ETV Bharat / bharat

ಪ್ರಧಾನಿ ನರೇಂದ್ರ ಮೋದಿ ಒಳಗೊಂಡ 'ಅಬಂಡನ್ಸ್​ ಇನ್​ ಮಿಲೆಟ್ಸ್​' ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ - 2024ರ ಗ್ರ್ಯಾಮಿ ಪ್ರಶಸ್ತಿ

Grammy Awards: ಪ್ರಧಾನಿ ನರೇಂದ್ರ ಮೋದಿ ಒಳಗೊಂಡ ವಿಶೇಷ ಹಾಡು 'ಅಬಂಡನ್ಸ್​ ಇನ್​ ಮಿಲೆಟ್ಸ್​' 2024ರ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ.

Indian-American singer Falu's 'Abundance in Millets' song featuring PM Modi nominated for Grammy Awards
ಪ್ರಧಾನಿ ನರೇಂದ್ರ ಮೋದಿ ಒಳಗೊಂಡ 'ಅಬಂಡನ್ಸ್​ ಇನ್​ ಮಿಲೆಟ್ಸ್​' ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ
author img

By ANI

Published : Nov 11, 2023, 4:52 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ, ಸಿರಿಧಾನ್ಯಗಳ ಮಹತ್ವವನ್ನು ಸಾರುವ ವಿಶೇಷ ಹಾಡು 'ಅಬಂಡನ್ಸ್​ ಇನ್​ ಮಿಲೆಟ್ಸ್​' (Abundance in Millets) 2024ರ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಹಾಡಿಗೆ ಭಾರತೀಯ ಮೂಲದ ಅಮೆರಿಕನ್​ ಗಾಯಕಿ ಫಲ್ಗುಣಿ ಶಾ ಸಂಗೀತ ನೀಡಿದ್ದು, ಅವರ ಪತಿ ಗೌರವ್​ ಶಾ ಹಾಡಿದ್ದಾರೆ.

ಸಿರಿಧಾನ್ಯಗಳ ಮಹತ್ವವನ್ನು ಸಾರುವುದಕ್ಕಾಗಿ ಈ ಹಾಡನ್ನು ಲಾಂಚ್​ ಮಾಡಲಾಗಿತ್ತು. 2023ರ ವರ್ಷವನ್ನು ಇಡೀ ಜಗತ್ತು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಆಚರಿಸುತ್ತಿದೆ. ಸಿರಿಧಾನ್ಯಗಳನ್ನು ಉತ್ತೇಜಿಸುವುದಕ್ಕಾಗಿ ಸೃಷ್ಟಿಸಲಾದ ಈ ಹಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿದ್ದಾರೆ. ಮೋದಿಯವರು ಈ ವರ್ಷದ ಜೂನ್​ನಲ್ಲಿ ತಮ್ಮ ನಾಲ್ಕು ದಿನಗಳ ಅಮೆರಿಕ​ ಪ್ರವಾಸದ ವೇಳೆ 'ಅಬಂಡನ್ಸ್​ ಇನ್​ ಮಿಲೆಟ್ಸ್​' ಹಾಡಿನ ಆಲ್ಬಂ​ ಅನ್ನು ಅನಾವರಣಗೊಳಿಸಿದರು.

ನಾಮನಿರ್ದೇಶನಗೊಂಡ ಇತರ ಹಾಡುಗಳು..: 2024ರ ಗ್ರ್ಯಾಮಿ ಪ್ರಶಸ್ತಿಗೆ 'ಅಬಂಡನ್ಸ್​ ಇನ್​ ಮಿಲೆಟ್ಸ್​' ಹಾಡಿನ ಜೊತೆಗೆ ಮತ್ತೆ ಕೆಲವೊಂದಿಷ್ಟು ಹಾಡುಗಳು ನಾಮನಿರ್ದೇಶನಗೊಂಡಿವೆ. ಅರೋಜ್ ಅಫ್ತಾಬ್ ಅವರ ಶ್ಯಾಡೋ ಫೋರ್ಸಸ್​, ವಿಜಯ್​ ಅಯ್ಯರ್​ ಮತ್ತು ಶಹಜಾದ್ ಇಸ್ಮಾಯಿಲಿ ಅವರ ಅಲೋನ್​ ಬೈ ಬುರ್ನಾ ಬಾಯ್​, ಡೇವಿಡೋ ಅವರ ಫೀಲ್​, ಸಿಲ್ವಾನಾ ಎಸ್ಟ್ರಾಡಾ ಅವರ ಮಿಲಾಗ್ರೋ ವೈ ಡಿಸಾಸ್ಟರ್​, ಬೆಲ ಫ್ಲೆಕ್​ ಅವರ ಪಾಸ್ತೋ, ಎಡ್ಗರ್ ಮೆಯೆರ್ ಮತ್ತು ಜಾಕಿರ್ ಹುಸೇನ್ ಒಳಗೊಂಡ ರಾಕೇಶ್ ಚೌರಾಸಿಯಾ ಹಾಗೂ ಸಿಮಾಫಂಕ್, ಟ್ಯಾಂಕ್ ಮತ್ತು ಬಂಗಾಸ್ ಒಳಗೊಂಡ ಇಬ್ರಾಹಿಂ ಮಾಲೂಫ್ ಅವರ ಟೊಡೊ ಕಲರ್ಸ್ ನಾಮನಿರ್ದೇಶನಗೊಂಡಿವೆ.

ಇದನ್ನೂ ಓದಿ: ನವರಾತ್ರಿಗಾಗಿ 'ಗರ್ಬಾ' ಹಾಡು ಬರೆದ ಪ್ರಧಾನಿ ಮೋದಿ: ನೀವೂ ಕೇಳಿ

ಗ್ರ್ಯಾಮಿ ಪ್ರಶಸ್ತಿ ಸಮಾರಂಭಕ್ಕೆ ದಿನ ನಿಗದಿ: ಕಲಾವಿದೆ ಟೇಲರ್ ಸ್ವಿಫ್ಟ್ ನಾಮನಿರ್ದೇಶನ ದಾಖಲೆಯನ್ನು ಮುರಿದಿದ್ದಾರೆ. ಏಳು ನಾಮನಿರ್ದೇಶನಗಳನ್ನು ಪಡೆದುಕೊಂಡ ಮೊದಲ ಗೀತರಚನಾಕಾರರಾಗಿದ್ದಾರೆ. ಒಲಿವಿಯಾ ರೊಡ್ರಿಗೋ, ಮಿಲೀ ಸೈರಸ್ ಮತ್ತು SZA ಜೊತೆಗೆ ವರ್ಷದ ವಿಭಾಗಗಳ ಆಲ್ಬಮ್ ಮತ್ತು ರೆಕಾರ್ಡ್‌ನಲ್ಲಿ ಅವರು ನಾಮನಿರ್ದೇಶನಗೊಂಡಿದ್ದಾರೆ. ಲಾನಾ ಡೆಲ್ ರೇ ಮತ್ತು ದುವಾ ಲಿಪಾ ಅವರು ವರ್ಷದ ಹಾಡಿಗೆ ಇತರ ನಾಮನಿರ್ದೇಶಿತರಾಗಿದ್ದಾರೆ. ಬಿಲ್ಲಿ ಎಲಿಶ್, ಜಾನ್ ಬ್ಯಾಟಿಸ್ಟ್ ಮತ್ತು SZA ಸಹ ವಿಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಮಿಡ್‌ನೈಟ್ಸ್‌ಗಾಗಿ ವರ್ಷದ ಸ್ವಿಫ್ಟ್‌ನ ಆಲ್ಬಂ ಈ ವಿಭಾಗದಲ್ಲಿ ಅವರ ಆರನೇ ನಾಮನಿರ್ದೇಶನವಾಗಿದೆ. 2024 ಗ್ರ್ಯಾಮಿ ಪ್ರಶಸ್ತಿಗಳು ಫೆಬ್ರವರಿ 4ರಂದು ಲಾಸ್​ ಏಂಜಲೀಸ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: ರಣ್‌ ಉತ್ಸವ, ಏಕತೆಯ ಪ್ರತಿಮೆಗೆ ಭೇಟಿ ನೀಡುವಂತೆ ಅಮಿತಾಭ್​ ಬಚ್ಚನ್‌ಗೆ ಪ್ರಧಾನಿ ಮೋದಿ ಒತ್ತಾಯ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.