ETV Bharat / bharat

ದೆಹಲಿ ಸಿಎಂಗೆ ಅಧಿಕಾರದ ಅಮಲೆಂದ ಅಣ್ಣಾ: ಹಜಾರೆ ಹೆಗಲ ಮೇಲೆ ಬಂದೂಕಿಟ್ಟ ಬಿಜೆಪಿ- ಕೇಜ್ರಿವಾಲ್ - ದೆಹಲಿ ಸಿಎಂಗೆ ಅಧಿಕಾರದ ಅಮಲೆಂದ ಅಣ್ಣಾ

ದಶಕದ ಹಿಂದೆ ಸಾಮಾಜಿಕ ಹೋರಾಟಗಳಲ್ಲಿ ಅಣ್ಣಾ ಹಜಾರೆ ಹಾಗೂ ಅರವಿಂದ್ ಕೇಜ್ರಿವಾಲ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಗುರು-ಶಿಷ್ಯರೆಂದೇ ಗುರುತಿಸಿಕೊಂಡಿದ್ದರು.

anna-hazare-writes-to-cm-kejriwal-slams-him-on-delhi-excise-policy
ದೆಹಲಿ ಸಿಎಂಗೆ ಅಧಿಕಾರದ ಅಮಲೇರಿದೆ ಎಂದ ಅಣ್ಣಾ: ಹಜಾರೆ ಹೆಗಲಿನ ಮೇಲೆ ಬಿಜೆಪಿ ಬಂದೂಕು ಅಂತಾ ಕೇಜ್ರಿವಾಲ್​ ಕುಟುಕು
author img

By

Published : Aug 30, 2022, 6:02 PM IST

Updated : Aug 30, 2022, 10:45 PM IST

ನವದೆಹಲಿ: ಅಬಕಾರಿ ನೀತಿಯ ವಿವಾದದ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಇಂದು ವಾಗ್ದಾಳಿ ನಡೆಸಿದ್ದಾರೆ. "ಕೇಜ್ರಿವಾಲ್ ಅವರಿಗೆ ಅಧಿಕಾರದ ಅಮಲೇರಿದೆ ಮತ್ತು ಚಳವಳಿಯ ಸಿದ್ಧಾಂತಗಳು ಮತ್ತು ಮೌಲ್ಯಗಳನ್ನು ಮರೆತಿದ್ದಾರೆ" ಎಂದು ಅವರು ಟೀಕಿಸಿದ್ದಾರೆ. ಇದರ ಬೆನ್ನಲ್ಲೇ, ಆಮ್​ ಆದ್ಮಿ ಪಕ್ಷದ ನಾಯಕರೂ ಆದ ಕೇಜ್ರಿವಾಲ್​ ಪ್ರತಿಕ್ರಿಯಿಸಿದ್ದಾರೆ.

ದೆಹಲಿ ಸರ್ಕಾರದ ಅಬಕಾರಿ ನೀತಿ ಕುರಿತಂತೆ ಪತ್ರ ಬರೆದಿರುವ ಅಣ್ಣಾ ಹಜಾರೆ, "ನೀವು ಮುಖ್ಯಮಂತ್ರಿಯಾದ ನಂತರ ನಾನು ನಿಮಗೆ ಪತ್ರ ಬರೆಯುತ್ತಿರುವುದು ಇದೇ ಮೊದಲು. ದೆಹಲಿ ಸರ್ಕಾರದ ಮದ್ಯದ ಹಗರಣದ ವಿಷಯವು ನಿರಾಶಾದಾಯಕವಾಗಿದೆ. ನಾನು ಗಾಂಧೀಜಿ ಮತ್ತು ಅವರ ವಿಚಾರಧಾರೆಯಿಂದ ಸ್ಫೂರ್ತಿ ಪಡೆದಿದ್ದೇನೆ. ಇದೇ ಆದರ್ಶಗಳ ಬಗ್ಗೆ ಸ್ವರಾಜ್ ಎಂಬ ಪುಸ್ತಕವನ್ನು ನೀವು ಬರೆದಿದ್ದೀರಿ. ಆಗ ನಿಮ್ಮ ಮೇಲೆ ಸಾಕಷ್ಟು ಭರವಸೆ ಇತ್ತು."

"ಆದರೆ, ರಾಜಕೀಯಕ್ಕೆ ಹೋಗಿ ಮುಖ್ಯಮಂತ್ರಿಯಾದ ನಂತರ ಸಿದ್ಧಾಂತವನ್ನೇ ಮರೆತಿದ್ದೀರಿ. ಮದ್ಯದ ಅಮಲಿನಂತೆಯೇ ಅಧಿಕಾರದ ಅಮಲು ಕೂಡಾ ನಿಮಗಿದೆ. ಅಧಿಕಾರದ ಅಮಲಿನಲ್ಲಿ ಮುಳುಗಿದಂತೆ ಕಾಣುತ್ತಿದೆ" ಎಂದು ಖಾರವಾಗಿ ಉಲ್ಲೇಖಿಸಿರುವ ಅಣ್ಣಾ ಹಜಾರೆ, "ದೆಹಲಿಯ ಹೊಸ ಅಬಕಾರಿ ನೀತಿಯು ಮದ್ಯದ ಮಾರಾಟ ಮತ್ತು ಬಳಕೆಯನ್ನು ಉತ್ತೇಜಿಸುತ್ತದೆ. ನಗರದ ಮೂಲೆ ಮೂಲೆಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲಾಗುತ್ತಿದೆ ಮತ್ತು ಇದು ಸಾರ್ವಜನಿಕರ ಮೇಲೆ ತುಂಬಾ ಕೆಟ್ಟ ಬೀರಲಿದೆ" ಎಂದು ಕಿಡಿಕಾರಿದ್ದಾರೆ.

ಕೇಜ್ರಿವಾಲ್​ ತಿರುಗೇಟು: ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಸಿಬಿಐ ಯಾವುದೇ ಹಗರಣವಾಗಿಲ್ಲ ಎಂದು ತಿಳಿಸಿದೆ. ಬಿಜೆಪಿಯವರ ಮಾತನ್ನು ಜನರು ಕೇಳುತ್ತಿಲ್ಲ. ಈಗ ಹಜಾರೆ ಅವರ ಹೆಗಲಿನ ಮೇಲೆ ಬಂದೂಕು ಇಟ್ಟು ಗುಂಡು ಚಲಾಯಿಸುತ್ತಿದ್ದಾರೆ. ಇದು ಸಾಮಾನ್ಯ ರಾಜಕೀಯ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ಗುಲಾಂ ನಬಿ ಆಜಾದ್​ಗೆ ಭಾರಿ ಬೆಂಬಲ.. 64 ಕಾಂಗ್ರೆಸ್​​ ನಾಯಕರ ಸಾಮೂಹಿಕ ರಾಜೀನಾಮೆ

Last Updated : Aug 30, 2022, 10:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.