ETV Bharat / bharat

'ಮತಗಟ್ಟೆ ಸಿಬ್ಬಂದಿಗೆ ಬಿಗ್‌ ಸೆಲ್ಯೂಟ್, ಪ್ರಜಾಪ್ರಭುತ್ವ ಅಂದರೆ ಇದೇ': ಆನಂದ್ ಮಹೀಂದ್ರಾ ಮೆಚ್ಚುಗೆ - ಆನಂದ್ ಮಹೀಂದ್ರಾ

ಇದು ಪ್ರಜಾಪ್ರಭುತ್ವದ ಕೆಲಸದಲ್ಲಿ ಉತ್ತಮ ಉದಾಹರಣೆ ಎಂದು 15 ಕಿ.ಮೀ ಹಿಮದಲ್ಲಿ ಚಾರಣ ಮಾಡಿದ ಮತಗಟ್ಟೆ ಅಧಿಕಾರಿಗಳನ್ನು ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ.

Anand Mahindra lauds polling officials
ಮತಗಟ್ಟೆ ಅಧಿಕಾರಿಗಳನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ
author img

By

Published : Nov 14, 2022, 8:48 AM IST

ಮುಂಬೈ: ದಿನನಿತ್ಯದ ಜೀವನದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಅನೇಕ ಘಟನೆಗಳು ನಮಗೆ ಸ್ಫೂರ್ತಿ ನೀಡುತ್ತವೆ. ಕೆಲವರು ಇದನ್ನು ತಮ್ಮ ಕರ್ತವ್ಯದ ಭಾಗವಾಗಿ ಮಾಡಿದರೆ, ಇನ್ನೂ ಕೆಲವರು ಸಹಾಯವೆೆಂದು ಮಾಡುತ್ತಾರೆ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಆಗಾಗ ತಮ್ಮ ಟ್ವಿಟರ್‌ನಲ್ಲಿ ಇಂತಹ ಸ್ಫೂರ್ತಿದಾಯಕ ವಿಡಿಯೋ ಹಾಗೂ ಸಂದೇಶಗಳನ್ನು ಹಂಚಿಕೊಳ್ಳುತ್ತಾರೆ. ಭಾನುವಾರ ಟ್ವೀಟ್ ಮಾಡಿರುವ ಅವರು, ಚುನಾವಣಾ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನ.12 ರಂದು ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇದರ ಭಾಗವಾಗಿ ಕೆಲವು ಮತಗಟ್ಟೆ ಸಿಬ್ಬಂದಿ ಸಾವಿರಾರು ಅಡಿ ಎತ್ತರದಲ್ಲಿರುವ ಮತಗಟ್ಟೆಯನ್ನು ತಲುಪಲು ಕಠಿಣ ಹಿಮದ ಹಾದಿಯಲ್ಲಿ ಕಿ.ಮೀಟರ್‌ಗಟ್ಟಲೆ ನಡೆದುಕೊಂಡೇ ಸಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಈ ಪೋಸ್ಟ್ ಅನ್ನು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

  • Election officials trekking 15 Km in snow to get to a polling station in Himachal at 12k ft Images like this do much better than words in demonstrating our Democracy in Action! pic.twitter.com/bjq0mb0iWR

    — anand mahindra (@anandmahindra) November 13, 2022 " class="align-text-top noRightClick twitterSection" data=" ">

ಸಿಬ್ಬಂದಿ 12 ಸಾವಿರ ಅಡಿ ಎತ್ತರದಲ್ಲಿರುವ ಮತಗಟ್ಟೆ ಕೇಂದ್ರವನ್ನು ತಲುಪಲು ಹಿಮದಲ್ಲಿ 15 ಕಿ.ಮೀ ಟ್ರಕ್ಕಿಂಗ್ ಮಾಡುತ್ತಿದ್ದಾರೆ. 'ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂದು ಹೇಳಲು ಇದಕ್ಕಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ' ಎಂದು ಶ್ಲಾಘಿಸಿದ್ದಾರೆ.

ಮಹೀಂದ್ರಾ ಮಾಡಿರುವ ಈ ಟ್ವೀಟ್ ವೈರಲ್ ಆಗುತ್ತಿದೆ. 'ಮತಗಟ್ಟೆ ಸಿಬ್ಬಂದಿಗೆ ಬಿಗ್ ಸೆಲ್ಯೂಟ್, ಅವರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಪ್ರಜಾಪ್ರಭುತ್ವ ಎಂದರೆ ಇದೇ, ಇದು ತುಂಬಾ ಪ್ರೇರೇಪಿಸುತ್ತದೆ' ಅನ್ನೋದೆಲ್ಲ ಬಳಕೆದಾರರ ಕಾಮೆಂಟ್.

ಇದನ್ನೂ ಓದಿ: ಕುಕ್ಕೆಯ ಪ್ರಾಕೃತಿಕ ಸೊಬಗಿನ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.