ETV Bharat / bharat

ಕನ್ನಡ ಮತ್ತು ಹಿಂದಿ ಭಾಷೆಯ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್​ಗೆ ಚಾಲನೆ ನೀಡಿದ ಆಂಧ್ರ ಸಿಎಂ - ತಿರುಪತಿಗೆ ಸಿಎಂ ಜಗನ್ ಮೋಹನ್ ಭೇಟಿ

ಬ್ರಹ್ಮೋತ್ಸವದ ಅಂಗವಾಗಿ ಶ್ರೀವೆಂಕಟೇಶ್ವರ ಸ್ವಾಮಿಗೆ ಒಂದು ಜೊತೆ ರೇಷ್ಮೆ ವಸ್ತ್ರವನ್ನು ನೀಡಿದ ಜಗನ್ ಮೋಹನ್ ರೆಡ್ಡಿ, ಅನ್ನಮಯ್ಯ ಭವನದಲ್ಲಿ ಕಾರ್ಯಕ್ರಮ ಭಾಗಿಯಾದ ನಂತರ ಕೆಲವು ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಭಾಗಿಯಾದರು..

ap-cm-jagan-launches-svbc-kannada-and-hindi-channels
ಕನ್ನಡ ಮತ್ತು ಹಿಂದಿ ಭಾಷೆಯ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್​ಗೆ ಚಾಲನೆ ನೀಡಿದ ಆಂಧ್ರ ಸಿಎಂ
author img

By

Published : Oct 12, 2021, 2:38 PM IST

ತಿರುಪತಿ(ಆಂಧ್ರಪ್ರದೇಶ) : ವಿಶ್ವವಿಖ್ಯಾತ ದೇವಾಲಯವಾದ ತಿರುಮಲಕ್ಕೆ ಭೇಟಿ ನೀಡಿದ ಆಂಧ್ರಪ್ರದೇಶ ಸಿಎಂ ಜಗನ್​ಮೋಹನ್ ರೆಡ್ಡಿ ಕನ್ನಡ ಮತ್ತು ಹಿಂದಿ ಭಾಷೆಯ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್​ಗಳಿಗೆ ಚಾಲನೆ ನೀಡಿದರು.

ತಿರುಮಲದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ಬೂಂದಿಪೋಟು ಕಟ್ಟಡವನ್ನು ಉದ್ಘಾಟಿಸಿದ ಅವರಿಗೆ, ತಿರುಮಲದಲ್ಲಿ ಟಿಟಿಡಿ ಕೈಗೊಂಡಿರುವ ಹೊಸ ಕಾರ್ಯಕ್ರಮಗಳ ಬಗ್ಗೆ ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದರು.

ಬ್ರಹ್ಮೋತ್ಸವದ ಅಂಗವಾಗಿ ಶ್ರೀವೆಂಕಟೇಶ್ವರ ಸ್ವಾಮಿಗೆ ಒಂದು ಜೊತೆ ರೇಷ್ಮೆ ವಸ್ತ್ರವನ್ನು ನೀಡಿದ ಜಗನ್ ಮೋಹನ್ ರೆಡ್ಡಿ, ಅನ್ನಮಯ್ಯ ಭವನದಲ್ಲಿ ಕಾರ್ಯಕ್ರಮ ಭಾಗಿಯಾದ ನಂತರ ಕೆಲವು ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಭಾಗಿಯಾದರು.

ಬೆಳಗ್ಗೆ 6 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದ ಜಗನ್ ತುಲಾಭಾರದ ಮೂಲಕ ಸುಮಾರು 78 ಕೆಜಿ ಅಕ್ಕಿ ನೀಡಿದರು. ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾರೆಡ್ಡಿ, ಇಒ ಜವಾಹರ್ ರೆಡ್ಡಿ ಜಗನ್​ಗೆ ತೀರ್ಥ ಪ್ರಸಾದ ನೀಡಿದರು.

ಇದನ್ನೂ ಓದಿ: ಪ್ರಸ್ತುತ ವಿಶ್ವ ಕ್ರಿಕೆಟ್ ಅನ್ನು ಭಾರತ ನಿಯಂತ್ರಿಸುತ್ತಿದೆ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.