ಕೊಲ್ಲಂ(ಕೇರಳ): ದಕ್ಷಿಣ ಕೇರಳ ಜಿಲ್ಲೆಯಲ್ಲಿ ಗುರುವಾರ 36 ವರ್ಷದ ಇಸ್ರೇಲಿ ಮಹಿಳೆ ಸಾವನ್ನಪ್ಪಿದ್ದು ಪ್ರಕರಣ ದಾಖಲಾಗಿದೆ. ಮಹಿಳೆಯ ಮೃತದೇಹದ ಜೊತೆ ಲಿವ್ಇನ್ ಪಾರ್ಟ್ನರ್ ಕೂಡ ಗಾಯಗೊಂಡು ರಕ್ತದ ಮಡುವಿನಲ್ಲಿದ್ದನು. ಹೀಗಾಗಿ, ಇದು ಆತ್ಮಹತ್ಯೆ ಯತ್ನವೇ ಅಥವಾ ಕೊಲೆಯೇ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಹಿಳೆಯ ಕುತ್ತಿಗೆಯಲ್ಲಿ ಸೀಳಿದ ಗಾಯಗಳಿದ್ದವು. ಆಕೆಯ ಗೆಳೆಯನ ಹೊಟ್ಟೆ, ಕತ್ತಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆ ಈ ಮೊದಲು 15 ವರ್ಷಗಳಿಂದ ಉತ್ತರಾಖಂಡದಲ್ಲಿದ್ದರು. ಕಳೆದ ಒಂದು ವರ್ಷದಿಂದ ಕೇರಳದಲ್ಲಿ ವಾಸಿಸುತ್ತಿದ್ದರು. ಗಾಯಾಳು ವ್ಯಕ್ತಿ 70 ವರ್ಷದವನಾಗಿದ್ದು ಆತನ ಹೆಸರು ಯೋಗ ಆಚಾರ್ಯ. ಈತನ ಹೇಳಿಕೆಯನ್ನು ಕೊಟ್ಟಾಯಂ ಪೊಲೀಸ್ ಠಾಣಾ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಂಪತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯ ಕತ್ತು ಸೀಳಲಾಗಿದೆ. ಆ ಬಳಿಕ ತನ್ನ ಕುತ್ತಿಗೆ ಮತ್ತು ಹೊಟ್ಟೆಗೆ ಆತ ಇರಿದುಕೊಂಡಿದ್ದ ಎಂದು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ಖಿನ್ನತೆಗೆ ಒಳಗಾಗಿದ್ದು, ಆಕೆಗೆ ಯೋಗ ಪಾಠ ಮಾಡಿದರೂ ಸರಿಹೋಗಲಿಲ್ಲ. ಆರೋಪಿ ಸೋರಿಯಾಸಿಸ್ನಿಂದ ಬಳಲುತ್ತಿದ್ದ. ಆತನಿಗೆ ಬದುಕಲು ಆಸೆ ಇರಲಿಲ್ಲ. ಈ ಕಾರಣಗಳಿಂದಾಗಿ ಇಬ್ಬರು ತಮ್ಮ ಬದುಕು ಕೊನೆಗೊಳಿಸಲು ನಿರ್ಧರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದುರದೃಷ್ಟವಶಾತ್ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ನಡೆದ ಕೊಠಡಿಯಲ್ಲಿ ಮರಣ ಪತ್ರ ದೊರೆತಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಪೊಲೀಸರು ಐಪಿಸಿ ಸೆಕ್ಷನ್ 302ರ (ಆತ್ಮಹತ್ಯೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ವೇಗದೂತ ವ್ಯಾನ್; ಭೀಕರ ಅಪಘಾತದಲ್ಲಿ 8 ಮಂದಿ ಸಾವು