ಉತ್ತರಾಖಂಡ : 'ಪುಷ್ಕರ್ ಫ್ಲವರ್ ಬೀ ಹೈ, ಫೈರ್ ಬಿ ಹೈ'.. ಇದು ಓದಿದಾಕ್ಷಣ ಏನೋ ತಪ್ಪಿದೆ ಅನ್ನಿಸಿರಬೇಕಲ್ಲವೇ?.. ನೀವು ಓದಿದ್ದು ಸರಿಯಾಗಿಯೇ ಇದೆ. ಇದು ತೆಲುಗಿನ ಪುಷ್ಪ ಸಿನಿಮಾದ ಡೈಲಾಗ್. ಆದರೆ, ಸ್ವಲ್ಪ ಬದಲಾವಣೆ ಅಷ್ಟೇ. 'ಪುಷ್ಪ' ಜಾಗದಲ್ಲಿ 'ಪುಷ್ಕರ್' ಬಂದಿದ್ದಾರೆ.
ಉತ್ತರಾಖಂಡದ ಚುನಾವಣಾ ಪ್ರಚಾರದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮ್ನಿ ಅವರ ಪರವಾಗಿ ಮತಪ್ರಚಾರ ಮಾಡುವ ವೇಳೆ ಪುಷ್ಪ ಸಿನಿಮಾದ ಡೈಲಾಗ್ ಹೊಡೆದಿದ್ದಾರೆ.
-
गंगोलीहाट, उत्तराखंड में चुनावी जनसभा को सम्बोधित कर रहा हूँ https://t.co/uL1V0iey4c
— Rajnath Singh (@rajnathsingh) February 8, 2022 " class="align-text-top noRightClick twitterSection" data="
">गंगोलीहाट, उत्तराखंड में चुनावी जनसभा को सम्बोधित कर रहा हूँ https://t.co/uL1V0iey4c
— Rajnath Singh (@rajnathsingh) February 8, 2022गंगोलीहाट, उत्तराखंड में चुनावी जनसभा को सम्बोधित कर रहा हूँ https://t.co/uL1V0iey4c
— Rajnath Singh (@rajnathsingh) February 8, 2022
ನಮ್ಮ ಸಿಎಂ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮ್ನಿ ಅವರನ್ನು ಕಾಂಗ್ರೆಸ್ ಪುಷ್ಪ(ಹೂವು) ಎಂದು ಭಾವಿಸಿದೆ. ಅವರು ಹೂವು ಹೌದು ಫೈರ್(ಬೆಂಕಿ) ಕೂಡ ಹೌದು. ಈ ಪುಷ್ಕರ್ ಅವರ ಓಟವನ್ನು ನಿಲ್ಲಿಸಲಾಗಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ಗೆ ನಾಯಕರಾಗಲಿ, ಉದ್ದೇಶ ಅಥವಾ ಘೋಷಣೆ ಎಂಬುದೇ ಇಲ್ಲ. ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ಉತ್ತರಾಖಂಡ ರಾಜ್ಯವನ್ನೂ ಬರ್ಬಾದ್ ಮಾಡಿದೆ. ಇನ್ನುಮುಂದೆ ಲೂಟಿಕೋರರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದರು.
ಓದಿ: ರಾಜ್ಯದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಸಿಎಂ ಮತ್ತೊಮ್ಮೆ ಮನವಿ