ETV Bharat / bharat

ಮಣಿಪುರ ಸಂಘರ್ಷಕ್ಕೆ ಅಧಿವೇಶನ ಬಲಿ: ಸುಗಮ ಕಲಾಪಕ್ಕಾಗಿ ವಿಪಕ್ಷ ನಾಯಕರಿಗೆ ಪತ್ರ ಬರೆದ ಅಮಿತ್​ ಶಾ - ಈಟಿವಿ ಭಾರತ ಕನ್ನಡ

ಉಭಯ ಸದನಗಳಲ್ಲಿ ಮಣಿಪುರ ಸಂಘರ್ಷ ಚರ್ಚೆಗೆ ಅವಕಾಶ ನೀಡುವುದಾಗಿ ಇಬ್ಬರು ವಿಪಕ್ಷ ನಾಯಕರುಗಳಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪತ್ರ ಬರೆದಿದ್ದಾರೆ.

Amit Shah
ಅಮಿತ್​ ಶಾ
author img

By

Published : Jul 25, 2023, 8:54 PM IST

ಸಂಸತ್ತಿನಲ್ಲಿ ಮಣಿಪುರ ಸಂಘರ್ಷ ಜೋರಾಗಿದ್ದು, ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಮೇಲ್ಮನೆ ಮತ್ತು ಕೆಳಮನೆಯ ಸಭಾಧ್ಯಕ್ಷರು ಸುಗಮ ಕಲಾಪಕ್ಕಾಗಿ ಮನವಿ ಮಾಡಿದರೂ, ವಿಪಕ್ಷಗಳು ಪಟ್ಟು ಸಡಿಲಿಸಿಲ್ಲ. ಈ ಮಧ್ಯೆ ಸುಗಮ ಕಲಾಪಕ್ಕಾಗಿ ಮಣಿಪುರ ಸಂಘರ್ಷ ಚರ್ಚೆಗೆ ಅವಕಾಶ ನೀಡುವುದಾಗಿ ಇಬ್ಬರು ವಿಪಕ್ಷ ನಾಯಕರುಗಳಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪತ್ರ ಬರೆದಿದ್ದಾರೆ. ಸರ್ಕಾರವು ಚರ್ಚೆಗೆ ಸಿದ್ಧವಾಗಿದೆ ಮತ್ತು ಎಲ್ಲಾ ಪಕ್ಷಗಳ ಸಹಕಾರವನ್ನು ಕೋರುತ್ತದೆ ಎಂದು ಹೇಳಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಮಿತ್​ ಶಾ ಪತ್ರ ಬರೆದಿದ್ದು, ಈ ಕುರಿತು ಅವರು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ. "ಇಂದು ನಾನು ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದೇನೆ. ಮಣಿಪುರ ಸಮಸ್ಯೆಯ ಚರ್ಚೆಯಲ್ಲಿ ಅವರ ಅಮೂಲ್ಯವಾದ ಸಹಕಾರಕ್ಕಾಗಿ ಮನವಿ ಮಾಡಿದ್ದೇನೆ. ಮಣಿಪುರದ ಸಮಸ್ಯೆಯನ್ನು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಇದಕ್ಕಾಗಿ ಎಲ್ಲ ಪಕ್ಷಗಳ ಸಹಕಾರವನ್ನು ಕೋರುತ್ತಿದ್ದೇವೆ. ಈ ಮಹತ್ವದ ಸಮಸ್ಯೆ ಬಗೆಹರಿಸಲು ಎಲ್ಲ ಪಕ್ಷಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ಟ್ವೀಟ್​ ಜೊತೆ ವಿಪಕ್ಷ ನಾಯಕರುಗಳಿಗೆ ಬರೆದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ವಿಪಕ್ಷ ನಡೆಸುತ್ತಿರುವ ಪ್ರತಿಭಟನೆಯ ನಡುವೆಯೇ ಲೋಕಸಭೆಯಲ್ಲಿ ಬಹು - ರಾಜ್ಯ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ 2022 ಅನ್ನು ಅಂಗೀಕರಿಸಲಾಯಿತು. ಇದಕ್ಕೂ ಮೊದಲು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಟ್ವೀಟ್​ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರ ಹಿಂಸಾಚಾರ ಕುರಿತು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದರು.

"ಕಳೆದ 83 ದಿನಗಳಿಂದ ಮಣಿಪುರದಲ್ಲಿ ನಿರಂತರ ಹಿಂಸಾಚಾರ ನಡೆಯುತ್ತಿದೆ. ಈ ಬಗ್ಗೆ ಪ್ರಧಾನಿ ಸಂಸತ್ತಿನಲ್ಲಿ ಸಮಗ್ರ ಹೇಳಿಕೆ ನೀಡಬೇಕಾಗಿದೆ. ಮಣಿಪುರ ಹಿಂಸಾಚಾರದ ಬಗ್ಗೆ INDIA ಮೋದಿ ಸರ್ಕಾರದಿಂದ ಉತ್ತರವನ್ನು ಕೇಳ ಬಯಸುತ್ತದೆ. ದೇಶದ ಈಶಾನ್ಯ ಪರಿಸ್ಥಿತಿ ತುಂಬಾ ಹದೆಗೆಟ್ಟಿದೆ. ಪ್ರಧಾನಿ ಮೋದಿಯವರು ತಮ್ಮ ಅಹಂಕಾರ ಬಿಟ್ಟು ಮಣಿಪುರದ ವಿಚಾರದ ಮೇಲೆ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪರಿಸ್ಥಿತಿ ಸುಧಾರಿಸಲು ತಮ್ಮ ಸರ್ಕಾರ ಏನು ಮಾಡುತ್ತಿದೆ ಮತ್ತು ಮಣಿಪುರದಲ್ಲಿ ಯಾವಾಗ ಸಹಜ ಸ್ಥಿತಿ ಮರಳುತ್ತದೆ ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಬೇಕು" ಎಂದು ಒತ್ತಾಯಿಸಿದ್ದರು.

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 26 ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿವೆ. ಇದು ಉಭಯ ಸದನಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ಜುಲೈ 20 ರಂದು ಪ್ರಾರಂಭವಾದ ಮುಂಗಾರು ಅಧಿವೇಶನವು ಆಗಸ್ಟ್ 11 ರವರೆಗೆ ನಡೆಯಲಿದೆ. ವಿರೋಧ ಪಕ್ಷಗಳ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ಹಿಂಪಡೆಯಲು ವಿಪಕ್ಷ ನಾಯಕರು ನಿರಾಕರಿಸಿದ್ದಾರೆ.

ಇದನ್ನೂ ಓದಿ: Modi on opposition alliance: ಈಸ್ಟ್‌ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದ್ದೀನ್‌ ಪ್ರಸ್ತಾಪಿಸಿ ಪ್ರತಿಪಕ್ಷಗಳ 'ಇಂಡಿಯಾ'ಗೆ ಮೋದಿ ಚಾಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.