ETV Bharat / bharat

ಛತ್ತೀಸ್​​ಗಢ ಕಾಂಗ್ರೆಸ್​ ಭಿನ್ನಮತ: ಮತ್ತಷ್ಟು ಶಾಸಕರು ದೆಹಲಿಗೆ ದೌಡು

author img

By

Published : Oct 2, 2021, 6:39 AM IST

ಸಿಎಂ ಪಟ್ಟಕ್ಕಾಗಿ ಛತ್ತೀಸ್​ಗಢ ಕಾಂಗ್ರೆಸ್​ನಲ್ಲಿ ಒಳಜಗಳ ಆರಂಭವಾಗಿ ತಿಂಗಳುಗಳು ಕಳೆದಿವೆ. ಈ ಒಂದು ಬಣ ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಸಿಎಂ ಮತ್ತು ಶಾಸಕರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.

amid-leadership-change-buzz-more-chhattisgarh-mlas-reaching-delhi
ಛತ್ತಿಸ್​​ಗಢ ಕಾಂಗ್ರೆಸ್​ ಭಿನ್ನಮತ: ಮತ್ತಷ್ಟು ಶಾಸಕರು ದೆಹಲಿಗೆ ದೌಡು

ನವದೆಹಲಿ: ದೇಶದ ಹಲವು ರಾಜ್ಯಗಳ ಕಾಂಗ್ರೆಸ್ ಘಟಕಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಧಿಕಾರಕ್ಕಾಗಿ ಅಥವಾ ಮುಂದಿನ ಇತರ ವಿಚಾರಗಳಿಗಾಗಿ ಕಿತ್ತಾಟ ಆರಂಭವಾಗಿದೆ. ಕೆಲವು ತಿಂಗಳುಗಳ ಹಿಂದೆ ಛತ್ತೀಸ್​ಗಢದಲ್ಲಿ ಆರಂಭವಾಗಿದ್ದ ಕಾಂಗ್ರೆಸ್​ ಒಳಜಗಳ ದೆಹಲಿ ತಲುಪಿದೆ.

ಛತ್ತೀಸ್​ಗಢದಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ ಹಲವಾರು ಶಾಸಕರು ದೆಹಲಿಗೆ ಭೇಟಿಯಾಗುತ್ತಿದ್ದಾರೆ. ಸಿಎಂ ಭೂಪೇಶ್ ಬಘೇಲ್ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಅವರ ಬೆಂಬಲಿಗ ಶಾಸಕರು ದೆಹಲಿಗೆ ತೆರಳಿದ್ದು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭೂಪೇಶ್ ಬಘೇಲ್ ಪರ ಶಾಸಕರು ಇಲ್ಲಿ ಬಲಪ್ರದರ್ಶನವೆಂಬುದು ಇಲ್ಲ. ಅವರು ತಮ್ಮ ತಮ್ಮ ಸ್ವಂತ ವಿಚಾರಗಳಿಗೆ ದೆಹಲಿಗೆ ತೆರಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಭೂಪೇಶ್ ಬಘೇಲ್ ದೆಹಲಿಗೆ ತೆರಳಿದ್ದು ಯಾಕೆ..?

ಭೂಪೇಶ್ ಬಘೇಲ್ ಸಿಎಂ ಆದಾಗಿನಿಂದಲೂ ಛತ್ತೀಸ್​ಗಢ ಕಾಂಗ್ರೆಸ್​​​ನಲ್ಲಿ ಆಗಾಗ ಸ್ವಲ್ಪ ಮಟ್ಟದ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿದ್ದವು. ಚುನಾವಣೆ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿದ್ದ, ಈಗ ಆರೋಗ್ಯ ಸಚಿವ ತ್ರಿಭುವನೇಶ್ವರ್ ಸರಣ್ ಸಿಂಗ್ ಡಿಯೋ ಅಥವಾ ಟಿ.ಎಸ್.ಡಿಯೋ ಅವರೇ ವಿಧಾನಸಭಾ ಚುನಾವಣೆ ಗೆಲುವಿಗೆ ಕಾರಣ ಎಂದು ಅವರ ಬೆಂಬಲಿಗರು ಹೇಳಿಕೊಂಡಿದ್ದರು.

ಕೆಲವು ಬೆಂಬಲಿಗರು ಟಿ.ಎಸ್.ಡಿಯೋ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಸಿಎಂ ಸ್ಥಾನ ಟಿ.ಎಸ್.ಡಿಯೋಗೆ ಒಲಿಯಲಿಲ್ಲ. ಜೂನ್​​ನಲ್ಲಿ ಬಘೇಲ್​ ಸರ್ಕಾರವು ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಮತ್ತೆರಡು ವರ್ಷಗಳಿಗಾದರೂ ಸಿಎಂ ಆಗಿ ಟಿ.ಎಸ್.ಡಿಯೋ ಅವರನ್ನು ನೇಮಿಸಬೇಕೆಂಬ ಒತ್ತಡ ಹೆಚ್ಚಾಯ್ತು.

ಟಿ.ಎಸ್.ಡಿಯೋ ಬೆಂಬಲಿಗರು ಜೂನ್​ನಿಂದ ಇಲ್ಲಿಯವರೆಗೆ ದೆಹಲಿ ತಲುಪಿ ಡಿಯೋ ಪರವಾಗಿ ಬಲಪ್ರದರ್ಶನ ಮಾಡಲು ಮುಂದಾಗಿದ್ದರು. ಇದೇ ಕಾರಣದಿಂದ ಈಗ ಬಘೇಲ್ ಪರವಾಗಿ ಶಾಸಕರು ದೆಹಲಿಗೆ ತೆರಳಿದ್ದಾರೆ. ಇವರ ಜೊತೆಗೆ ಭೂಪೇಶ್ ಬಘೇಲ್ ಕೂಡಾ ದೆಹಲಿಯಲ್ಲಿ ಕ್ಯಾಂಪ್ ಹೂಡಿದ್ದಾರೆ.

ಪ್ರಸ್ತುತ ಪರಿಸ್ಥಿತಿಯೇನು..?

ಸದ್ಯಕ್ಕೆ ಬಘೇಲ್​ಗೆ ಆಪ್ತರಾಗಿರುವ ಶಾಸಕರು ದೆಹಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈಗಾಗಲೇ 20 ಮಂದಿ ಶಾಸಕರು ದೆಹಲಿಗೆ ತಲುಪಿದ್ದು, ಇನ್ನೂ ಹತ್ತು ಶಾಸಕರು ದೆಹಲಿಗೆ ತೆರಳಲಿದ್ದಾರೆ . ಅವರು ಬಘೇಲ್ ಆಪ್ತರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಎಲ್ಲ ಕ್ಷೇತ್ರಗಳಲ್ಲಿ ಹೂಡಿಕೆಗೆ ಜಗತ್ತಿನಲ್ಲಿ ಭಾರತವೇ ಉತ್ತಮ ದೇಶ - ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.