ETV Bharat / bharat

ಶ್ರೀನಗರದಲ್ಲಿ 25 ಕಿಮೀ, ಜಮ್ಮುವಿನಲ್ಲಿ 23 ಕಿಮೀ ಉದ್ದದ ಮೆಟ್ರೋ ರೈಲು ಮಾರ್ಗ - ದೇಶದಲ್ಲಿ 27 ಹೊಸ ಮೆಟ್ರೋ ಮಾರ್ಗ

ಕಣಿವೆ ನಾಡಿನ ಶ್ರೀನಗರದಲ್ಲಿ 25 ಕಿಮೀ ಉದ್ದದ ಮೆಟ್ರೋ ರೈಲು ಮತ್ತು ಜಮ್ಮುವಿನಲ್ಲಿ 23 ಕಿಮೀ ಉದ್ದದ ಮೆಟ್ರೋ ರೈಲು ಮಾರ್ಗ ಸ್ಥಾಪಿಸುವ ಪ್ರಸ್ತಾವ ಇದೆ.

all-you-need-to-know-about-srinagar-and-jammu-metro-rail-lines
ಶ್ರೀನಗರದಲ್ಲಿ 25 ಕಿಮೀ, ಜಮ್ಮುವಿನಲ್ಲಿ 23 ಕಿಮೀ ಉದ್ದದ ಮೆಟ್ರೋ ರೈಲು ಮಾರ್ಗ
author img

By

Published : Jun 2, 2023, 5:41 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ದೇಶದಲ್ಲಿ 27 ಹೊಸ ಮೆಟ್ರೋ ಮಾರ್ಗಗಳ ಆರಂಭಿಸಲು ಉದ್ದೇಶಿಸಿದೆ. ಈ ಮಾರ್ಗಗಳಲ್ಲಿ ಶ್ರೀನಗರ ಮತ್ತು ಜಮ್ಮು ನಗರಕ್ಕೂ ಮೆಟ್ರೋ ರೈಲುಗಳನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾವಿತ ಮೆಟ್ರೋ ಮಾರ್ಗಗಳನ್ನು ನಗರಾಭಿವೃದ್ಧಿ ಸಚಿವಾಲಯವು ಹಂತ ಹಂತವಾಗಿ ಅನುಮೋದಿಸಲಿದ್ದು, ನಂತರ ಅಂತಿಮ ಅನುಮೋದನೆಗಾಗಿ ಸಂಪುಟ ಮುಂದೆ ಇರಿಸಲಾಗುತ್ತದೆ.

ಶ್ರೀನಗರ ಮತ್ತು ಜಮ್ಮು ನಗರದಲ್ಲಿನ ಮೆಟ್ರೋ ಲೈಟ್‌ನ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಮೆಟ್ರೋಲೈಟ್ ಡಿಪಿಆರ್​ಅನ್ನು ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸ್ ಲಿಮಿಟೆಡ್ (Rail India Technical and Economic Service Limited - RITES) ಸಿದ್ಧಪಡಿಸಿದೆ. ಇದರ ಪ್ರಕಾರ ಈ ಯೋಜನೆಗೆ ಸುಮಾರು 10,599 ಕೋಟಿ ವೆಚ್ಚವಾಗಲಿದೆ.

ಮೊದಲ ಹಂತದಲ್ಲಿ ಬಂಟಲಬ್‌ನಿಂದ ಬದಿ ಬ್ರಾಹ್ಮಣವರೆಗೆ ಲಘು ಮೆಟ್ರೊ ಓಡಿಸುವ ಪ್ರಸ್ತಾವನೆ ಇದೆ. ಮುಂದಿನ ಹಂತದಲ್ಲಿ ವಿಜಯಪುರ ಏಮ್ಸ್‌ಗೆ ಕೊಂಡೊಯ್ಯಬೇಕು ಎಂಬ ಬೇಡಿಕೆಯನ್ನು ಜಮ್ಮು- ಪೂಂಚ್ ಸಂಸದ ಜುಗಲ್ ಕಿಶೋರ್ ಶರ್ಮಾ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಇದನ್ನು ವಿಜಯಪುರ ಏಮ್ಸ್‌ಗೆ ಕೊಂಡೊಯ್ಯುವುದಾಗಿ ಕೇಂದ್ರವು ಭರವಸೆ ನೀಡಿದೆ. 2021ರ ಡಿಸೆಂಬರ್ 21ರಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯದಲ್ಲಿ ಲಘು ಮೆಟ್ರೋ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಶ್ರೀನಗರದಲ್ಲಿ ಮೆಟ್ರೋ ರೈಲು ಯೋಜನೆಗಳ ಪ್ರಸ್ತಾವನೆಗಳು ಸಾರ್ವಜನಿಕ ಹೂಡಿಕೆ ಮಂಡಳಿಯಿಂದ ಅನುಮೋದನೆಯ ಅಂತಿಮ ಹಂತದಲ್ಲಿವೆ ಎಂದೂ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜಮ್ಮುವಿನ ಹೊರವಲಯದಲ್ಲಿರುವ ಉದ್ದೇಶಿತ ಏಮ್ಸ್ ಆಸ್ಪತ್ರೆಗೆ ಮೆಟ್ರೋ ಯೋಜನೆಗಳನ್ನು ವಿಸ್ತರಿಸುವ ಬೇಡಿಕೆಯನ್ನು ಕೇಂದ್ರವು ಪರಿಗಣಿಸಲಿದೆ.

ಮೂರು ಹಂತದ ಮೆಟ್ರೋ ಯೋಜನೆ: ಚಿನ್ನೋರ್ ನಗರಕ್ಕೆ ಹೊಂದಿಕೊಂಡಿರುವ ಜಮ್ಮು ಬಂಟಲಾಬ್ ಪ್ರದೇಶದಿಂದ ಮೊದಲ ಹಂತದ ಮೆಟ್ರೋ ಸೇವೆ ಆರಂಭವಾಗಲಿದೆ. ರೂಪ್ ನಗರ, ಜಾನಿಪುರ್ ಹೈಕೋರ್ಟ್, ಲೋವರ್ ಲಕ್ಷ್ಮಿ ನಗರ, ಅಂಬ್ಫಾಲಾ, ಸೆಕ್ರೆಟರಿಯೇಟ್, ರಘುನಾಥ ದೇವಸ್ಥಾನ, ಎಕ್ಸಿಬಿಷನ್ ಗ್ರೌಂಡ್, ಯುನಿವರ್ಸಿಟಿ ಮಾರ್ಗ, ಪನಾಮ ಚೌಕ್, ರೈಲ್ವೆ ನಿಲ್ದಾಣ, ತ್ರಿಕೂಟ ನಗರ, ನರ್ವಾಲ್​, ಗ್ರೇಟರ್ ಕೈಲಾಶ್​ವರೆಗೆ ಇರಲಿದೆ. ಎರಡನೇ ಹಂತದ ಮೆಟ್ರೋವು ಉದಯವಾಲಾ, ತೀರ್ಥ ನಗರ, ಸೂರಜ್ ನಗರ, ಸರ್ಕ್ಯೂಟ್ ಹೌಸ್, ಜ್ಯುವೆಲ್ ಚೌಕ್, ಎಕ್ಸಿಬಿಷನ್ ಗ್ರೌಂಡ್​​ವರೆಗೆ ಇದ್ದರೆ, ಮೂರನೇ ಹಂತದಲ್ಲಿ ಕಾಲುಚಕ್ಕಕ್, ಸಿಡ್ಕೋ ಚೌಕ್ ಮತ್ತು ಬದಿ ಬ್ರಾಹ್ಮಣ ರೈಲು ನಿಲ್ದಾಣವನ್ನು ಒಳಗೊಂಡಿದೆ.

ಮೊದಲ ಹಂತದ 17 ಕಿಮೀ ಮೆಟ್ರೋ ಮಾರ್ಗದಲ್ಲಿ 17 ರೈಲು ನಿಲ್ದಾಣಗಳು, ಎರಡನೇ ಹಂತದಲ್ಲಿ 6 ಕಿಮೀ ಮಾರ್ಗದಲ್ಲಿ 6 ನಿಲ್ದಾಣಗಳು, ಮೂರನೇ ಹಂತದಲ್ಲಿ 5 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಈ ಮೆಟ್ರೋಗೆ ನೆಟ್‌ವರ್ಕ್ ಸಂಪರ್ಕ ಸಾಧಿಸಲು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ.

ಶ್ರೀನಗರವು 25 ಕಿಮೀ ಉದ್ದದ ಟ್ರ್ಯಾಕ್ ಹೊಂದಲಿದೆ. ಶ್ರೀನಗರ ನಗರದ ಇಂದಿರಾ ನಗರದಿಂದ ಎಚ್‌ಎಂಟಿ ನಿಲ್ದಾಣದವರೆಗೆ ಮೆಟ್ರೋ ಲೈಟ್ ಕಾರಿಡಾರ್ ನಿರ್ಮಾಣದೊಂದಿಗೆ ಒಟ್ಟು 24 ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ. ಶ್ರೀನಗರ ಮೆಟ್ರೋದ ಮೊದಲ ಮಾರ್ಗವು ಎಚ್‌ಎಂಟಿ ಜಂಕ್ಷನ್‌ನಿಂದ ಪ್ರಾರಂಭವಾಗಲಿದ್ದು, ಪರಿಂಪೋರಾ, ಬಸ್ ನಿಲ್ದಾಣ, ಕಮರ್ವಾಡಿ, ಗಗರ್ಜೋ, ರಥಪೋರಾ, ಬಟ್ಮಾಲೂ, ಸೆಕ್ರೆಟರಿಯೇಟ್, ಲಾಲ್ ಚೌಕ್, ಮುನ್ಷಿ ಬಾಗ್, ಸೋನ್ವಾರ್, ಇಂದಿರಾ ನಗರ ಮೂಲಕ ಹಾದು ಹೋಗಲಿದೆ.

ಇದನ್ನು ಎರಡನೇ ಹಂತದಲ್ಲಿ ಪಾಂಪೋರ್ ಬಸ್ ನಿಲ್ದಾಣಕ್ಕೆ ವಿಸ್ತರಿಸಲು ಯೋಜಿಸಲಾಗಿದೆ. ಎರಡನೇ ಮಾರ್ಗವು ಉಸ್ಮಾನಾಬಾದ್‌ನಿಂದ ಪ್ರಾರಂಭವಾಗಿ ಹಜರತ್‌ಬಾಲ್ ಕ್ರಾಸಿಂಗ್, ಸೌರಾ, ಸ್ಕಿಮ್ಸ್, ನಲ್ಬಾಲ್ ಚೌಕ್, ಜಾಮಾ ಮಸೀದಿ, ಖನ್ಯಾರ್, ನೌಪೋರಾ, ಮುನ್ಷಿ ಬಾಗ್, ಹುಜುರಿ ಬಾಗ್ ಮೂಲಕ ಹಾದುಹೋಗುತ್ತದೆ. ಈ ಮಾರ್ಗವನ್ನು ಎರಡನೇ ಹಂತದಲ್ಲಿ ಶ್ರೀನಗರ ವಿಮಾನ ನಿಲ್ದಾಣಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದೆ.

ವೆಚ್ಚಗಳು: ಮೆಟ್ರೋಲೈಟ್ ರೈಲು ಯೋಜನೆಯಲ್ಲಿ ರಸ್ತೆಗಳ ಮೇಲೆ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕ ಸಾರಿಗೆಯನ್ನು ಪಡೆಯಲು ಜನರಿಗೆ ಅನುಕೂಲವಾಗಲಿದೆ. ತಾಂತ್ರಿಕ ತಜ್ಞರು ಮತ್ತು ಕೇಂದ್ರ ತಂಡದ ಸಮೀಕ್ಷೆಯಲ್ಲಿ ಜಮ್ಮು ಮತ್ತು ಶ್ರೀನಗರದಲ್ಲಿ ಸುರಂಗ ರೈಲು ಮಾರ್ಗಕ್ಕೆ ಸೂಕ್ತವಾಗಿಲ್ಲ ಎಂದು ಕಂಡು ಬಂದಿಲ್ಲ. ಜಮ್ಮುವಿನಲ್ಲಿ 23 ಕಿಮೀ ಉದ್ದದ ಮೆಟ್ರೋ ಲೈಟ್ ರೈಲ್ ಯೋಜನೆಗೆ 3,593 ಕೋಟಿ ರೂ. ಮತ್ತು ಶ್ರೀನಗರದಲ್ಲಿ 25 ಕಿಮೀ ಉದ್ದದ ಟ್ರ್ಯಾಕ್​ಗೆ 4,352 ಕೋಟಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ. ಮೆಟ್ರೋ ರೈಲು ಯೋಜನೆಯ ಡಿಪಿಆರ್‌ನಲ್ಲಿ ಜಮ್ಮು ಮೆಟ್ರೋಲೈಟ್‌ಗೆ 4,825 ಕೋಟಿ ಮತ್ತು ಶ್ರೀನಗರ ಮೆಟ್ರೋಲೈಟ್‌ಗೆ 5,734 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಮುಂದಿನ ಫೆಬ್ರವರಿ- ಮಾರ್ಚ್‌ ವೇಳೆಗೆ 3 ರೀತಿಯ ವಂದೇ ಭಾರತ್ ರೈಲು: ರೈಲ್ವೇ ಸಚಿವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.