ಲೂಧಿಯಾನ (ಪಂಜಾಬ್): ಖಲಿಸ್ತಾನ್ ಪ್ರತ್ಯೇಕವಾದಿ ನಾಯಕ ಅಮೃತಪಾಲ್ ಸಿಂಗ್ನ ಮತ್ತೊಬ್ಬ ಸಹಚರ ಜೋಗಾ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ. ಜೋಗಾ ಸಿಂಗ್ನನ್ನು ಲೂಧಿಯಾನ ಜಿಲ್ಲೆಯ ಸಾಹ್ನೆವಾಲ್ ಎಂಬಲ್ಲಿ ಬಂಧಿಸಲಾಗಿದೆ. ಇತ್ತೀಚೆಗಷ್ಟೇ ಲೂಧಿಯಾನದ ಸಾಹ್ನೆವಾಲ್ ಹೆದ್ದಾರಿಯಲ್ಲಿರುವ ಗುರುದ್ವಾರ ರೆಡು ಸಾಹಿಬ್‌ನಿಂದ ಮೂವರು ಶಂಕಿತರನ್ನು ಬಂಧಿಸಲಾಗಿತ್ತು. ಈ ಮೂವರಲ್ಲಿ ಜೋಗಾ ಸಿಂಗ್ ಕೂಡ ಒಬ್ಬ ಎನ್ನಲಾಗಿದೆ. ಬಂಧಿತ ಜೋಗಾ ಸಿಂಗ್ ಅಮೃತಪಾಲ್‌ಗೆ ಆಪ್ತನಾಗಿನಾಗಿದ್ದಾನೆ. ಅಮೃತಪಾಲ್ ಬಗ್ಗೆ ಹಲವು ಪ್ರಮುಖ ಮಾಹಿತಿಯನ್ನು ಈತ ಹೊಂದಿದ್ದಾನೆ. ಅಲ್ಲದೇ, ಈತನ ಸಿಮ್ ಕಾರ್ಡ್ ನಂಬರ್ನಿಂದ ಇತ್ತೀಚಿಗೆ ವಿಡಿಯೋವೊಂದು ಹರಿಬಿಡಲಾಗಿತ್ತು. ಇದರ ಬೆನ್ನಲ್ಲೆ ಚಂಡೀಗಢ ಗುಪ್ತಚರ ತಂಡವು ಜೋಗ್ ಸಿಂಗ್ನನ್ನು ಬಂಧಿಸಿದೆ.
ಇದನ್ನೂ ಓದಿ : ಹರಿಯಾಣದಲ್ಲೇ ತಲೆ ಮರೆಸಿಕೊಂಡು ಕುಳಿತಿದ್ದ ಅಮೃತಪಾಲ್ ಸಿಂಗ್: ಮಹಿಳೆ ಪೊಲೀಸ್ ವಶಕ್ಕೆ
ಅಮೃತ್ಪಾಲ್ಗಾಗಿ ನಿರಂತರ ಶೋಧ ಕಾರ್ಯಾಚರಣೆ : ಮತ್ತೊಂದೆಡೆ ಅಮೃತಪಾಲ್ ಬಂಧನಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ನಿರಂತರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅದರೆ ಅಮೃತಪಾಲ್ ತನ್ನ ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಪಂಜಾಬ್ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದಾನೆ. ಪಂಜಾಬ್‌ನ ಧಾರ್ಮಿಕ ಸ್ಥಳದಲ್ಲಿ ಅಮೃತಪಾಲ್ ತಲೆಮರೆಸಿಕೊಂಡಿರಬಹುದು ಎಂದು ಪಂಜಾಬ್ ಪೊಲೀಸರು ಶಂಕಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆತ ಅಡಗಿಕೊಂಡಿರುವ ಶಂಕಿತ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಅಮೃತಪಾಲ್‌ಗೆ ಸೇರಿದ ವಾಹನಗಳು ಎಲ್ಲೆಲ್ಲಿ ಪತ್ತೆಯಾಗಿವೆಯೋ ಅಲ್ಲೆಲ್ಲಾ ಕೂಡ ತನಿಖೆ ಕೈಗೊಳ್ಳಲಾಗಿದೆ. ಜೊತೆಗೆ ಡ್ರೋನ್‌ಗಳ ಸಹಾಯದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :ಅಮೃತ್ ಪಾಲ್ ಸಿಂಗ್ ನೇಪಾಳದಲ್ಲಿ ಅಡಗಿದ್ದಾನೆ: ಭಾರತೀಯ ರಾಯಭಾರ ಕಚೇರಿ ಹೇಳಿಕೆ
ನಿನ್ನೆ ದಲ್ಜಿತ್ ಕಲ್ಸಿ ಬಂಧನ : ನಿನ್ನೆ ಪಂಜಾಬ್ ಪೊಲೀಸರು ಅಮೃತಪಾಲ್ನ ಇನ್ನೊಬ್ಬ ಆಪ್ತ ಸಹಚರ ದಲ್ಜಿತ್ ಕಲ್ಸಿಯನ್ನು ಗುರುಗ್ರಾಮ್ನಲ್ಲಿ ಬಂಧಿಸಿದ್ದರು. ಅಲ್ಲದೆ, ಕಲ್ಸಿ ಹಲವಾರು ವಿದೇಶಗಳಿಗೆ ಭೇಟಿ ನೀಡಿದ್ದು ಇದರ ಬಗ್ಗೆ ತನಿಖಾ ಸಂಸ್ಥೆಗಳು ಮಾಹಿತಿಯನ್ನು ಕಲೆಹಾಕುತ್ತಿವೆ. ಕಲ್ಸಿಯು ಅಮೃತಪಾಲ್‌ಗೆ ಅತ್ಯಂತ ಹತ್ತಿರವಾಗಿದ್ದು, ಈ ಹಿಂದೆ ಪಂಜಾಬ್‌ನಲ್ಲಿ ಮಾಡೆಲಿಂಗ್, ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದ. ದೆಹಲಿಯಲ್ಲೂ ತನ್ನ ಕಚೇರಿ ತೆರೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಹೀಗಾಗಿಯೇ ಈತ ಈ ಹಿಂದೆ ನಡೆಸಿದ ಮತ್ತು ಪಾಲ್ಗೊಂಡ ಕಾರ್ಯಕ್ರಮಗಳ ಬಗ್ಗೆಯೂ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ, ಯಾವ ಕಾರಣಕ್ಕಾಗಿ ಅವನು ಆ ಕೆಲಸ ಬಿಟ್ಟಿದ್ದ, ಜೈಲಿನಲ್ಲಿರುವ ಹಲವು ದರೋಡೆಕೋರರ ಸ್ನೇಹ ಬೆಳೆಸಿದ್ದ ಎಂಬ ಕುರಿತೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಮಂದೀಪ್ ಸಿಧು ಜನಪ್ರಿಯತೆಯ ಲಾಭ ಪಡೆಯಲು ಮುಂದಾಗಿದ್ದ ಅಮೃತಪಾಲ್..!