ನವದೆಹಲಿ: 'ಅಲ್ಲಾ' ಮತ್ತು 'ಓಂ' ಒಂದೇ ಹೇಳುವ ಮೂಲಕ ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ವಿವಾದ ಸೃಷ್ಟಿಸಿದ್ದಾರೆ. ಇದೇ ವೇಳೆ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸುಮಾರು 1,400 ವರ್ಷಗಳಿಂದ ಸಹೋದರರಂತೆ ವಾಸಿಸುತ್ತಿದ್ದಾರೆ ಎಂದು ಮದನಿ ಹೇಳಿದ್ದಾರೆ.
ದೆಹಲಿಯ ಜಮಿಯತ್ ಉಲಮಾ-ಐ-ಹಿಂದ್‌ನ 34ನೇ ಅಧಿವೇಶನದಲ್ಲಿ ಮದನಿ, ಮನು ಕುರಿತಾಗಿ ಮಾತನಾಡುತ್ತಾ ವಿವಾದಿತ ಹೇಳಿಕೆ ನೀಡಿದ್ದಾರೆ. ಶ್ರೀರಾಮ, ಬ್ರಹ್ಮ ಅಥವಾ ಶಿವ ಸೇರಿದಂತೆ ಯಾರೂ ಇಲ್ಲದಿದ್ದಾಗ ಮನು ಯಾರನ್ನು ಪೂಜಿಸುತ್ತಿದ್ದರು ಎಂದು ನಾನು ಅನೇಕ ದೊಡ್ಡ ಧರ್ಮ ಗುರುಗಳ ಬಳಿ ಕೇಳಿದ್ದೇನೆ. ಆಗ ಕೆಲವರು ಶಿವನನ್ನು ಮನು ಪೂಜಿಸುತ್ತಿದ್ದರು ಎಂದು ಹೇಳಿದರು. ಆದರೆ, ಹಲವು ಧರ್ಮ ಗುರುಗಳು 'ಓಂ' ಅನ್ನು ಪೂಜಿಸುತ್ತಿದ್ದರು ಎಂದು ತಿಳಿಸಿದರು. ನಂತರ ನಾನು ಓಂ ಎಂದರೆ ಏನು ಅಂತಾ ಕೇಳಿದೆ. ಇದಕ್ಕೆ ಓಂ ಎಂದರೆ ಗಾಳಿ. ಅದಕ್ಕೆ ಯಾವ ರೂಪ ಮತ್ತು ಬಣ್ಣ ಇಲ್ಲ. ಜಗತ್ತಿನ ಎಲ್ಲೆಡೆ ಕೂಡ ಇರುತ್ತದೆ ಎಂದು ಆ ಧರ್ಮ ಗುರುಗಳು ನನಗೆ ತಿಳಿಸಿದರು ಎಂಬುದಾಗಿ ಮದನಿ ವಿವರಿಸಿದ್ದಾರೆ.
-
#WATCH मैंने धर्म गुरु से पूछा जब कोई नहीं था,न श्री राम,न ब्रह्म,तब मनु किसे पूजते थे?कुछ लोग बताते हैं कि वे ओम को पूजते थे तब मैंने कहा कि इन्हें ही तो हम अल्लाह,आप ईश्वर,फारसी बोलने वाले खुदा और अंग्रेजी बोलने वाले गॉड कहते हैं: जमीयत उलेमा-ए-हिंद प्रमुख मौलाना सैयद अरशद मदनी pic.twitter.com/TxiKNjVhMk
— ANI_HindiNews (@AHindinews) February 12, 2023 " class="align-text-top noRightClick twitterSection" data="
">#WATCH मैंने धर्म गुरु से पूछा जब कोई नहीं था,न श्री राम,न ब्रह्म,तब मनु किसे पूजते थे?कुछ लोग बताते हैं कि वे ओम को पूजते थे तब मैंने कहा कि इन्हें ही तो हम अल्लाह,आप ईश्वर,फारसी बोलने वाले खुदा और अंग्रेजी बोलने वाले गॉड कहते हैं: जमीयत उलेमा-ए-हिंद प्रमुख मौलाना सैयद अरशद मदनी pic.twitter.com/TxiKNjVhMk
— ANI_HindiNews (@AHindinews) February 12, 2023#WATCH मैंने धर्म गुरु से पूछा जब कोई नहीं था,न श्री राम,न ब्रह्म,तब मनु किसे पूजते थे?कुछ लोग बताते हैं कि वे ओम को पूजते थे तब मैंने कहा कि इन्हें ही तो हम अल्लाह,आप ईश्वर,फारसी बोलने वाले खुदा और अंग्रेजी बोलने वाले गॉड कहते हैं: जमीयत उलेमा-ए-हिंद प्रमुख मौलाना सैयद अरशद मदनी pic.twitter.com/TxiKNjVhMk
— ANI_HindiNews (@AHindinews) February 12, 2023
ಮುಂದುವರೆದು ಮಾತನಾಡಿದ ಮದನಿ, ಇದೇ ಗಾಳಿಯನ್ನೇ ನಾವು ಕೂಡ 'ಅಲ್ಲಾ' ಎಂದು ಉಲ್ಲೇಖಿಸುತ್ತೇವೆ. ಇದಕ್ಕೆ ನೀವು (ಹಿಂದೂಗಳು) ಈಶ್ವರ ಎಂದು ಕರೆಯುತ್ತೀರಿ. ನಾವು ಸಹ ಇದನ್ನೇ ಅಲ್ಲಾ ಎಂದು ಕರೆಯುತ್ತೇವೆ. ಜೊತೆಗೆ ಪಾರ್ಸಿ ಮಾತನಾಡುವವರು ಖುದಾ ಎಂದು ಕರೆಯುತ್ತಾರೆ. ಇಂಗ್ಲಿಷ್ನಲ್ಲಿ ದೇವರು ಎಂದು ಕರೆಯುತ್ತಾರೆ. ಇದರರ್ಥ 'ಓಂ' ಮತ್ತು 'ಅಲ್ಲಾ' ಎರಡೂ ಒಂದೇ. ಜೊತೆಗೆ ಇದೇ ಮನು ಪೂಜಿಸುತ್ತಿದ್ದ ಏಕೈಕ ವಿಷಯವಾಗಿದ್ದು, ಒಂದೇ ಓಂ ಮತ್ತು ಅಲ್ಲಾನನ್ನು ಪೂಜಿಸಲಾಗುತ್ತದೆ. ಇದೇ ನಮ್ಮ ನೆಲದ ಶಕ್ತಿ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲ, ದೇಶದಲ್ಲಿ 1,400 ವರ್ಷಗಳಿಂದ ಹಿಂದೂಗಳು ಮತ್ತು ಮುಸ್ಲಿಮರು ಸಹೋದರರಂತೆ ವಾಸಿಸುತ್ತಿದ್ದಾರೆ. ನಾವು ಯಾರನ್ನೂ ಬಲವಂತವಾಗಿ ಇಸ್ಲಾಂಗೆ ಪರಿವರ್ತಿಸಿಲ್ಲ. ಬಿಜೆಪಿ ಸರ್ಕಾರದ ಅಡಿಯಲ್ಲಿ ಮಾತ್ರವೇ 20 ಕೋಟಿ ಮುಸ್ಲಿಮರನ್ನು ತಮಗೆ ಮನೆಗೆ ಕಳುಹಿಸಬೇಕೆಂದು ನಾವು ಕೇಳಿಸಿಕೊಂಡಿರುವುದು. ಜೊತೆಗೆ ಮನೆಗೆ ಕಳುಹಿಸಿ ಎಂದು ಹೇಳುವ ಮೂಲಕ ಹಿಂದೂಗಳಾಗಿ ಪರಿವರ್ತಿಸಲು ಅವರು ಉದ್ದೇಶಿಸಿದ್ದಾರೆ. ಆದರೆ, ಈ ಜನರಿಗೆ ಭಾರತದ ಇತಿಹಾಸದ ಬಗ್ಗೆ ಏನೂ ತಿಳಿದಿಲ್ಲ ಎಂದು ಮದನಿ ಕಿಡಿಕಾರಿದ್ದಾರೆ.
ಮದನಿ ಹೇಳಿಕೆಗೆ ವೇದಿಕೆ ಮೇಲೆಯೇ ಅಸಮ್ಮತಿ: 'ಅಲ್ಲಾ' ಮತ್ತು 'ಓಂ' ಒಂದೇ ಎಂಬ ಮೌಲಾನಾ ಮಹಮೂದ್ ಮದನಿ ಹೇಳಿಕೆಗೆ ಮಿಯತ್ ಉಲಮಾ-ಐ-ಹಿಂದ್‌ನ ಅಧಿವೇಶನದ ವೇದಿಕೆ ಮೇಲೆಯೇ ಅಸಮ್ಮತಿ ವ್ಯಕ್ತವಾಗಿದೆ. ಮದನಿ ವಿವಾದಾತ್ಮಕ ಭಾಷಣ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ ಹಲವು ಧಾರ್ಮಿಕ ಮುಖಂಡರು ವೇದಿಕೆಯಿಂದ ಹೊರ ನಡೆದಿದ್ದಾರೆ.
ವೇದಿಕೆಯಲ್ಲಿದ್ದ ಜೈನ ಮುನಿ ಆಚಾರ್ಯ ಲೋಕೇಶ್, ಮದನಿ ಹೇಳಿಕೆಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೌಹಾರ್ದತೆಯಿಂದ ಬದುಕುವುದನ್ನು ಮಾತ್ರ ನಾವು ಒಪ್ಪುತ್ತೇವೆ. ಆದರೆ ಓಂ, ಅಲ್ಲಾ, ಮನು ಎಂಬ ಎಲ್ಲ ಕಥೆಗಳು ಈ ಅಧಿವೇಶನದ ವಾತಾವರಣವನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ಅವರು ಹೇಳಿದ ಕಥೆಗಳಿಗಿಂತ ದೊಡ್ಡ ಕಥೆಗಳನ್ನು ಹೇಳಬಲ್ಲೆ. ನನ್ನೊಂದಿಗೆ ಚರ್ಚೆಗೆ ಬರುವಂತೆ ನಾನು ಅವರನ್ನು (ಮದನಿ) ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ, ತ್ರಿವಳಿ ತಲಾಖ್..: ಐತಿಹಾಸಿಕ ತೀರ್ಪಿತ್ತ ಕರ್ನಾಟಕದ ನ್ಯಾ.ಅಬ್ದುಲ್ ನಜೀರ್ ಈಗ ಆಂಧ್ರ ರಾಜ್ಯಪಾಲ