ಚೆನ್ನೈ(ತಮಿಳುನಾಡು) : ತಮಿಳುನಾಡಿನ 9 ಜಿಲ್ಲೆಗಳ ಗ್ರಾಮೀಣ ಭಾಗದ ಪಂಚಾಯ್ತಿ ಚುನಾವಣೆಯಲ್ಲಿ 100ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ತಮಿಳು ನಟ ವಿಜಯ್ ಅವರ ಅಭಿಮಾನಿಗಳು ಗೆಲುವು ದಾಖಲು ಮಾಡಿದ್ದು, ಈ ಮೂಲಕ ಸೈಲೆಂಟ್ ಆಗಿ ರಾಜಕೀಯಕ್ಕೆ ಎಂಟ್ರಿ ನೀಡುವ ಮುನ್ಸೂಚನೆ ನೀಡಿದ್ದಾರೆ.
ತಳಪತಿ ವಿಜಯ್ ಮಕ್ಕಳ್ ಇಯಕ್ಕಂನ 169 ಅಭ್ಯರ್ಥಿಗಳು ವಿವಿಧ ಜಿಲ್ಲೆಯ ಪಂಚಾಯ್ತಿಯಿಂದ ಸ್ಪರ್ಧೆ ಮಾಡಿದ್ದರು. ಇದರಲ್ಲಿ ಒಟ್ಟು 100ಕ್ಕೂ ಅಧಿಕ ಅಭ್ಯರ್ಥಿಗಳು ಗೆಲುವು ದಾಖಲು ಮಾಡಿದ್ದು, ಪ್ರಮುಖವಾಗಿ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿರಿ: 22ರ ಇಂಜಿನಿಯರ್ ಪದವೀಧರೆಗೆ ಮತದಾರನ ಮಣೆ.. ಪಂಚಾಯ್ತಿ ಅಧ್ಯಕ್ಷೆಯಾದ ಚಾರುಕಲಾ
ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ನಟ ಕಮಲ್ ಹಾಸನ್ ಅವರ ಎಂಎನ್ಎಂ ಪಕ್ಷ ಒಂದೇ ಒಂದು ಸ್ಥಾನದಲ್ಲೂ ಗೆಲುವು ದಾಖಲು ಮಾಡಿಲ್ಲ. ವಿಜಯ್ ಅವರು ಯಾವುದೇ ರೀತಿಯ ಪಕ್ಷ ಘೋಷಣೆ ಮಾಡಿಲ್ಲ. ಆದರೆ, ಅನೇಕರು ಅವರ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಜೊತೆಗೆ ನಟನ ಭಾವಚಿತ್ರ ಹಿಡಿದುಕೊಂಡು ಮತಯಾಚನೆ ಮಾಡಿದ್ದರು.
ಇನ್ನು 2021ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ನಟ ವಿಜಯ್ ಬಳಿ ಅನೇಕರು ಮನವಿ ಮಾಡಿದ್ದರು. ಆದರೆ ಇದಕ್ಕೆ ಅವರು ತಲೆಕೆಡಿಸಿಕೊಂಡಿರಲಿಲ್ಲ.