ETV Bharat / bharat

ವಿದ್ಯಾರ್ಥಿಗಳ ಪರ ನಿಂತ ಸೋನು : 'ಕ್ಯಾನ್ಸಲ್ ಬೋರ್ಡ್ ಪರೀಕ್ಷೆ' ಅಭಿಯಾನ ಶುರು - Maharashtra latest News

ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಕಷ್ಟ. ಹೀಗಾಗಿ ಸಿಬಿಎಸ್ಇ ಮತ್ತು ಬೋರ್ಡ್ ಪರೀಕ್ಷೆಗಳನ್ನು ಆಫ್​ಲೈನ್​ ಮೂಲಕ ನಡೆಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಬಾಲಿವುಡ್​ ನಟ ಸೋನು ಸೂದ್ ಒತ್ತಾಯಿಸಿದ್ದಾರೆ.

Maharashtra
ಬಾಲಿವುಡ್​ ನಟ ಸೋನು ಸೂದ್
author img

By

Published : Apr 12, 2021, 11:42 AM IST

ಮುಂಬೈ: ಬಾಲಿವುಡ್​ ನಟ, ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಅವರು ಆಫ್​ಲೈನ್​ ಮೂಲಕ ಮಕ್ಕಳಿಗೆ ಪರೀಕ್ಷೆ ನಡೆಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

'ಕ್ಯಾನ್ಸಲ್ ಬೋರ್ಡ್ ಪರೀಕ್ಷೆ' ಎಂಬ ಅಭಿಯಾನದ ಸೇರಿಕೊಂಡಿರುವ ಸೂದ್​, ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಕಷ್ಟ. ವಿದ್ಯಾರ್ಥಿಗಳ ಪರವಾಗಿ ನಾನು ವಿನಂತಿಯನ್ನು ಮಾಡಲು ಬಯಸುತ್ತೇನೆ. ಸಿಬಿಎಸ್ಇ ಮತ್ತು ಬೋರ್ಡ್ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಿದ್ಧರಿದ್ದಾರೆ ಎಂದು ನಾನು ಭಾವಿಸುವುದಿಲ್ಲ" ಎಂದಿದ್ದಾರೆ.

ಆಫ್​ಲೈನ್​ ಪರೀಕ್ಷೆಗಳನ್ನು ನಡೆಸದಂತೆ ಬಾಲಿವುಡ್​ ನಟ ಸೋನು ಸೂದ್ ಒತ್ತಾಯ

"ವಿದ್ಯಾರ್ಥಿಗಳು ಸುರಕ್ಷಿತವಾಗಿರಲು ಎಲ್ಲರೂ ಮುಂದೆ ಬಂದು ಬೆಂಬಲಿಸಬೇಕೆಂದು ನಾನು ಬಯಸುತ್ತೇನೆ. ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಸಂದರ್ಭದಲ್ಲಿ ಆಂತರಿಕ ಮೌಲ್ಯಮಾಪನ ವಿಧಾನ ಜಾರಿಗೆ ತರಬೇಕು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

ಇತ್ತೀಚೆಗೆ ಪಂಜಾಬ್‌ನ ಅಮೃತಸರದ ಆಸ್ಪತ್ರೆಯಲ್ಲಿ ಸೋನು ಸೂದ್​ ಕೊರೊನಾ ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.