ETV Bharat / bharat

1ರೂ. ಇಡ್ಲಿ ಅಮ್ಮನಿಗೆ ತಾಯಂದಿರ ದಿನವೇ ಹೊಸ ಮನೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ!

ಗೋಡೆ ಕುಸಿದ ಮನೆಯಲ್ಲೇ ಕಡಿಮೆ ದುಡ್ಡಿನಲ್ಲಿ ಇಡ್ಲಿ ಉಣಬಡಿಸುತ್ತಿದ್ದ ವೃದ್ಧೆಗೆ ಕೊಟ್ಟ ಮಾತಿನಂತೆ ಉದ್ಯಮಿ ಆನಂದ್ ಮಹೀಂದ್ರಾ ಹೊಸ ಮನೆ ಉಡುಗೊರೆಯಾಗಿ ನೀಡಿದ್ದಾರೆ.

Anand Mahindra gifts a house to Idli Amma on Mothers Day

author img

By

Published : May 9, 2022, 10:24 AM IST

ಕೊಯಮತ್ತೂರು: ಹಸಿದು ಬಂದವರಿಗೆ ರೂಪಾಯಿಗೊಂದು ಇಡ್ಲಿ ಕೊಟ್ಟು ಹೊಟ್ಟೆ ತುಂಬಿಸುತ್ತಿರುವ 'ಇಡ್ಲಿ ಅಮ್ಮ'ನಿಗೆ ವಿಶ್ವ ತಾಯಂದಿರ ದಿನದಂದು ಉದ್ಯಮಿ ಆನಂದ್ ಮಹೀಂದ್ರಾ ಅವರು ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಗೋಡೆ ಕುಸಿದ ಮನೆಯಲ್ಲೇ ಕಡಿಮೆ ದುಡ್ಡಿನಲ್ಲಿ ಈ ತಾಯಿ ಇಡ್ಲಿ ಉಣಬಡಿಸುತ್ತಾರೆ. ತಮಿಳುನಾಡಿನ ಕೊಯಮತ್ತೂರಿನ ಹೊರವಲಯದಲ್ಲಿ ವಡಿವೇಳಂಪಾಳಯಂನಲ್ಲಿ ಕಮಲತ್ತಾಳ್ ಎಂಬ ಮಹಿಳೆ ಇತ್ತೀಚೆಗೆ ರೂಪಾಯಿ ಇಡ್ಲಿ ಮೂಲಕ ಫೇಮಸ್ ಆಗಿದ್ದರು. 85ರ ವಯಸ್ಸಿನಲ್ಲೂ ಹೋಟೆಲ್​ ನಡೆಸುತ್ತಿರುವ ವೃದ್ಧೆಗೆ ಹೊಸ ಮನೆಯನ್ನು ಆನಂದ್ ಮಹೀಂದ್ರಾ ಕಟ್ಟಿಕೊಟ್ಟಿದ್ದಾರೆ.

ಹೊಸ ಮನೆಗೆ ಪ್ರವೇಶಿಸುವ ವಿಡಿಯೋವನ್ನು ಆನಂದ್ ಮಹೀಂದ್ರಾ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ಮನೆ ನಿರ್ಮಾಣ ಕೆಲಸದಲ್ಲಿ ನಮ್ಮ ತಂಡ ಸರಿಯಾಗಿ ಶ್ರಮಿಸಿದ್ದರಿಂದ ವಿಶ್ವ ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಮನೆ ಉಡುಗೊರೆ ನೀಡಲು ಸಾಧ್ಯವಾಯಿತು. ಈ ತಾಯಿ ಆರೈಕೆ, ಕಾಳಜಿ ಹಾಗೂ ನಿಸ್ವಾರ್ಥತೆಯ ಸಂಗಮವಾಗಿದ್ದು, ಅವರ ಕಾರ್ಯಕ್ಕೆ ಬೆಂಬಲ ನೀಡಲು ಅವಕಾಶ ದೊರೆತಿದೆ' ಎಂದು ಆನಂದ್ ಮಹೀಂದ್ರಾ ಟ್ವಿಟ್ ಮಾಡಿ ತಾಯಂದಿರ ದಿನದ ಶುಭಾಶಯ ತಿಳಿಸಿದ್ದಾರೆ.

  • Immense gratitude to our team for completing the construction of the house in time to gift it to Idli Amma on #MothersDay She’s the embodiment of a Mother’s virtues: nurturing, caring & selfless. A privilege to be able to support her & her work. Happy Mother’s Day to you all! pic.twitter.com/LgfR2UIfnm

    — anand mahindra (@anandmahindra) May 8, 2022 " class="align-text-top noRightClick twitterSection" data=" ">

ವಡಿವೇಳಂಪಾಳಯಂನಲ್ಲಿ ಕಮಲತ್ತಾಳ್ ಕಳೆದ 35ಕ್ಕೂ ಹೆಚ್ಚು ವರ್ಷಗಳಿಂದ ರುಚಿಕರ ಇಡ್ಲಿಗಳನ್ನು ತಯಾರಿಸುತ್ತಾರೆ. ದುಬಾರಿ ದುನಿಯಾದಲ್ಲೂ ಕೂಡ ಸದ್ಯ ಕೇವಲ 1 ರೂಗೆ ಒಂದು ಇಡ್ಲಿ ಮತ್ತು ಚಟ್ನಿ ಕೊಡುತ್ತಿದ್ದಾರೆ. ವಿಶೇಷವೆಂದ್ರೆ, ಇಳಿ ವಯಸ್ಸಲ್ಲೂ ಸೌದಿ ಒಲೆಯಲ್ಲೇ ಅಡುಗೆ ಮತ್ತು ರುಬ್ಬುಕಲ್ಲಿನಲ್ಲೇ ಚಟ್ನಿ ಮಾಡುತ್ತಾರೆ. ಇತ್ತೀಚೆಗೆ ಇಡ್ಲಿ ಅಮ್ಮನ ವಿಡಿಯೋಗಳು ವೈರಲ್ ಆಗಿದ್ದವು. ಆಗ 2021ರ ಏಪ್ರಿಲ್‌ನಲ್ಲಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, 'ಸದ್ಯದಲ್ಲೇ ಸ್ವಂತ ಮನೆಯಲ್ಲಿ ಇವರು ಇಡ್ಲಿ ಬಡಿಸಲಿದ್ದಾರೆ' ಎಂದು ಪೋಸ್ಟ್ ಮಾಡಿದ್ದರು. ಇದೀಗ ತಾವು ಕೊಟ್ಟ ಮಾತಿನಂತೆ ನಡೆದುಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಬಡವರ ಹಸಿವು ನೀಗಿಸುವ ದಂಪತಿ..16 ವರ್ಷಗಳಿಂದ ರೂಪಾಯಿಗೊಂದು ಇಡ್ಲಿ ಮಾರಾಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.