ನವದೆಹಲಿ: ಭಾರತದಲ್ಲಿ ಶುಕ್ರವಾರ 3,377 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ದಿನ ದಾಖಲಾದ 3,303 ಸೋಂಕುಗಗಳಿಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 60 ಜನರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ 60 ಜನ ಕೋವಿಡ್ಗೆ ಬಲಿಯಾಗಿದ್ದು, ರಾಷ್ಟ್ರವ್ಯಾಪಿ ಸಾವಿನ ಸಂಖ್ಯೆ 5,23,753 ಕ್ಕೇರಿದೆ. ದೇಶದ ಸಕ್ರಿಯ ಸಂಖ್ಯೆ ಸಹ 17,801 ಗಡಿ ದಾಟಿದೆ. ಇದು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ 0.04 ಪ್ರತಿಶತವನ್ನು ಹೊಂದಿದೆ. ಕಳೆದ 24 ಗಂಟೆಗಳಲ್ಲಿ 2,496 ರೋಗಿಗಳು ಚೇತರಿಸಿಕೊಂಡಿದ್ದು, ಇದುವರೆಗೆ ಒಟ್ಟು 4,25,30,622ರಷ್ಟು ಜನರು ಗುಣಮುಖರಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಚೇತರಿಕೆ ಪ್ರಮಾಣವು ಈಗ 98.74 ಪ್ರತಿಶತದಷ್ಟಿದೆ.
ಓದಿ: ದೇಶದಲ್ಲಿ ಬಹು ದಿನಗಳ ಬಳಿಕ ಮೂರು ಸಾವಿರ ಗಡಿ ದಾಟಿದ ಕೋವಿಡ್ ಕೇಸ್ಗಳು!
ಕಳೆದ 24 ಗಂಟೆಯಲ್ಲಿ ದೇಶಾದ್ಯಂತ ಒಟ್ಟು 4,73,635 ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟಾರೆ 83.69 ಕೋಟಿಗೆ ಏರಿಕೆಯಾಗಿದೆ. ವಾರದ ಪಾಸಿಟಿವ್ ದರ ಶೇ. 0.63 ಪ್ರತಿಶತದಷ್ಟಿದ್ದರೆ, ದೈನಂದಿನ ಪಾಸಿಟಿವ್ ದರ ಶೇ. 0.71ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಳಗಿನ ಹೊತ್ತಿಗೆ ಭಾರತದಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಸಂಖ್ಯೆ 188.65 ಕೋಟಿಗಳನ್ನು ದಾಟಿದೆ.