ETV Bharat / bharat

ಶಿಕ್ಷಕರ ವರ್ಗಾವಣೆ ನೀತಿ ಬಗ್ಗೆ ಮಹತ್ವದ ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್‌ - ವರ್ಗಾವಣೆ ಪಟ್ಟಿ

High Court Lucknow Bench News :ಗಂಡ - ಹೆಂಡತಿ ಇಬ್ಬರೂ ಸರ್ಕಾರಿ ಸೇವೆಯಲ್ಲಿದ್ದರೆ, ಒಂದೇ ಸ್ಥಳದಲ್ಲಿ ಅವರ ಪೋಸ್ಟಿಂಗ್ ಅನ್ನು ಪರಿಗಣಿಸಬಹುದು, ಆದರೆ ಇದು ಕಸಿದುಕೊಳ್ಳದೇ ಇರುವಂತಹ ಮೂಲಭೂತ ಹಕ್ಕೇನು ಅಲ್ಲ. ಆಡಳಿತಾತ್ಮಕ ಅಗತ್ಯಗಳಿಗೆ ಯಾವುದೇ ಹಾನಿಯಾಗದಿದ್ದಲ್ಲಿ ಮಾತ್ರ ಪತಿ ಮತ್ತು ಹೆಂಡತಿಯನ್ನು ಒಂದೇ ಸ್ಥಳದಲ್ಲಿ ಇರಿಸಲು ಸಾಧ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Allahabad High Court Lucknow Bench
ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ
author img

By ETV Bharat Karnataka Team

Published : Dec 9, 2023, 12:04 PM IST

ಲಖನೌ (ಉತ್ತರ ಪ್ರದೇಶ): ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದರೆ ಅವರಿಬ್ಬರನ್ನು ಒಂದೇ ಸ್ಥಳದಲ್ಲಿ ನಿಯೋಜಿಸುವುದನ್ನು ಪರಿಗಣಿಸಬಹುದು. ಆದರೆ ಅದು ಪರಿಗಣಿಸಲೇಬೇಕಾದ ಹಕ್ಕು ಅಲ್ಲ ಎಂದು ಹೈಕೋರ್ಟ್‌ನ ಲಖನೌ ಪೀಠವು ಮಹತ್ವದ ತೀಪು ನೀಡಿದೆ. ಅನಿವಾರ್ಯದ ಹಕ್ಕಲ್ಲ, ಆಡಳಿತಾತ್ಮಕ ಅಗತ್ಯಗಳಿಗೆ ಯಾವುದೇ ಹಾನಿ ಅಥವಾ ತೊಂದರೆಯಾಗದಿದ್ದಲ್ಲಿ ಮಾತ್ರ ಗಂಡ - ಹೆಂಡತಿಯನ್ನು ಒಂದೇ ಸ್ಥಳದಲ್ಲಿ ಇರಿಸಲು ಸಾಧ್ಯ ಎಂದು ನ್ಯಾಯಾಲಯ ಹೇಳಿದೆ.

ಜೂನ್ 26 ರಂದು ಬಿಡುಗಡೆ ಮಾಡಲಾದ ವರ್ಗಾವಣೆ ಪಟ್ಟಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ವಿಚಾರಣೆ ಮಾಡುವಾಗ, ನ್ಯಾಯಾಂಗ ಪರಿಶೀಲನೆ ಅಡಿ ಯಾವುದೇ ನಿರ್ದಿಷ್ಟ ನೀತಿಯನ್ನು ಮಾಡಲು ಹೈಕೋರ್ಟ್ ಕಾರ್ಯನಿರ್ವಾಹಕ ಅಥವಾ ಮೂಲ ಶಿಕ್ಷಣ ಮಂಡಳಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ನೂರಾರು ಸಹಾಯಕ ಶಿಕ್ಷಕರ ಪರವಾಗಿ ಸಲ್ಲಿಸಲಾದ ಒಟ್ಟು 36 ಅರ್ಜಿಗಳನ್ನು ಏಕಕಾಲದಲ್ಲಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಓಂ ಪ್ರಕಾಶ್ ಶುಕ್ಲಾ ನೇತೃತ್ವದ ಏಕ ಸದಸ್ಯ ಪೀಠವು ಈ ನಿರ್ಧಾರವನ್ನು ಅಂಗೀಕರಿಸಿದೆ. ಅರ್ಜಿದಾರರು ತಮ್ಮ ಸಂಗಾತಿಗಳು ರಾಷ್ಟ್ರೀಕೃತ ಬ್ಯಾಂಕ್‌ಗಳು, ಎಲ್‌ಐಸಿ, ವಿದ್ಯುತ್ ವಿತರಣಾ ನಿಗಮಗಳು, ಎನ್‌ಎಚ್‌ಪಿಸಿ, ಬಿಎಚ್‌ಇಎಲ್, ಇಂಟರ್ ಮೀಡಿಯೇಟ್ ಕಾಲೇಜುಗಳು, ಪವರ್ ಕಾರ್ಪೊರೇಷನ್ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಮುಂತಾದ ಸಾರ್ವಜನಿಕ ವಲಯಗಳಲ್ಲಿ ಪೋಸ್ಟ್ ಆಗಿದ್ದಾರೆ ಎಂದು ಹೇಳಿದರು.

ಈ ಕುರಿತು ದೂರು ನೀಡಿರುವ ಅರ್ಜಿದಾರರು ತಮ್ಮ ಸಂಗಾತಿಯನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. 2023ರ ಜೂನ್ 2 ರಂದು ಹೊರಡಿಸಿರುವ ಸರ್ಕಾರಿ ಆದೇಶದನ್ವಯ ಸರ್ಕಾರಿ ಸೇವೆಯಲ್ಲಿರುವ ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆಗೆ ಹತ್ತು ಅಂಕ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದರೆ, ಜೂನ್ 16, 2023 ರಂದು ಅಂಗೀಕರಿಸಿದ ಎರಡನೇ ಆದೇಶದಲ್ಲಿ, ಸಂವಿಧಾನದ 309 ನೇ ವಿಧಿಯ ನಿಬಂಧನೆಗೆ ಒಳಪಟ್ಟಿರುವ ನೌಕರರನ್ನು ಮಾತ್ರ ಸರ್ಕಾರಿ ಸೇವೆಯಲ್ಲಿ ನಿಯೋಜಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಇದು ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದೂ ಅರ್ಜಿದಾರರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಮಳೆ ನೀರು ಕಾಲುವೆ ನಿರ್ವಹಣೆಗೆ ಸಮಿತಿ ರಚಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಈ ಕುರಿತು ವಿಚಾರಣೆ ನಡೆಸಿದ ಪೀಠ, ಸರ್ಕಾರದ ನೀತಿಯಲ್ಲಿ ಯಾವುದೇ ಅವ್ಯವಹಾರ ಅಥವಾ ಅಕ್ರಮ ಇಲ್ಲ ಎಂದು ನ್ಯಾಯಾಲಯ ತನ್ನ ವಿವರವಾದ ತೀರ್ಪಿನಲ್ಲಿ ಹೇಳಿದೆ. ಆರ್ಟಿಕಲ್ 226 ರ ಅಧಿಕಾರವನ್ನು ಚಲಾಯಿಸಿ, ಸರ್ಕಾರ ಅಥವಾ ಮಂಡಳಿಗೆ ನೀತಿಗಳನ್ನು ಮಾಡಲು ಆದೇಶಿಸಲಾಗುವುದಿಲ್ಲ ಅಥವಾ ಮೇಲೆ ತಿಳಿಸಲಾದ ಸಾರ್ವಜನಿಕ ವಲಯದ ನೌಕರರನ್ನು ಸರ್ಕಾರಿ ಸೇವೆಯಲ್ಲಿ ಉದ್ಯೋಗಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಆದರೆ, ಅಂಗವೈಕಲ್ಯ ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಅರ್ಜಿದಾರರ ಪ್ರಕರಣವನ್ನು ಪರಿಗಣಿಸಲು ಮೂಲ ಶಿಕ್ಷಣ ಮಂಡಳಿಗೆ ನ್ಯಾಯಾಲಯ ಆದೇಶಿಸಿದೆ. ಜೊತೆಗೆ, ನ್ಯಾಯಾಲಯವು ಮೂಲ ಶಿಕ್ಷಣ ಇಲಾಖೆಯ ವರ್ಗಾವಣೆ ನೀತಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.