ETV Bharat / bharat

ವಾಯು ಮಾಲಿನ್ಯದಿಂದ ಕೊರೊನಾ ಹೆಚ್ಚಾಗುವ ಅಪಾಯ: ದೆಹಲಿ ಏಮ್ಸ್ ನಿರ್ದೇಶಕ - ರಂದೀಪ್ ಗುಲೇರಿಯಾ

ವಾಯು ಮಾಲಿನ್ಯದಿಂದಾಗಿ ಕೋವಿಡ್ ತೀವ್ರತೆ ಹೆಚ್ಚಾಗುವ ಅಪಾಯವಿದೆ. ಹೀಗಾಗಿ ಹೆಚ್ಚಿನ ಮಾಲಿನ್ಯದ ಪ್ರದೇಶಗಳಿಂದ ದೂರವಿರುವುದು ಉತ್ತಮ. ಹೊರಾಂಗಣದಲ್ಲಿ ಮಾಸ್ಕ್ ಹಾಕಿಕೊಂಡರೆ ಅಪಾಯ ತಪ್ಪುತ್ತದೆ ಎಂದು ದೆಹಲಿ ಏಮ್ಸ್‌ ನಿರ್ದೇಶಕ ರಂದೀಪ್‌ ಗುಲೇರಿಯಾ ತಿಳಿಸಿದ್ದಾರೆ.

air pollution may lead to severe covid cases says aiims director randeep guleria
ವಾಯು ಮಾಲಿನ್ಯದಿಂದಾಗಿ ಕೊರೊನಾ ಮತ್ತಷ್ಟು ಹೆಚ್ಚಾಗುವ ಅಪಾಯ - ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ
author img

By

Published : Nov 6, 2021, 2:39 PM IST

ನವದೆಹಲಿ: ವಾಯು ಮಾಲಿನ್ಯದಿಂದಾಗಿ ಕೊರೊನಾ ತೀವ್ರತೆ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಾಲಿನ್ಯವು ಅಸ್ತಮಾ ಇರುವವರಲ್ಲಿ ಶ್ವಾಸಕೋಶ ಹಾಗೂ ಉಸಿರಾಟದ ತೊಂದರೆ ಉಲ್ಬಣಗೊಳಿಸುತ್ತದೆ. ಹೀಗಾಗಿ, ಹೆಚ್ಚಿನ ಮಾಲಿನ್ಯದ ಪ್ರದೇಶಗಳಿಂದ ದೂರವಿರುವುದು ಉತ್ತಮ. ಹೊರಾಂಗಣದಲ್ಲಿ ಮಾಸ್ಕ್ ಹಾಕಿಕೊಂಡರೆ ಅಪಾಯ ತಪ್ಪುತ್ತದೆ ಎಂದಿದ್ದಾರೆ.

ದೀಪಾವಳಿ ಪಟಾಕಿಯಿಂದಾಗಿ ದಾಖಲೆಯ ವಾಯು ಮಾಲಿನ್ಯ ಉಂಟಾಗಿದ್ದು ರಣದೀಪ್‌ ಗುಲೇರಿಯಾ ಪ್ರತಿಕ್ರಿಯಿಸಿದರು.

ಸುಧಾರಿಸಿದ ಗಾಳಿ ಗುಣಮಟ್ಟ:

ಹೆಚ್ಚಿನ ಗಾಳಿಯ ವೇಗದಿಂದಾಗಿ ರಾಜಧಾನಿಯಲ್ಲಿ ಶನಿವಾರ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಿಸಿದೆ. ಮುಂದಿನ ಎರಡು ದಿನಗಳಲ್ಲಿ ಮಾಲಿನ್ಯಕಾರಕಗಳನ್ನು ಮತ್ತಷ್ಟು ಹೊರಹಾಕುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಸಮೀರ್ ಆ್ಯಪ್ ಪ್ರಕಾರ, ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಶನಿವಾರ ಬೆಳಿಗ್ಗೆ 8 ಗಂಟೆಗೆ 449ರಷ್ಟಿದೆ. ಇದು ನಿನ್ನೆ 462 ಆಗಿತ್ತು. ಶೂನ್ಯದಿಂದ 50ರ ನಡುವಿನ ಗಾಳಿಯ ಗುಣಮಟ್ಟವನ್ನು ಉತ್ತಮ, 51 ರಿಂದ 100ರ ವರೆಗೆ ತೃಪ್ತಿದಾಯಕ, 101ರಿಂದ 200ರ ವರೆಗೆ ಮಧ್ಯಮ, 201 ರಿಂದ 300ರ ವರೆಗೆ ಕಳಪೆ, 301 ರಿಂದ 400ರ ವರೆಗೆ ಅತ್ಯಂತ ಕಳಪೆ ಹಾಗೂ 401ರಿಂದ 500 ವರೆಗೆ ತೀವ್ರ ಎಂದು ಪರಿಗಣಿಸಲಾಗುತ್ತದೆ.

ನಿರ್ಬಂಧಗಳ ನಡುವೆಯೂ ಗುರುವಾರ ದೀಪಾವಳಿಯಂದು ಹೆಚ್ಚಾಗಿ ಪಟಾಕಿಗಳನ್ನು ಸಿಡಿಸಿರುವುದು, ನೆರೆಯ ರಾಜ್ಯಗಳಲ್ಲಿ ಹುಲ್ಲು ಸುಡುವ ಘಟನೆಗಳ ಹೆಚ್ಚಳದೊಂದಿಗೆ ಹಬ್ಬದ ನಂತರ ಐದು ವರ್ಷಗಳಲ್ಲಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.