ETV Bharat / bharat

ಸಂಚರಿಸುತ್ತಿದ್ದ ರೈಲಿನಲ್ಲಿ ಕಾಲು ತುಳಿದಿದ್ದ ವಿವಾದ: ಟ್ರೈನ್​​​​​ ಒಳಗೇ ವ್ಯಕ್ತಿಯ ಹತ್ಯೆ - ರೈಲಿನಲ್ಲಿ ಕಾಲು ತುಳಿದಿದ್ದ ವಿವಾದ

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಕಲ್ಯಾಣ್‌ನಿಂದ ಟಿಟ್ವಾಲಾಗೆ ಹೊರಟಿದ್ದ ರೈಲಿನಲ್ಲಿ ಜನಜಂಗುಳಿಯಿಂದ ತುಂಬಿದ್ದ ಲಗೇಜ್ ಕಂಪಾರ್ಟ್‌ಮೆಂಟ್‌ಗೆ ವ್ಯಕ್ತಿಯೊಬ್ಬ ನುಗ್ಗಿ ಸ್ಥಳೀಯರ ಕಾಲು ತುಳಿದ ಪರಿಣಾಮ ಶುರುವಾದ ಜಗಳ ವಿವಾದಕ್ಕೆ ತಿರುಗಿ ಸಾವಿಗೀಡಾಗಿದ್ದಾನೆ. ಈ ಸಂಬಂಧ ಕಲ್ಯಾಣ್ ಲೋಹ್ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Accused Sunil Yadav arrested
ಆರೋಪಿ ಸುನೀಲ್ ಯಾದವ್ ಬಂಧನ
author img

By

Published : Mar 3, 2023, 9:16 PM IST

ಥಾಣೆ(ಮಹಾರಾಷ್ಟ್ರ) : ಸಂಚರಿಸುತ್ತಿದ್ದ ಲೋಕಲ್‌ ಕಲ್ಯಾಣ ರೈಲಿಗೆ 65 ವರ್ಷದ ವ್ಯಕ್ತಿಯೊಬ್ಬರು ಜನಜಂಗುಳಿಯಿಂದ ತುಂಬಿದ್ದ ಲಗೇಜ್ ಕಂಪಾರ್ಟ್‌ಮೆಂಟ್‌ಗೆ ನುಗ್ಗಿ ಸ್ಥಳೀಯರ ಕಾಲು ತುಳಿದ ಪರಿಣಾಮ ಶುರುವಾದ ಜಗಳ ವ್ಯಕ್ತಿಯ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಕಲ್ಯಾಣ್ ಲೋಹ್ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹತ್ಯೆ ಮಾಡಿದ ಸುನೀಲ್ ಯಾದವ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಬಾಬನ್ ಹಂದೆ(65) ಹತ್ಯೆಯಾದ ವ್ಯಕ್ತಿ.

ಮೃತ ಬಾಬನ್ ಎಂಬಾತನು, ಅಂಬಿವಲಿ ರೈಲು ನಿಲ್ದಾಣದ ಸಮೀಪದ ಅಟ್ಟಲಿ ಗ್ರಾಮದ ನಿವಾಸಿಯಾಗಿದ್ದು, ಆತನು ಗುರುವಾರ ಬೆಳಗ್ಗೆ ಪಡಿತರ ಚೀಟಿಯಲ್ಲಿ ಹೆಸರು ಕಡಿಮೆ ಮಾಡಲು ಕಲ್ಯಾಣ್ ವೆಸ್ಟ್ ನಲ್ಲಿರುವ ಪಡಿತರ ಕಚೇರಿಗೆ ಬಂದಿದ್ದರು. ಕೆಲಸ ಮುಗಿಸಿ ಮತ್ತೆ ಕಲ್ಯಾಣ್ ರೈಲು ನಿಲ್ದಾಣಕ್ಕೆ ಬಂದು ಮನೆಗೆ ತೆರಳಲು ಹೊರಟಿದ್ದರು. ಆರೋಪಿ ಯಾದವ್ ತನ್ನ ತಂದೆಯೊಂದಿಗೆ ಸಿಎಸ್‌ಟಿಯಿಂದ ಟಿಟ್ವಾಲಾಗೆ ಹೋಗುವ ಸ್ಥಳೀಯ ಲಗೇಜ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದರು. ಟಿಟ್ವಾಲಾಗೆ ಹೋಗುವ ಲೋಕಲ್ ಕಲ್ಯಾಣ್ ರೈಲು ನಿಲ್ದಾಣಕ್ಕೆ ಬಂದ ತಕ್ಷಣ, ಮೃತ ಬಾಬನ್ ಅವಸರದಲ್ಲಿ ಲಗೇಜ್ ಕಂಪಾರ್ಟ್‌ಮೆಂಟ್‌ ಏರಿದ್ದರು.

ಜನಜಂಗುಳಿಯಿಂದ ತುಂಬಿದ್ದ ಲಗೇಜ್ ಕಂಪಾರ್ಟ್​ಮೆಂಟ್​ದಲ್ಲಿ ದೂಡಾಟದಿಂದ ಮೃತ ಬಾಬನ್ ಆರೋಪಿ ಯಾದವ್ ಅವರ ತಂದೆಯ ಕಾಲನ್ನು ತುಳಿದಿದ್ದಾನೆ. ಇದರಿಂದ ಜಗಳ ಶುರುವಾಗಿದೆ. ಆದರೆ ಇಬ್ಬರ ನಡುವ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಆರೋಪಿ ಯಾದವ್ ಮೃತ ಬಾಬನಿಗೆ ತೀವ್ರವಾಗಿ ಥಳಿಸಿದ್ದಾನೆ. ಅಷ್ಟೇ ಅಲ್ಲದೇ ಲಗೇಜ್ ಕಂಪಾರ್ಟ್​ ಮೆಂಟ್​ಗೆ ಬಾಬಾ ತಲೆಯನ್ನು ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ಬಾಬನ್ ತೀವ್ರ ಗಾಯಗೊಂಡು, ಲಗೇಜ್ ವಿಭಾಗದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಇದನ್ನೂ ಕಂಡ ಕೆಲ ಪ್ರಯಾಣಿಕರು ಆರೋಪಿಯನ್ನು ಹಿಡಿದು ತಿಟ್ವಾಲಾ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗುರುವಾರ ಮಧ್ಯಾಹ್ನ 2.35 ಕ್ಕೆ ಟಿಟ್ವಾಲಾ ರೈಲು ನಿಲ್ದಾಣದಲ್ಲಿ ಸ್ಥಳೀಯ ಸ್ಟ್ಯಾಂಡಿಂಗ್‌ನ ಲಗೇಜ್ ವಿಭಾಗದಲ್ಲಿ ವ್ಯಕ್ತಿಯೊಬ್ಬರ ರಕ್ತದ ಮಡುವಿನಲ್ಲಿ ಬಿದ್ದಿರುವ ಬಗ್ಗೆ ಕಲ್ಯಾಣ್ ಲೋಹ್ಮಾರ್ಗ್ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಬಾಬನ್ ಅವರನ್ನೂ ರೈಲ್ವೆ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಫಲಿಸದೇ ಬಾಬನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಾತ್ರಿ ಪಡಿಸಿದ್ದಾರೆ.

ಬಾಬನ್ ಹತ್ಯೆಗೆ ಸಂಬಂಧಿಸಿದಂತೆ ಆತನ ಪುತ್ರ ಕಲ್ಯಾಣ್ ಲೋಹ್ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 302 ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನೂ ಕಲ್ಯಾಣ್ ರೈಲ್ವೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:11 ವರ್ಷಗಳಿಂದ ತವರು ಮನೆಯ ಸಂಪರ್ಕಕ್ಕೆ ಸಿಗದಂತೆ ಪತ್ನಿಯನ್ನು ಗೃಹ ಬಂಧನದಲ್ಲಿಟ್ಟಿದ್ದ ಗಂಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.