ಪೂರ್ವ ಗೋದಾವರಿ(ಆಂಧ್ರಪ್ರದೇಶ): ಸಂಕ್ರಮಣ ಹಬ್ಬದ ಕಾಲದಲ್ಲಿ ವಿವಿಧ ರಾಜ್ಯಗಳಲ್ಲಿ ದೇಶಿ ಕ್ರೀಡೆಗಳು ಮೆರಗು ಪಡೆದುಕೊಳ್ಳಲು ಶುರುವಾಗುತ್ತವೆ. ಇದರಲ್ಲಿ ಪ್ರಮುಖವಾಗಿ ಖಾಲಿ ಚಕ್ಕಡಿ ಓಡಿಸುವ ಸ್ಪರ್ಧೆ ಕೂಡ ಮಹತ್ವದ್ದಾಗಿದೆ.
ಆಂಧ್ರಪ್ರದೇಶದ ಕೆಲವೊಂದು ಜಿಲ್ಲೆಗಳಲ್ಲಿ ಖಾಲಿ ಚಕ್ಕಡಿ ಓಡಿಸುವ ಸ್ಪರ್ಧೆಯನ್ನು ಈ ಅವಧಿಯಲ್ಲಿ ಆಯೋಜಿಸಲಾಗುತ್ತದೆ. ಅದೇ ರೀತಿ ಪೂರ್ವ ಗೋದಾವರಿಯ ವೆಲುಗುಬಂಧ ಗ್ರಾಮದಲ್ಲಿ ನಡೆದ ಚಕ್ಕಡಿ ಓಡಿಸುವ ಸ್ಪರ್ಧೆ ವೇಳೆ ಅಪಘಾತವೊಂದು ಸಂಭವಿಸಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಇದನ್ನೂ ಓದಿರಿ: ಖಾದ್ಯ ತೈಲದ ಬೆಲೆಯಲ್ಲಿ ₹5 ರಿಂದ 20 ರೂವರೆಗೆ ಇಳಿಕೆ
ಖಾಲಿ ಚಕ್ಕಡಿ ಓಡಿಸುತ್ತಿದ್ದ ಸಂದರ್ಭದಲ್ಲಿ ಬೈಕ್ವೊಂದು ಅಡ್ಡ ಬಂದಿದೆ. ಈ ವೇಳೆ ಚಕ್ಕಡಿ ಅದರ ಮೇಲೆ ಹತ್ತಿದ ಪರಿಣಾಮ ಪಲ್ಟಿಯಾಗಿದೆ. ಚಕ್ಕಡಿಯಲ್ಲಿದ್ದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.