ಬಾರ್ಪೇಟಾ(ಅಸ್ಸೋಂ): ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮದರಸಾವನ್ನು ಕೆಡವಲಾಗಿದೆ. ಅಲ್ಲದೇ ಮದರಸಾದ ಶಿಕ್ಷಕನನ್ನು ಅಸ್ಸೋಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಒಂದು ಮದರಸಾ ಭಾನುವಾರ ಬಂಧಿಸಲಾದ ಶಂಕಿತ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಾರ್ಪೇಟಾದ ಧಕಾಲಿಯಾಪರಾ ಪ್ರದೇಶದಲ್ಲಿರುವ ಶೈಖುಲ್ ಹಿಂದ್ ಮಹಮ್ಮದುಲ್ ಹಸನ್ ಜಾಮಿಯುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯನ್ನು ಪೊಲೀಸರು ಮತ್ತು ಆಡಳಿತ ಮಂಡಳಿ ಧ್ವಂಸಗೊಳಿಸಿದೆ. ಪ್ರಾಂಶುಪಾಲ ಮಹ್ಮುನೂರ್ ರಶೀದ್ ಎಂಬುರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಬರ್ ಅಲಿ ಮತ್ತು ಅಬುಲ್ ಕಲಾಂ ಆಜಾದ್ ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಭಾನುವಾರ ಜಿಲ್ಲೆಯ ಸೊರ್ಭೋಗ್ ಪ್ರದೇಶದ ಮನೆಯೊಂದರಿಂದ ಬಂಧಿಸಿದ್ದಾರೆ. ಇವರಿಬ್ಬರು ಅಲ್-ಖೈದಾ (ಎಕ್ಯೂಐಎಸ್) ಮತ್ತು ಅನ್ಸರುಲ್ಲಾ ಬಾಂಗ್ಲಾದೇಶದ ತಂಡ (ಎಬಿಟಿ) ಯೊಂದಿಗೆ ಮತ್ತು ಈ ಮದರಸಾದೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ಅಲ್‌ಖೈದಾ ಉಗ್ರ ಸಂಘಟನೆ ಜತೆ ನಂಟು.. ಅಸ್ಸೋಂನಲ್ಲಿ ಆರು ಮಂದಿ ಶಂಕಿತರ ಬಂಧನ
ಅಕ್ರಮವಾಗಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮದರಸಾವನ್ನು ನಿರ್ಮಿಸಲಾಗಿದ್ದ ಕಾರಣದಿಂದ ತೆರವು ಕಾರ್ಯಾಚರಣೆಯನ್ನು ಪೊಲೀಸರು ನಡೆಸಿದ್ದಾರೆ ಎಂದು ಎಸ್ಪಿ ಅಮಿತವ್ ಸಿನ್ಹಾ ತಿಳಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇಲ್ಲಿಯವರೆಗೆ, ಅಸ್ಸೋಂನಲ್ಲಿ AQIS/ABT ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ 37 ಜನ ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, AQIS/ABT ನೊಂದಿಗೆ ಸಂಪರ್ಕ ಹೊಂದಿದ್ದ ಬಾಂಗ್ಲಾದೇಶದ ಈ ಇಬ್ಬರು ಶಂಕಿತ ಭಯೋತ್ಪಾದಕರು ಮದರಸಾದಲ್ಲಿ ತಂಗಿದ್ದರು. ಈ ತಿಂಗಳ ಆರಂಭದಲ್ಲಿ, ಮೊರಿಗಾಂವ್ ಜಿಲ್ಲಾಡಳಿತವು ಮೊಯಿರಾಬರಿಯಲ್ಲಿ ಜಮಿಯುಲ್ ಹುದಾ ಮದರಸಾವನ್ನು ನೆಲಸಮಗೊಳಿಸಿತ್ತು.