ETV Bharat / bharat

ಅಮಿತ್​ ಶಾಗಿಂತಲೂ, ರಾಜನಾಥ್​ ಸಿಂಗ್ ಮೋದಿ ಸಂಪುಟದ​ ಜನಪ್ರಿಯ ಸಚಿವ.. ಹೀಗಂತಿದೆ ಸಮೀಕ್ಷೆ.. - ಮೋದಿ ಸಂಪುಟದ ಉತ್ತಮ ಕೆಲಸಗಾರ ರಾಜನಾಥ್ ಸಿಂಗ್​

ಎನ್‌ಡಿಎ ಸದಸ್ಯರ ಪ್ರಕಾರ 15 ಉತ್ತಮ ಸಚಿವರ ಪಟ್ಟಿಯಲ್ಲಿ ಅಮಿತ್​ ಶಾ 7.79 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 8.36 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ 8.07 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ..

amit-shah-top-favourite
ಗೃಹ ಸಚಿವ ರಾಜನಾಥ್​ ಸಿಂಗ್
author img

By

Published : May 30, 2022, 4:14 PM IST

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ 'ಉತ್ತಮ ಕಾರ್ಯನಿರ್ವಹಣೆಯ ಸಚಿವ'ರಾಗಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೊರ ಹೊಮ್ಮಿದ್ದಾರೆ. ರಕ್ಷಣಾ ಸಚಿವರ ಕಾರ್ಯಕ್ಕೆ ಬಿಜೆಪಿ ಅಲ್ಲದೇ ವಿಪಕ್ಷ ಸದಸ್ಯರೂ ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗೃಹ ಸಚಿವ ಅಮಿತ್​ ಶಾ ಅವರು ಎನ್​ಡಿಎ ಸದಸ್ಯರಲ್ಲಿ ಪ್ರಭಾವಿ ಸಚಿವರಾಗಿದ್ದರೆ, ವಿಪಕ್ಷಗಳ ಮನಗೆಲ್ಲುವಲ್ಲಿ ಶಾ ಸೋತು ಕೊನೆ ಸ್ಥಾನ ಪಡೆದಿದ್ದಾರೆ.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 8 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಖಾಸಗಿ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಸಮೀಕ್ಷೆಯ ಪ್ರಕಾರ, ರಾಜನಾಥ್​ ಸಿಂಗ್​ರ ಕಾರ್ಯವೈಖರಿಗೆ ಪ್ರತಿಪಕ್ಷಗಳೂ ಫಿದಾ ಆಗಿವೆ. ಹೀಗಾಗಿ, ಅವರು ಮೋದಿ ಸಂಪುಟದ ಜನಪ್ರಿಯ ಮತ್ತು ಉತ್ತಮ ಕೆಲಸಗಾರ ಎಂಬ ಪಟ್ಟ ಪಡೆದಿದ್ದಾರೆ. ಎನ್​ಡಿಎ ಮತದಾರರು 8.36 ಅಂಕಗಗಳ್ನು ನೀಡಿದರೆ, ವಿರೋಧ ಪಕ್ಷದವರು 7.03 ಅಂಕಗಳನ್ನು ನೀಡಿದ್ದಾರೆ.

ಜನಪ್ರಿಯತೆಯಲ್ಲೂ ಮೊದಲು : ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕೆಲಸದಲ್ಲೂ ಮಾತ್ರವಲ್ಲದೇ, ಜನಪ್ರಿಯತೆಯಲ್ಲೂ ಹಿಂದೆ ಬಿದ್ದಿಲ್ಲ. 18 ರಿಂದ 24 ವರ್ಷ ಮತ್ತು 55 ಪ್ಲಸ್ ವರ್ಷ ವಯಸ್ಸಿನ ಕೋಟಾದಲ್ಲೂ ಜನಪ್ರಿಯ ಸಚಿವರಾಗಿದ್ದಾರೆ. 18 ರಿಂದ 24 ವರ್ಷದ ವಯಸ್ಕರೂ ಕೂಡ ರಾಜನಾಥ್​ ಸಿಂಗ್​ರಿಗೆ 7.34 ಅಂಕಗಳನ್ನು ನೀಡಿದ್ದು, ಈ ಕೋಟಾದಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಇದಲ್ಲದೇ, 55 ಪ್ಲಸ್ ವಯಸ್ಸಿನವರೂ ಕೂಡ 7.72 ಅಂಕಗಳನ್ನು ನೀಡಿದ್ದಾರೆ.

ಪ್ರತಿಪಕ್ಷಗಳ ಮನೆಗೆಲ್ಲದ ಅಮಿತ್​ ಶಾಗೆ ಕೊನೆ ಸ್ಥಾನ : ಇನ್ನು ಮೋದಿ ಸಂಪುಟದ ಪವರ್​ಫುಲ್​ ಸಚಿವ ಎಂದೇ ಬಿಂಬಿತವಾಗಿರುವ ಗೃಹ ಸಚಿವ ಅಮಿತ್ ಶಾ ಅವರು ಎನ್‌ಡಿಎ ಮತದಾರರಲ್ಲಿ ಹೆಚ್ಚು ಜನಪ್ರಿಯರಾಗಿದ್ದರೂ ಪ್ರತಿಪಕ್ಷಗಳ ಮನಗೆಲ್ಲುವಲ್ಲಿ ವಿಫಲರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಪುಟದ 15 ಸಚಿವರ ಪಟ್ಟಿಯಲ್ಲಿ ಶಾ ಕೊನೆಯ ಸ್ಥಾನದಲ್ಲಿದ್ದಾರೆ.

ಎನ್‌ಡಿಎ ಸದಸ್ಯರ ಪ್ರಕಾರ 15 ಉತ್ತಮ ಸಚಿವರ ಪಟ್ಟಿಯಲ್ಲಿ ಅಮಿತ್​ ಶಾ 7.79 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 8.36 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ 8.07 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ, ವಿರೋಧ ಪಕ್ಷದ ಮತದಾರರು 5.53 ಕನಿಷ್ಠ ಅಂಕಗಳನ್ನು ನೀಡುವ ಮೂಲಕ ಶಾ ಅವರನ್ನು ಕೊನೆಯ ಸ್ಥಾನಕ್ಕೆ ತಳ್ಳಿದ್ದಾರೆ. ಅಮಿತ್ ಶಾಗಿಂತಲೂ ನಿತಿನ್​ ಗಡ್ಕರಿ ಹೆಚ್ಚು ಅಂದರೆ, 6.81 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

ಓದಿ: ನೇಪಾಳ ವಿಮಾನ ದುರಂತ ಕರಾಳ ಕಥೆ : ಮಕ್ಕಳಿಗಾಗಿ ಟ್ರಿಪ್​ ಬಂದು ಜೀವ ತೆತ್ತ ವಿಚ್ಛೇದಿತ ದಂಪತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.