ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಜ.21ರಂದು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಭಾಗವಾದ 2,500 'ಮೊಬೈಲ್ ವಿತರಣಾ ಘಟಕ' (ಎಂಡಿಯು) ವಾಹನಗಳನ್ನು ವಿಜಯವಾಡದಲ್ಲಿ ಉದ್ಘಾಟಿಸಿದರು.
ಇವು ರಾಜ್ಯದಾದ್ಯಂತ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಪಡಿತರ ಮತ್ತು ಗುಣಮಟ್ಟದ ಅಕ್ಕಿಯನ್ನು ಪೂರೈಸಲಿವೆ.
"ಫೆಬ್ರವರಿ 1 ರಿಂದ ಗುಣಮಟ್ಟದ ಅಕ್ಕಿ ಮತ್ತು ಪಡಿತರವನ್ನು 9,260 ವಾಹನಗಳ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುವುದು. ಈ ಯೋಜನೆಗೆ ಸರ್ಕಾರ 830 ಕೋಟಿ ರೂ. ವೆಚ್ಚ ಮಾಡಲಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಸ್ವಯಂಸೇವಕ ವ್ಯವಸ್ಥೆಯನ್ನು ಬಳಸಿಕೊಂಡು, ಕಾರ್ಡ್‌ದಾರರ ಬೆರಳಚ್ಚನ್ನು ತೆಗೆದುಕೊಂಡು ಮರುಬಳಕೆ ಮಾಡಬಹುದಾದ ಚೀಲಗಳಲ್ಲಿ ಪಡಿತರವನ್ನು ನಿಖರವಾದ ತೂಕದೊಂದಿಗೆ ಪೂರೈಸಲಾಗುವುದು. ಈ ಮೂಲಕ ಗುಣಮಟ್ಟದ ಅಕ್ಕಿಯನ್ನು ವಿತರಿಸಲಾಗುವುದು. ಪ್ರತಿ ಅಕ್ಕಿ ಚೀಲವನ್ನು ಮೊಹರು ಮಾಡಿ ಅನನ್ಯ ಸೀಲ್ನೊಂದಿಗೆ ಟ್ಯಾಗ್ ಮಾಡಲಾಗಿದೆ." ಎಂದು ಅಧಿಕಾರಿ ಹೇಳಿದ್ದಾರೆ.
ಓದಿ:ಸ್ವದೇಶಿ ನಿರ್ಮಿತ ಸ್ಮಾರ್ಟ್ ಆ್ಯಂಟಿ ಏರ್ಫೀಲ್ಡ್ ವೆಪನ್ ಯಶಸ್ವಿ ಪ್ರಯೋಗ
ಇದಲ್ಲದೆ ವಿತರಣಾ ವಾಹನಗಳಿಗೆ ಜಿಪಿಎಸ್ ಸಾಧನಗಳನ್ನು ಸಹ ಅಳವಡಿಸಲಾಗಿದ್ದು, ಪ್ರತಿ ವಾಹನವು ತಿಂಗಳ 18 ದಿನಗಳಲ್ಲಿ ಸರಕುಗಳನ್ನು ತಲುಪಿಸಬೇಕಾಗುತ್ತದೆ.
ಫಲಾನುಭವಿಗಳ ಮನೆ ಬಾಗಿಲಿಗೆ ಪಡಿತರ ಮತ್ತು ಗುಣಮಟ್ಟದ ಅಕ್ಕಿ ಪೂರೈಸಲು ರಾಜ್ಯ ಸರ್ಕಾರ 9,260 ವಾಹನಗಳನ್ನು 539 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ನಿಗಮಗಳ ಮೂಲಕ ಶೇ 60 ರಷ್ಟು ಸಬ್ಸಿಡಿಯಲ್ಲಿ ಅರ್ಹ ಪಡಿತರ ಚೀಟಿದಾರರಿಗೆ ಇವುಗಳನ್ನು ಪೂರೈಸಲಾಗುವುದು.
ಪ್ರತಿ ವಾಹನಕ್ಕೆ 5.8 ಲಕ್ಷ ರೂ. ವೆಚ್ಚವಾಗಲಿದ್ದು, 3.48 ಲಕ್ಷ ರೂ. ಸಬ್ಸಿಡಿ ನೀಡಲಾಗುವುದು. ಎಸ್‌ಟಿ ನಿಗಮದ ಮೂಲಕ 700 ವಾಹನಗಳು, ಎಸ್‌ಸಿ ನಿಗಮದ ಮೂಲಕ 2,300, ಬಿ.ಸಿ. ನಿಗಮದ ಮೂಲಕ 3,800, ಅಲ್ಪಸಂಖ್ಯಾತ ನಿಗಮದ ಮೂಲಕ 660 ಮತ್ತು ಇಡಬ್ಲ್ಯೂಇಬಿ ನಿಗಮದ ಮೂಲಕ 1,800 ವಾಹನಗಳನ್ನು ನೀಡಲಾಗುವುದು.