗಾಗಿಸುವುದು ಮುಖ್ಯ.

ಮಗು 5 ಅಥವಾ 6ನೇ ತರಗತಿಯಲ್ಲಿದ್ದಾಗ ಇನ್ನೆರಡು ವರ್ಷದಲ್ಲಿ ಮಕ್ಕಳನ್ನು ಕೋಟಾಗೆ ಕಳುಹಿಸಬೇಕು ಎಂದು ಪೋಷಕರು ನಿರ್ಧರಿಸದಾಗ ಹೇಗೆ ಆರ್ಥಿಕ ಯೋಜನೆ ರೂಪಿಸುತ್ತಾರೋ ಅದೇ ರೀತಿ ಅವರನ್ನು ಮಾನಸಿಕವಾಗಿ ಅವರನ್ನು ನಗರದಿಂದ ಹೊರಗೆ ಉಳಿಯುವಂತೆ ಪ್ರೇರೇಪಿಸಿ, ತಯಾರಿ ನಡೆಸಬೇಕು ಎನ್ನುತ್ತಾರೆ ಅಲೆನ್​ ಕೆರಿಯರ್​ ಇನ್ಸಿಟ್ಯೂಟ್​ ತಜ್ಞ ಹರೀಶ್​ ಶರ್ಮಾ.

ವೃತ್ತಿಪರ ಸಾಮರ್ಥ್ಯ ಪರೀಕ್ಷೆಗಳು ಸಹಾಯಕ: ಕ್ಲಾಸ್​ 10 ಮತ್ತು 12ನಲ್ಲಿ 90ರಷ್ಟು ಅಂಕ ಪಡೆದ ಮಾತ್ರಕ್ಕೆ ಮಗು ವಿದ್ಯಾರ್ಥಿಗಳು ಇಂಜಿನಿಯರಿಂಗ್​ ಅಥವಾ ವೈದ್ಯಕೀಯಕ್ಕೆ ಸೇರಲು ಅರ್ಹ ಎಂದು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಪೋಷಕರ ಒತ್ತಡಕ್ಕೆ ಒಳಗಾಗಿ ಅಥವಾ ತಮ್ಮ ವಿಷಯಗಳ ಆಯ್ಕೆಯ ಬಗ್ಗೆ ತಿಳಿಯದೇ ಇಲ್ಲಿಗೆ ಬರುವುದನ್ನು ನಾವು ಕಾಣುತ್ತೇವೆ. ಈ ವೇಳೆ ವೃತ್ತಿಪರ ಸಾಮರ್ಥ್ಯ ಪರೀಕ್ಷೆಗಳು ಇಲ್ಲಿ ಸಹಾಯ ಆಗಲಿದೆ.

ವಿದ್ಯಾರ್ಥಿ ಈಗಾಗಲೇ ಇಲ್ಲಿದ್ದರೆ, ಹಡಗು ತೇಲುವಂತೆ ಅವರ ಸ್ಥಿತಿ. ಪೋಷಕರು ಮತ್ತು ಮಕ್ಕಳು ಇಬ್ಬರು ಮುಂದೆ ಏನಾಗಬಹುದು ಎಂಬುದರ ಬಗ್ಗೆ ಚಿಂತಿಸುತ್ತಾರೆ. ಅಲ್ಲದೇ ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ, ಕೀಳಾಗಿ ಕಾಣಲಾಗುವುದು ಎಂಬ ಮನೋಭಾವ. ಇದರ ಹೊರತಾಗಿ ಇಲ್ಲಿಗೆ ಬರುವ ಮುಂಚೆಗೆ ಅವರು ಸರಿಯಾದ ನಿರ್ಧಾರಕ್ಕೆ ಬಂದರೆ, ಎಲ್ಲರಿಗೂ ಅನುಕೂಲವಾಗುವುದು. ಅವರ ಮಗ ಕೋಟಕ್ಕೆ ಹೋದ ಎಂದು ಸಂಬಂಧಿಕರು ನೆರೆಹೊರೆಯವರು ಮಾತನಾಡಿದರೆ ಸಾಲದು. ಆರಂಭದಲ್ಲೇ ವೃತ್ತಿಪರ ಸಹಾಯ ಕೂಡ ಅವಶ್ಯಕವಾಗಿದೆ ಎನ್ನುತ್ತಾರೆ ತಜ್ಞರು.

ಮಕ್ಕಳಿಗೆ ಎರಡು ವರ್ಷದ ಮೊದಲೇ ಸಿದ್ದತೆ: ಪೋಷಕರು ಮತ್ತು ಮಕ್ಕಳಲ್ಲಿ ಉತ್ತಮ ಸಂವಹನ ಅಭಿವೃದ್ಧಿಯಾಗುವುದು ಕೂಡ ಅತ್ಯವಶ್ಯಕ. ಇಲ್ಲಿದ್ದಾಗ ಮಕ್ಕಳು ಅವರೊಂದಿಗೆ ತಕ್ಷಣಕ್ಕೆ ಉತ್ತಮ ಸಂಪರ್ಕ ಮಾಡಬೇಕು ಎಂದು ನಿರೀಕ್ಷೆ ಮಾಡಬಾರದು. ಇಂತಹ ಬಾಂಧವ್ಯ ಇಲ್ಲಿಗೆ ಬರುವ ಮೊದಲೇ ಅಭಿವೃದ್ಧಿ ಹೊಂದಬೇಕು. ಇಲ್ಲಿಗೆ ಬರುವ ಮೊದಲು ಮಕ್ಕಳು ಎಲ್ಲಾ ವಿಷಯಗಳಿಗೂ ಪೋಷಕರನ್ನು ಸಂಪೂರ್ಣವಾಗಿ ಅವಲಂಬಿತವಾಗಿರುವುದನ್ನು ನಾವು ಗಮನಿಸಿದ್ದೇವೆ ಎಂದು ಕೋಚಿಂಗ್​ ಸಂಸ್ಥೆಯ ನಿರ್ದೇಶಕರೊಬ್ಬರು ತಿಳಿಸುತ್ತಾರೆ.

ಕೋಟಾ ಕೋಚಿಂಗ್​ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸುವ ಮುನ್ನ ವಾರ್ಡ್​ ರೋಬ್​ ಜೋಡಿಸಿಕೊಳ್ಳುವುದು, ಸರಿಯಾದ ಸಮಯಕ್ಕೆ ಮೆಸ್​ಗೆ ಬರುವುದು, ತಮ್ಮ ಬಟ್ಟೆಯನ್ನು ತೊಳೆಯಲು ಹಾಕುವುದು ಹೀಗೆ ಅವರ ಕೆಲಸವನ್ನು ಅವರು ಮಾಡಿಕೊಳ್ಳುವುದನ್ನು ಕಲಿಸಬೇಕು. ಏನು ತಿಳಿಯದೇ ಅವರನ್ನು ಏಕಾಏಕಿ ಇಲ್ಲಿ ಬಿಟ್ಟು ಹೋದರೆ, ಅವರು ಕಳೆದು ಹೋಗುತ್ತಾರೆ. ಕನಿಷ್ಟ ಅವರನ್ನು ಇಲ್ಲಿಗೆ ಕಳುಹಿಸಲು ಎರಡು ವರ್ಷ ಇರುವ ಮೊದಲೇ ಈ ತಯಾರಿ ನಡೆಸಿದರೆ, ಮಕ್ಕಳ ಅನೇಕ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: ಮಕ್ಕಳ ಮೆದುಳನ್ನು ಚುರುಕಾಗಿಸುತ್ತೆ ವಾಲ್​ನಟ್​​; ಅಧ್ಯಯನದಿಂದ ಹೊರಬಿತ್ತು ಉಪಯುಕ್ತ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.