ETV Bharat / bharat

ಆರ್ಟಿಕಲ್​ 370ರ ನಿರ್ಮೂಲನೆ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬಂತು : ಅಮಿತ್​ ಶಾ

author img

By

Published : Mar 19, 2022, 3:55 PM IST

ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ನಿಭಾಯಿಸಲು ಸುಸಜ್ಜಿತ ಸಿಆರ್​ಪಿಎಫ್​ ಪಡೆ ಇದೆ ಎಂಬುದನ್ನು ತಿಳಿದಿರುವ ಜನ ನೆಮ್ಮದಿಯಿಂದಿದ್ದಾರೆ. 1959 ಅಕ್ಷೋಬರ್​ 21ರಂದು ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಕೆಲವು ಸಿಆರ್​ಪಿಎಫ್​ ಯೋಧರು ವೀರಾವೇಶದಿಂದ ಹೋರಾಡಿ ಆಕ್ರಮಣವನ್ನು ತಡೆದಿದ್ದರು..

Union Home Minister Amith Shah
ಕೇಂದ್ರ ಗೃಹ ಸಚಿವ ಅಮಿತ್​ ಶಾ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್​ 370 ಅನ್ನು ತೆಗೆದು ಹಾಕಿದ ನಂತರ ನಿಜವಾದ ಅರ್ಥದಲ್ಲಿ ಪ್ರತಿಯೊಬ್ಬರೂ ಪ್ರಜಾಪ್ರಭುತ್ವವನ್ನು ಅನುಭವಿಸುವಂತಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಶನಿವಾರ ಹೇಳಿದ್ದಾರೆ.

ಜಮ್ಮುವಿನ ಮೌಲಾನಾ ಆಜಾದ್​ ಸ್ಟೇಡಿಯಂನಲ್ಲಿ 83ನೇ ಸಿಆರ್​ಪಿಎಫ್​ ರೈಸಿಂಗ್​ ದಿನದ ಪರೇಡ್​ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅಮಿತ್​ ಶಾ, ಆರ್ಟಿಕಲ್ 370ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರದ ಮುಖ್ಯಸ್ಥರನ್ನು 'ವಜೀರ್-ಎ-ಅಜಮ್' (ಪ್ರಧಾನಿ) ಎಂದು ಕರೆಯಲಾಗುತ್ತಿತ್ತು.

ರಾಜ್ಯ ತನ್ನದೇ ಆದ ಧ್ವಜ ಮತ್ತು ಪ್ರತ್ಯೇಕ ಸಂವಿಧಾನವನ್ನು ಹೊಂದಿತ್ತು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಬದಲಾವಣೆಗಳಾಗಿವೆ. ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಸಾಕಾರಗೊಳಿಸಿದ್ದಾರೆ.

ಪ್ರತಿ ಗ್ರಾಮಮಟ್ಟದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಹ ವಾತಾವರಣವನ್ನು ಕಲ್ಪಿಸಿದ್ದಾರೆ ಎಂದು ದೇಶದಲ್ಲಿ ಶಾಂತಿ ಮತ್ತು ಏಕತೆಗಾಗಿ ಹೋರಾಡಿ ಪ್ರಶಸ್ತಿ ಗಳಿಸಿದ ಸಿಆರ್​ಪಿಎಫ್​ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು.

ಜಮ್ಮು-ಕಾಶ್ಮೀರವನ್ನು ಪೂರ್ತಿಯಾಗಿ ಭಾರತದೊಂದಿಗೆ ಒಂದುಗೂಡಿಸಲು ಶ್ಯಾಮ್ ಪ್ರಸಾದ್​ ಮುಖರ್ಜಿ ಮತ್ತು ಪಂಡಿತ್​ ಪ್ರೇಮ್​ ನಾಥ್​ ಡೋಗ್ರಾ ಹೋರಾಡಿದ ಭೂಮಿ ಇದು. ನಮ್ಮ ದೇಶ ಒಂದೇ ಪ್ರಧಾನಿ, ಒಂದೇ ಧ್ವಜ, ಒಂದೇ ಸಂವಿಧಾನವನ್ನು ಹೊಂದಿರಬೇಕು ಎನ್ನುವುದಕ್ಕೆ ಶ್ಯಾಮ ಪ್ರಸಾದ್​ ಮುಖರ್ಜಿ ಸರ್ವ ತ್ಯಾಗಗಳನ್ನೂ ಮಾಡಿದ್ದರು.

ಆರ್ಟಿಕಲ್​ 370ರ ನಿರ್ಮೂಲನೆಯ ನಂತರ ಮಹಿಳೆಯರು ಹಾಗೂ ಬುಡಕಟ್ಟು ಜನಾಂಗದವರಿಗೆ ಸರಿಯಾದ ಸ್ಥಾನ ಲಭಿಸಿದೆ. ಇಲ್ಲಿ 33,000 ಕೋಟಿ ರೂ. ಹೂಕಡಿಕೆಯ ಗುರಿಯನ್ನು ಹೊಂದಿದ್ದು, ಅದಕ್ಕಾಗಿ ಲೆಫ್ಟಿನೆಂಟ್​ ಜನರಲ್​ ಮನೋಜ್​ ಸಿನ್ಹಾ ಅವರನ್ನು ಅಭಿನಂದಿಸುತ್ತೇನೆ.

ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ನಿಭಾಯಿಸಲು ಸುಸಜ್ಜಿತ ಸಿಆರ್​ಪಿಎಫ್​ ಪಡೆ ಇದೆ ಎಂಬುದನ್ನು ತಿಳಿದಿರುವ ಜನ ನೆಮ್ಮದಿಯಿಂದಿದ್ದಾರೆ. 1959 ಅಕ್ಷೋಬರ್​ 21ರಂದು ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಕೆಲವು ಸಿಆರ್​ಪಿಎಫ್​ ಯೋಧರು ವೀರಾವೇಶದಿಂದ ಹೋರಾಡಿ ಆಕ್ರಮಣವನ್ನು ತಡೆದಿದ್ದರು.

ಹಾಗಾಗಿ, ಅಕ್ಟೋಬರ್​ 21ರಂದು ಪ್ರತಿ ರಾಜ್ಯದಲ್ಲೂ ಪೊಲೀಸ್​ ಸ್ಮರನಾರ್ಥ ದಿನವಾಗಿ ಆಚರಿಸಲಾಗುತ್ತದೆ. ದೇಶದಲ್ಲಿ ಎಲ್ಲೇ ಚುನಾವಣೆಗಳಾದರೂ ಅದು ಶಾಂತಿಯುತವಾಗಿ ನಡೆಯುವಲ್ಲಿ ಸಿಆರ್​ಪಿಎಫ್​ ಯೋಧರ ಕೊಡುಗೆ ಇದೆ. ಈ ಪಡೆ ಪ್ರಾರಂಭವಾಗುವ ಮೊದಲು ಗಲಭೆಗಳು ನಡೆದರೆ ಅದನ್ನು ನಿಯಂತ್ರಿಸಲು ದೀರ್ಘ ಸಮಯ ಬೇಕಾಗಿತ್ತು. ದೇಶದ ಜನ ನೆಮ್ಮದಿಯಿಂದ ಜೀವಿಸಲು ಕಾರಣರಾಗಿರುವ ಯೋಧರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಿಎಂ ಮೋದಿ.. ವಿರೋಧ ಪಕ್ಷದವರು?

ಸೇನೆಯ ವಿವಿಧ ತುಕಡಿಗಳು ವೇದಿಕೆಯ ಮುಂದೆ ಮೆರವಣಿಗೆ ನಡೆಸಿದರು, ಅಮಿತ್​ ಶಾ ವಿಶಿಷ್ಟವಾದ ಡೋಗ್ರಾ ಪೇಟವನ್ನು ಧರಿಸಿ ಗೌರವ ವಂದನೆ ಸ್ವೀಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.