ಹೈದರಾಬಾದ್ : 2022ನೇ ಸಾಲಿನ ಆಸ್ಕರ್ ಆವಾರ್ಡ್ ಪ್ರಶಸ್ತಿಯ ನಾಮನಿರ್ದೇಶನ ಪಟ್ಟಿ ಪ್ರಕಟಿಸಲಾಗಿದೆ. ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 276 ಸಿನಿಮಾಗಳು ಸ್ಥಾನ ಪಡೆದಿವೆ.
ಇದರಲ್ಲಿ ಸಾಮಾಜಿಕ ಸಮಾನತೆ ಮತ್ತು ಶಿಕ್ಷಣದ ಬಗ್ಗೆ ಸಾರಿದ್ದ ತಮಿಳು ನಟ ಸೂರ್ಯ ಅಭಿನಯದ 'ಜೈಭೀಮ್' ಸಿನಿಮಾ ಅವಾರ್ಡ್ ಪಟ್ಟಿಯಲ್ಲಿ ಕಾಣಿಸದೇ ಇರುವುದು ಭಾರತೀಯ ಸಿನಿಮಾ ರಸಿಕರಲ್ಲಿ ತೀವ್ರ ಬೇಸರ ಉಂಟು ಮಾಡಿದೆ.
ಮೋಹನ್ ಲಾಲ್ ಅವರ 'ಮರಕ್ಕರ್', ಸೂರ್ಯರ 'ಜೈಭೀಮ್' ಸಿನಿಮಾ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮ ನಿರ್ದೇಶನಗೊಳ್ಳಲಿವೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ಆಸ್ಕರ್ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಯಾವೊಂದು ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಸಫಲವಾಗಿಲ್ಲ.
ಜೈಭೀಮ್ ಸಿನಿಮಾ ಆಸ್ಕರ್ ನಾಮ ನಿರ್ದೇಶನ ಪಟ್ಟಿಯಲ್ಲಿ ಹೆಸರು ಪಡೆಯದ್ದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರೂಪಕಿ ಜಾಕ್ವೆಲಿನ್ ಕೋಲಿ ಎಂಬುವರು ಸಿನಿಮಾ ಬೆಂಬಲಿಸಿ 'ನನ್ನನ್ನು ನಂಬಿ ಜೈಭೀಮ್ ಸಿನಿಮಾ ನಿಜಕ್ಕೂ ಅತ್ಯುತ್ತಮವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಬೆಲ್ಫಾಸ್ಟ್, ಕಿಂಗ್ ರಿಚರ್ಡ್, ಕೋಡಾ, ಡೋಂಟ್ ಲುಕ್ಅಪ್, ಲಿಕೋರೈಸ್ ಫಿಜ್ಜಾ, ನೈಟ್ಮೇರ್ ಅಲ್ಲೈ, ಡ್ರೈವ್ ಮೈ ಕಾರ್, ದಿ ಪವರ್ ಆಫ್ ದಿ ಡಾಗ್, ಡ್ಯೂನ್ ಅಂಡ್ ವೆಸ್ಟ್ ಸೈಡ್ ಸ್ಟೋರಿ ಸಿನಿಮಾಗಳು ಉತ್ತಮ ಸಿನಿಮಾಗಳಾಗಿ ನಾಮನಿರ್ದೇಶನಗೊಂಡಿವೆ.
ಓದಿ: ಏಳು ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್ ಕ್ಯಾಪ್ ತೊಡೋದಿಕ್ಕೆ ಸಜ್ಜಾದ ರಿಯಲ್ ಸ್ಟಾರ್!