ETV Bharat / bharat

ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಸ್ಥಳೀಯರಲ್ಲಿ ಆತಂಕ - ಹಂದಿ ಜ್ವರ

ಮಿಜೋರಾಂನಲ್ಲಿ ಹಂದಿ ಜ್ವರ ಆತಂಕ ಸೃಷ್ಠಿಸಿದೆ. ಆಫ್ರಿಕನ್​ ಹಂದಿ ಜ್ವರಕ್ಕೆ 1557 ಹಂದಿಗಳು ಮೃತಪಟ್ಟಿವೆ ಎಂದು ವರದಿಯಾಗಿದೆ.

african-swine-fever-report-in-mizoram
ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ
author img

By

Published : Apr 30, 2021, 8:17 PM IST

ಮಿಜೋರಾಂ: ಕೊರೊನಾ ನಡುವೆ ಹಂದಿ ಜ್ವರದ ಆತಂಕ ಆರಂಭವಾಗಿದೆ. ರಾಜ್ಯದಲ್ಲಿ 1557 ಹಂದಿಗಳು ಮೃತಪಟ್ಟ ಹಿನ್ನೆಲೆ ಲುಂಗ್ಲೆ, ಸೆರ್ಚಿಪ್, ಮಾಮಿತ್ ಮತ್ತು ಲಾಂಗ್ಟ್ಲೈ ಜಿಲ್ಲೆಗಳ ವಿವಿಧ ಗ್ರಾಮಗಳನ್ನು ಹಂದಿ ಜ್ವರದ ಕೇಂದ್ರ ಬಿಂದುಗಳು ಎಂದು ಘೋಷಿಸಲಾಗಿದೆ.

ಆಫ್ರಿಕನ್ ಹಂದಿ ಜ್ವರವು ಮಾರ್ಚ್ 21, 2021 ರಂದು ಲುಂಗ್‌ಸೆನ್ ಗ್ರಾಮದಲ್ಲಿ ಮೊದಲು ಪತ್ತೆಯಾಗಿದೆ. ಐಜಾಲ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮತ್ತು ಇತರ ಜಿಲ್ಲೆಗಳಲ್ಲಿ 505 ಹಂದಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮಿಜೋರಾಂ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಗಳ ಇತ್ತೀಚಿನ ವರದಿ ಏಪ್ರಿಲ್ 30 ರಂದು ಮಾತ್ರ 38 ಹಂದಿಗಳು ಸಾವನ್ನಪ್ಪಿವೆ ಎಂದು ಹೇಳಿದ್ದು, ಎಎಸ್‌ಎಫ್‌ನಿಂದಾಗಿ ಒಟ್ಟು 1557 ಹಂದಿಗಳು ಮೃತಪಟ್ಟಿವೆ ಎಂದು ವರದಿ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.