ETV Bharat / bharat

ಶೇ. 20ರಷ್ಟು ಕುಸಿತ ಕಂಡ ಗೌತಮ್ ಅದಾನಿ ಗ್ರೂಪ್​ನ ಷೇರುಗಳು - ಹಿಂಡೆನ್‌ಬರ್ಗ್ ರಿಸರ್ಚ್ ವರದಿ

ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಬೆನ್ನಲ್ಲೇ ದೇಶದ ಖ್ಯಾತ ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಗ್ರೂಪ್​ನ ಷೇರುಗಳಲ್ಲಿ ಕುಸಿತ ಉಂಟಾಗಿದೆ.

industrialist Gautam Adani
ಖ್ಯಾತ ಕೈಗಾರಿಕೋದ್ಯಮಿ ಗೌತಮ್ ಅದಾನಿ
author img

By

Published : Jan 27, 2023, 10:57 PM IST

ನವೆದೆಹಲಿ: ದೇಶದ ಖ್ಯಾತಿ ಉದ್ಯಮಿ ಗೌತಮ್ ಅದಾನಿ ಗ್ರೂಪ್​ನ ಷೇರುಗಳು ಶುಕ್ರವಾರ ಮತ್ತಷ್ಟು ಕುಸಿತ ಕಂಡಿದ್ದು, ಆರಂಭಿಕ ವಹಿವಾಟಿನಲ್ಲೇ ಶೇ.20ರಷ್ಟು ಕುಸಿದಿವೆ. ಗಮನಾರ್ಹ ಎಂದರೆ ಅದಾನಿ ಗ್ರೂಪ್​ನ ಕುರಿತ ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಬಹಿರಂಗ ಬೆನ್ನಲ್ಲೇ ಷೇರುಗಳು ಕುಸಿತ ಕಾಣಲು ಆರಂಭಿಸಿವೆ ಎಂದು ವರದಿಯಾಗಿದೆ.

ಹಿಂಡೆನ್‌ಬರ್ಗ್ ರಿಸರ್ಚ್​ ತನ್ನ ವರದಿಯಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಗ್ರೂಪ್​​ ಬ್ಲ್ಯಾಟಂಟ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪದ ವರದಿಯ ನಂತರ, ಹಲವು ವ್ಯಾಪಾರ ಸಮೂಹದ ಕಂಪನಿಗಳ ಷೇರುಗಳಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡುಬಂದಿದೆ.

ಅದಾನಿ ಗ್ರೂಪ್‌ನ ಷೇರುಗಳು ಕುಸಿತದ ಮಾಹಿತಿ ಹೀಗಿದೆ... ಅದಾನಿ ಟೋಟಲ್ ಗ್ಯಾಸ್ ಷೇರುಗಳು - ಶೇ.19.65ರಷ್ಟು, ಅದಾನಿ ಟ್ರಾನ್ಸ್‌ಮಿಷನ್ ಷೇರುಗಳು - ಶೇ19ರಷ್ಟು, ಅದಾನಿ ಗ್ರೀನ್ ಎನರ್ಜಿ ಷೇರುಗಳು - ಶೇ.15.50ರಷ್ಟು ಮತ್ತು ಅದಾನಿ ಎಂಟರ್​ ಪ್ರೈಸಸ್ ಷೇರುಗಳು - ಶೇ.6.19ರಷ್ಟು ಇಳಿಕೆ ಕಂಡಿವೆ. ಮತ್ತೊಂದೆಡೆ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯದ ಷೇರುಗಳು - ಶೇ.5.31ರಷ್ಟು, ಅದಾನಿ ವಿಲ್ಮಾರ್ ಷೇರುಗಳು - ಶೇ.5ರಷ್ಟು ಮತ್ತು ಅದಾನಿ ಪವರ್ ಷೇರುಗಳು - ಶೇ4.99ರಷ್ಟು ಕುಸಿದಿವೆ.

ಹಿಂಡೆನ್‌ಬರ್ಗ್ ರಿಸರ್ಚ್ ಕ್ರಮದ ಅದಾನಿ ಗ್ರೂಪ್​ ಎಚ್ಚರಿಕೆ: ಅದಾನಿ ಗ್ರೂಪ್ ಷೇರುಗಳ ಬೆಲೆ ಕುಸಿತದ ಮಧ್ಯೆ ಹಿಂಡೆನ್‌ಬರ್ಗ್ ರಿಸರ್ಚ್ ವಿರುದ್ಧ ದಂಡದ ಕ್ರಮ ತೆಗೆದುಕೊಳ್ಳುವುದಾಗಿ ಅದಾನಿ ಕಂಪನಿ ಹೇಳಿದೆ. ಇದಕ್ಕಾಗಿ ಕಾನೂನು ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದ್ದು, ಷೇರು ಮಾರಾಟಕ್ಕೆ ಹಾನಿ ಮಾಡುವ ಪ್ರಯತ್ನದಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್ ವಿವೇಚನೆಯಿಲ್ಲದೇ ವರ್ತಿಸುತ್ತಿದೆ ಎಂದು ಅದಾನಿ ಗ್ರೂಪ್​ ಕಿಡಿಕಾರಿದೆ.

ಇದನ್ನೂ ಓದಿ: ಫೋರ್ಬ್ಸ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿತ ಅದಾನಿ: ವರದಿ ವಿರುದ್ಧ ಕ್ರಮಕ್ಕೆ ಮುಂದಾದ ಅದಾನಿ ಗ್ರೂಪ್​

ಈ ಬಗ್ಗೆ ಪ್ರತಿಕ್ರಿಯಿಸಿರುವ ಅದಾನಿ ಗ್ರೂಪ್‌ನ ಕಾನೂನು ವಿಭಾಗದ ಮುಖ್ಯಸ್ಥ ಜತಿನ್ ಜಲುಂಧ್ವಾಲಾ, ಹಿಂಡೆನ್‌ಬರ್ಗ್ ರಿಸರ್ಚ್ ಯಾವುದೇ ಸಂಶೋಧನೆ ಮಾಡದೆ ಮತ್ತು ಸಂಪೂರ್ಣ ಮಾಹಿತಿಯಿಲ್ಲದೆ ದುರುದ್ದೇಶಪೂರಿತ ಉದ್ದೇಶದಿಂದ ನಮ್ಮ ಗ್ರೂಪ್​ ವಿರುದ್ಧ ಜನವರಿ 24ರಂದು ವರದಿ ಪ್ರಕಟಿಸಿದೆ. ಈ ವರದಿಯು ಅದಾನಿ ಗ್ರೂಪ್​, ನಮ್ಮ ಷೇರುದಾರರು ಹಾಗೂ ಹೂಡಿಕೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ವರದಿ ತಂದಿರುವ ಏರಿಳಿತಗಳು ಅತ್ಯಂತ ಕಳವಳಕಾರಿ ವಿಷಯವಾಗಿದ್ದು, ಆಧಾರರಹಿತ ವರದಿಯಿಂದ ಅದಾನಿ ಸಮೂಹದ ಕಂಪನಿಗಳ ಷೇರುಗಳಿಗೆ ಹಾನಿ ಮಾಡುತ್ತಿದೆ. ಜೊತೆಗೆ ಹೂಡಿಕೆದಾರರು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶಪೂರ್ವಕ ಮತ್ತು ಅಜಾಗರೂಕ ಪ್ರಯತ್ನ ಮಾಡಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆಯಾದ ಹಿಂಡೆನ್‌ಬರ್ಗ್ ರಿಸರ್ಚ್, ಅದಾನಿ ಗ್ರೂಪ್​ ವಿರುದ್ಧದ ತನ್ನ ವರದಿಯನ್ನು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ! ಟಿಕೆಟ್​ ಡೌನ್​ಗ್ರೇಡ್​ ಮಾಡಿದ್ರೆ ಶೇ​ 75 ರಷ್ಟು ಹಣ ವಾಪಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.