ETV Bharat / bharat

ಅಸ್ಸೋಂ ಪ್ರವಾಸದಲ್ಲಿ ಅಮಿತ್ ಶಾ... ಇಂಡೋ-ಬಾಂಗ್ಲಾ ಗಡಿ ಭದ್ರತೆ ಪರಿಶೀಲನೆ

ಅಸ್ಸೋಂ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಭಾರತ-ಬಾಂಗ್ಲಾ ಗಡಿ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.

Amit Shah Assam
Amit Shah Assam
author img

By

Published : May 9, 2022, 8:46 PM IST

ಮಂಕಾಚಾರ್​(ಅಸ್ಸೋಂ): ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಸ್ಸೋಂಗೆ ಭೇಟಿ ನೀಡಿದ್ದು, ಮೂರು ದಿನಗಳ ಪ್ರವಾಸದಲ್ಲಿರಲಿದ್ದಾರೆ. ಈ ವೇಳೆ ಅವರು ಭಾರತ-ಬಾಂಗ್ಲಾದೇಶದ ಗಡಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಪರಿಶೀಲನೆ ನಡೆಸಿದರು.

ಬಾಂಗ್ಲಾದೇಶದ ಗಡಿಯಲ್ಲಿರುವ ಮಂಕಾಚಾರ್​ನ ಬಿಎಸ್​ಎಫ್​ ಯೋಧರ ಗಡಿಯ ಹೊರಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಅವರೊಂದಿಗೆ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಸಹ ಸಾಥ್ ನೀಡಿದರು. 24X7 ಸೇವೆ ಸಲ್ಲಿಸುತ್ತಿರುವ ಬಿಎಸ್​ಎಫ್​ ಯೋಧರನ್ನ ಶ್ಲಾಘಿಸಿದ ಅವರು, ನಿಮ್ಮಿಂದಾಗಿ ದೇಶದ ಪ್ರತಿಯೊಬ್ಬ ನಾಗರಿಕರು ಸುರಕ್ಷಿತರಾಗಿದ್ದಾರೆಂದು ತಿಳಿಸಿದರು.

Amit Shah Assam
ಇಂಡೋ-ಬಾಂಗ್ಲಾ ಗಡಿ ಭದ್ರತೆ ಪರಿಶೀಲನೆ ನಡೆಸಿದ ಅಮಿತ್ ಶಾ

ಗಡಿ ಭೇಟಿ ವೇಳೆ ಭದ್ರತಾ ಪರಿಸ್ಥಿತಿ, ತಮ್ಮ ಮುಂದಿರುವ ಸವಾಲು ಹಾಗೂ ಅವುಗಳನ್ನ ಎದುರಿಸಲು ಕೈಗೊಂಡಿರುವ ಕಾರ್ಯತಂತ್ರದ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಲಾಯಿತು. ಈ ವೇಳೆ, ಬಿಎಸ್​ಎಫ್ ಪಡೆ ಜೊತೆ ಅಮಿತ್ ಶಾ ಚರ್ಚೆ ಸಹ ನಡೆಸಿದರು.

ಇದನ್ನೂ ಓದಿ: ವಿಧಾನಸಭೆ ಗೇಟ್​​​ನಲ್ಲಿ ಖಲಿಸ್ತಾನ್​ ಧ್ವಜ ಹಾರಿಸಿದ್ದು ನಾವೇ: ಒಪ್ಪಿಕೊಂಡ SFJಯಿಂದ ವಿಡಿಯೋ!

13 ನಕ್ಸಲರು ಶರಣಾಗತಿ: ಅಮಿತ್ ಶಾ ಅಸ್ಸೋಂನ ಮಂಕಾಚಾರ್​​ಗೆ ಭೇಟಿ ನೀಡುವುದಕ್ಕೂ ಸ್ವಲ್ಪ ಸಮಯ ಮುಂಚಿತವಾಗಿ ಇಲ್ಲಿನ ಮಾವೋವಾದಿ ಸಂಘಟನೆ ನ್ಯಾಷನಲ್​ ಲಿಬರೇಷನ್​ನ 13 ಮಾವೋವಾದಿಗಳು ಭದ್ರತಾ ಪಡೆ ಎದುರು ಶರಣಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.