ತಿರುವನಂತಪುರಂ: ಇಲ್ಲಿಂದ ಸೌದಿ ಅರೇಬಿಯಾಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ತುರ್ತು ಭೂಸ್ಪರ್ಶ ಮಾಡಿದೆ. ಇಂದು ಬೆಳಗ್ಗೆ 7.52 ಕ್ಕೆ ಇಲ್ಲಿಂದ ಹೊರಟ ವಿಮಾನವು 8.50 ರ ಸುಮಾರಿಗೆ ಮರಳಿ ಇಲ್ಲಿಯೇ ತುರ್ತು ಭೂ ಸ್ಪರ್ಶಿಸಿದೆ. ಅತಿಯಾದ ಗಾಳಿ ಬೀಸುತ್ತಿದ್ದರಿಂದ ವಿಮಾನದ ಗಾಜೊಂದು ಬಿರುಕು ಬಿಟ್ಟಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಪೈಲಟ್ ಶೀಘ್ರವೇ ಮರಳಿ ಏರ್ಪೋರ್ಟ್ಗೆ ಬಂದಿದ್ದಾರೆ.
ಇದನ್ನೂ ಓದಿ: ಭಾರತದೊಳಗೆ ನುಸುಳಲು ಯತ್ನ: ಇಬ್ಬರು ಪಾಕ್ ಕ್ರಿಮಿಗಳನ್ನು ಹೊಡೆದುರುಳಿಸಿದ ಸೇನೆ
ಈ ವಿಮಾನವು ವಂದೇ ಮಾತರಂ ಮಿಷನ್ ಯೋಜನೆಯಡಿ ವಿದೇಶದಲ್ಲಿದ್ದ ಭಾರತೀಯರನ್ನು ಕರೆತರಲು ಸೌದಿ ಅರೇಬಿಯಾಗೆ ತೆರಳುತ್ತಿತ್ತು. ಎಂಟು ಸಿಬ್ಬಂದಿ ಹಾಗೂ ಪೈಲಟ್ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸಿ.ವಿ. ರವೀಂದ್ರನ್ ತಿಳಿಸಿದ್ದಾರೆ. ವಿಮಾನ ಹಾರಾಟಕ್ಕೂ ಮುನ್ನ ಗಾಜು ಬಿರುಕು ಬಿಟ್ಟಿರಲಿಲ್ಲ. ಟೇಕಾಫ್ ಅಥವಾ ಕ್ರೂಸಿಂಗ್ ಸಮಯದಲ್ಲಿ ಗ್ಲಾಸ್ ಬಿರುಕುಬಿಟ್ಟಿರಬಹುದು ಎಂದು ಅವರು ತಿಳಿಸಿದ್ದಾರೆ.