ETV Bharat / bharat

ಬೈಕ್​ ಸವಾರನೊಬ್ಬನ ಕೊನೆ ಕ್ಷಣದ ಲೈವ್ ವಿಡಿಯೋ: ಏಕಾಏಕಿ ರಸ್ತೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ ಯುವಕ - ಏಕಾಏಕಿ ರಸ್ತೆ ಮೇಲೆ ಬಿದ್ದು ಸಾವನ್ನಪ್ಪಿದ ಯುವಕ

ಬೈಕ್​ ಚಲಾಯಿಸುತ್ತಿದ್ದ ಯುವಕನೊಬ್ಬ ಏಕಾಏಕಿ ರಸ್ತೆ ಬದಿ ಬಿದ್ದು ಸಾವನ್ನಪ್ಪಿರುವ ಲೈವ್ ವಿಡಿಯೋ ಇಲ್ಲಿದೆ ನೋಡಿ.

death
ಬೈಕ್​ ಸವಾರನೊಬ್ಬನ ಕೊನೆ ಕ್ಷಣದ ಲೈವ್ ವಿಡಿಯೋ
author img

By

Published : Jan 24, 2022, 8:58 AM IST

ಭೋಪಾಲ್​(ಮಧ್ಯಪ್ರದೇಶ): ಅಲಿರಾಜಪುರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಬೈಕ್​ ಚಲಾಯಿಸುತ್ತಿದ್ದ ಯುವಕನೊಬ್ಬ ಏಕಾಏಕಿ ರಸ್ತೆ ಬದಿ ಬಿದ್ದು ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ನಡೆದಿದ್ದು, ಯುವಕ ಸಾವನ್ನಪ್ಪುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ, ವ್ಯಕ್ತಿಯೊಬ್ಬ ಬೈಕ್​ನಲ್ಲಿ ಹೋಗುತ್ತಿದ್ದಾಗ ಪಕ್ಕದಲ್ಲಿ ಕಾರು ಚಾಲಕ ರಿವರ್ಸ್​ ತೆಗೆದುಕೊಳ್ಳು ಮುಂದಾಗಿದ್ದಾನೆ. ಈ ವೇಳೆ, ಒಂದೆರಡು ಸೆಕೆಂಡ್ ಕಾದ ಬೈಕ್​ ಚಾಲಕ, ನಂತರ ಮುಂದಕ್ಕೆ ಹೋಗಿದ್ದಾನೆ.

ಸ್ವಲ್ಪ ದೂರ ಹೋಗಿದ ನಂತರ ಬೈಕ್​ ಸಮೇತ ಏಕಾಏಕಿ ರಸ್ತೆಗೆ ಬಿದ್ದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ಯುವಕನ ಬಳಿ ಬಂದು ಎತ್ತಲು ಪ್ರಯತ್ನಿಸಿದರೂ ಕೂಡ ಆತ ಏಳದೇ ಇರುವುರಿಂದ ಅಲ್ಲಿಂದ ಹೊರಟು ಹೋಗಿದ್ದಾರೆ.

ಬೈಕ್​ ಸವಾರನೊಬ್ಬನ ಕೊನೆ ಕ್ಷಣದ ಲೈವ್ ವಿಡಿಯೋ

ಯುವಕನ ಮೃತದೇಹ ರಾತ್ರಿಯಿಡಿ ರಸ್ತೆ ಮೇಲೆ ಬಿದ್ದಿತ್ತು. ಭಾನುವಾರ ದಾರಿಹೋಕರೊಬ್ಬರು ಈತನನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಸ್ಥಳಕ್ಕಾಮಿಸಿದ ಜೋಬಾಟ್ ಠಾಣೆ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಮೃತ ಯುವಕ ಧಾರ್ ಜಿಲ್ಲೆಯ ನಿವಾಸಿಯಾಗಿದ್ದು, ಧರ್ಮರಾಯ್​ ಎಂಬುವರ ಮಗ ಹುಸೇನ್ (45) ಎಂದು ಗುರುತಿಸಲಾಗಿದೆ. ಈಗಾಗಲೇ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಯುವಕನ ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.