ಲಖನೌ(ಉತ್ತರ ಪ್ರದೇಶ): ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
-
बुलडोज़र बाबा अब खाली होकर ‘बुल और डॉग’ से खेलेंगे… pic.twitter.com/AJy2JiwTbr
— Akhilesh Yadav (@yadavakhilesh) March 4, 2022 " class="align-text-top noRightClick twitterSection" data="
">बुलडोज़र बाबा अब खाली होकर ‘बुल और डॉग’ से खेलेंगे… pic.twitter.com/AJy2JiwTbr
— Akhilesh Yadav (@yadavakhilesh) March 4, 2022बुलडोज़र बाबा अब खाली होकर ‘बुल और डॉग’ से खेलेंगे… pic.twitter.com/AJy2JiwTbr
— Akhilesh Yadav (@yadavakhilesh) March 4, 2022
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡ ಅವರು, 'ಬುಲ್ಡೋಜರ್ ಬಾಬಾ ಈಗ 'ಗೂಳಿ ಮತ್ತು ನಾಯಿ' ಜತೆ ಬರಿಗೈಯಲ್ಲಿ ಆಡಲಿದ್ದಾರೆ ಎಂದು ಬರೆದಿದ್ದಾರೆ. ಆ ವಿಡಿಯೋದಲ್ಲಿ ಸೈಕ್ಲಿಸ್ಟ್ ಒಬ್ಬ ಬುಲ್ಡೋಜರ್‌ನಲ್ಲಿ ಸ್ಟಂಟ್ ಮಾಡುತ್ತಿರುವುದನ್ನು ಕಾಣಬಹುದು.
ಯೋಗಿ ಆದಿತ್ಯನಾಥ್ ವಿರುದ್ಧ ಅಖಿಲೇಶ್ ಯಾದವ್, ಈ ರೀತಿಯ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು ಯೋಗಿಯನ್ನು 'ಬುಲ್ಡೋಜರ್ ಬಾಬಾ' ಎಂದು ಸಂಬೋಧಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಗೆ ಈಗಾಗಲೇ ಆರು ಹಂತದ ಮತದಾನ ಮುಕ್ತಾಯವಾಗಿದೆ. ವೋಟಿಂಗ್ ನಂತರ ಬಿಜೆಪಿಯ ಧೂಳು ತೆರವುಗೊಂಡಿದೆ ಮತ್ತು ಎಸ್‌ಪಿಯ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಸಮಾಜವಾದಿ ಪಕ್ಷ ವಿಶ್ವಾಸ ವ್ಯಕ್ತಪಡಿಸಿದೆ.
ಯುಪಿ ವಿಧಾನಸಭಾ ಚುನಾವಣೆ 2022ರ ದಿನಾಂಕ ಘೋಷಣೆಯಾಗುವ ಮೊದಲು, ಇಲ್ಲಿಯವರೆಗೆ ಅಖಿಲೇಶ್ ಯಾದವ್ ಮತ್ತು ಸಿಎಂ ಯೋಗಿ ಹೇಳಿಕೆಗಳಲ್ಲಿ ನಿರಂತರವಾಗಿ 'ಬುಲ್ಡೋಜರ್' ಪದವನ್ನು ಬಳಸಲಾಗಿದೆ ಎಂಬುದು ಗಮನಾರ್ಹ. ಕಮಲದ ಬದಲು ಬಿಜೆಪಿ ತನ್ನ ಚುನಾವಣಾ ಚಿಹ್ನೆಯನ್ನು ಬುಲ್ಡೋಜರ್ ಮಾಡಬೇಕು ಎಂದು ಅಖಿಲೇಶ್ ಯಾದವ್ ಹೇಳಿದ್ದರು.
ಇದನ್ನೂ ಓದಿ: ರಸ್ತೆ ಬದಿಯಲ್ಲಿ ಟೀ ಸೇವಿಸಿ, ಪಾನ್ ಸವಿದ ಪ್ರಧಾನಿ ಮೋದಿ.. ವಿಶ್ವನಾಥನಿಗೆ ಢಮರುಗ ಸೇವೆ ಸಲ್ಲಿಸಿ ಮತಯಾಚನೆ!