ETV Bharat / bharat

ಗಲ್ವಾನ್‌ ಕಣಿವೆಯಲ್ಲಿ ಭಾರತ-ಚೀನಾ ಮತ್ತೊಮ್ಮೆ ಹಿಂಸಾತ್ಮಕ ಸಂಘರ್ಷ ; ರಾಹುಲ್‌ ಗಾಂಧಿ ಹೇಳಿದ್ದಿಷ್ಟು..

author img

By

Published : Jul 14, 2021, 6:03 PM IST

ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಭಾರತೀಯ ಸೇನೆ ಸಂಪೂರ್ಣವಾಗಿ ನಿರಾಕರಿಸಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಒಪ್ಪಂದಕ್ಕೆ ವಿಧೇಯರಾಗಿದ್ದು, ಉಭಯ ದೇಶಗಳಿಂದ ಯಾವುದೇ ಅಕ್ರಮಣಕಾರಿ ಘರ್ಷಣೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಪೂರ್ವ ಲಡಾಖ್‌ನ ಗಡಿಯಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತ ಹಾಗೂ ಚೀನಾ ಪ್ರಯತ್ನಿಸುತ್ತಿರುವುದಾಗಿ ಸೇನೆ ತಿಳಿಸಿದೆ..

another galwan like clash rahul gandhi tweets media report army denies
ಗಲ್ವಾನ್‌ ಕಣಿವೆಯಲ್ಲಿ ಭಾರತ-ಚೀನಾ ಮತ್ತೊಮ್ಮೆ ಹಿಂಸಾತ್ಮಕ ಸಂಘರ್ಷ..!; ರಾಹುಲ್‌ ಗಾಂಧಿ ಹೇಳಿದ್ದು ನಿಜನಾ..?

ಹೈದರಾಬಾದ್‌ : ಭಾರತ-ಚೀನಾ ಸೈನಿಕರು ಗಲ್ವಾನ್‌ ಕಣಿವೆಯಲ್ಲಿ ಮತ್ತೆ ಹಿಂಸಾತ್ಮಕ ಘರ್ಷಣೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಧ್ವನಿ ಎತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಸುದ್ದಿಯನ್ನು ಟ್ವಿಟರ್‌ನಲ್ಲಿ ಷೇರ್‌ ಮಾಡಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಕ್ಷಣೆ, ವಿದೇಶಾಂಗ ವಿಷಯಗಳನ್ನು ಕೇಂದ್ರ ಸರ್ಕಾರ ರಾಜಕೀಯ ಸಾಧನಗಳನ್ನಾಗಿ ಉಪಯೋಗಿಸುತ್ತಿದೆ ಎಂದು ಆರೋಪಿಸಿದ್ದಾರೆ. ದೇಶ ಹಿಂದೆಂದೂ ಇಂತಹ ದುಸ್ಥಿತಿಗೆ ಬಂದಿರಲಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಜೂನ್‌ 15ರಂದು ಹಿಂಸಾತ್ಮಕ ಘಟನೆ ನಡೆದ ಪ್ರದೇಶದಲ್ಲೇ ಮತ್ತೊಮ್ಮೆ ಭಾರತ-ಚೀನಾ ಸೈನಿಕರ ಘರ್ಷಣೆಗಳು ತಲೆ ಎತ್ತಿವೆ ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

another galwan like clash rahul gandhi tweets media report army denies
ರಾಹುಲ್‌ ಗಾಂಧಿ ಹೇಳಿದ್ದು ನಿಜನಾ..?

ಲಡಾಖ್‌ನ ಗಡಿಯಲ್ಲಿ ಚೀನಾ ಸೈನಿಕರನ್ನು ಹೆಚ್ಚಿಸಿದೆ. ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದೆ ಎಂದು ವಿವರಿಸಿದೆ. 400 ಮೀಟರ್‌ ದೂರದಲ್ಲಿ ವಿಮಾನಗಳನ್ನು ಧ್ವಂಸ ಮಾಡುವಂತ ಕ್ಷಿಪಣಿಗಳ ವ್ಯವಸ್ಥೆಯನ್ನು ಮಾಡಿಕೊಂಡಿದೆ ಎಂದು ಎಚ್ಚರಿಸಿದೆ.

ಸೇನೆಯ ಸ್ಪಷ್ಟನೆ ಹೀಗಿತ್ತು..

ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಭಾರತೀಯ ಸೇನೆ ಸಂಪೂರ್ಣವಾಗಿ ನಿರಾಕರಿಸಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಒಪ್ಪಂದಕ್ಕೆ ವಿಧೇಯರಾಗಿದ್ದು, ಉಭಯ ದೇಶಗಳಿಂದ ಯಾವುದೇ ಅಕ್ರಮಣಕಾರಿ ಘರ್ಷಣೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಪೂರ್ವ ಲಡಾಖ್‌ನ ಗಡಿಯಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತ ಹಾಗೂ ಚೀನಾ ಪ್ರಯತ್ನಿಸುತ್ತಿರುವುದಾಗಿ ಸೇನೆ ತಿಳಿಸಿದೆ.

ಇದನ್ನೂ ಓದಿ: ಪ್ಯಾಂಗಾಂಗ್​ ಸರೋವರದಿಂದ ಭಾರತ ಚೀನಾ ಪಡೆಗಳು ವಾಪಸ್​.. ಮತ್ತಷ್ಟು ವಿಡಿಯೋ

ಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ ಗಲ್ವಾನ್‌ನಲ್ಲಿ ಅಥವಾ ಇತರೆ ಯಾವುದೇ ಗಡಿ ಪ್ರದೇಶದಲ್ಲಿ ಘರ್ಷಣೆಗಳು ನಡೆದಿಲ್ಲ. ಸರಿಯಾದ ಆಧಾರಗಳು ಇಲ್ಲದೆ, ದುರುದ್ದೇಶದಿಂದ ಇಂತಹ ಸುದ್ದಿ ಪ್ರಕಟಿಸಿದ್ದಾರೆ. ಚೀನಾದೊಂದಿಗೆ ನಡೆದಿರುವ ಒಪ್ಪಂದಗಳ ಉಲ್ಲಂಘನೆಯಾಗಿದೆ ಎಂದು ವಿವರಿಸಲಾಗಿದೆ. ಇದು ತಪ್ಪು. ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಲು ಚರ್ಚೆಗಳು ನಡೆಯುತ್ತಿವೆ. ಸಾಧಾರಣ ಪ್ರದೇಶದಲ್ಲಿ ಗಸ್ತು ನಡೆಯುತ್ತಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.

ಚೀನಾ ಸೈನಿಕರ ಚಲನವಲನ ಹಾಗೂ ಸೈನಿಕರ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪೂರ್ವ ಲಡಾಖ್‌ನ ಅನೇಕ ಭಾಗಗಳಲ್ಲಿ ಉಭಯ ದೇಶಗಳ ಸೇನೆಯ ನಿಯೋಜನೆ ಮುಂದುವರೆದಿದೆ. ಫೆಬ್ರವರಿಯಲ್ಲಿ ನಡೆದ ಒಪ್ಪಂದದ ಪ್ರಕಾರ, ಪ್ಯಾಂಗಾಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಪೂರ್ಣಗೊಂಡಿದೆ. ದೇಶದ ಇತರ ಭಾಗಗಳಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.