ETV Bharat / bharat

ಗಂಡನ ನೆನಪಿನಲ್ಲೇ ರಿಯಾಯ್ತಿ ದರದಲ್ಲಿ ಆಂಬ್ಯುಲೆನ್ಸ್​ ಸೇವೆ ಆರಂಭಿಸಿದ ಮಹಿಳೆ

ಗಂಡನ ನೆನಪನ್ನು ಶಾಶ್ವತವಾಗಿ ಉಳಿಸಲು ಮುಂದಾದ ಹೆಂಡತಿ - ಸಮಾಜ ಸೇವೆ ಮೂಲಕ ಇತರರಿಗೆ ನೆರವು - ರಿಯಾಯ್ತಿ ದರದಲ್ಲಿ ಅಂಬ್ಯುಲೆನ್ಸ್​ ಸೇವೆ ಆರಂಭ

ಆಂಬ್ಯುಲೆನ್ಸ್​ ಸೇವೆ ಆರಂಭಿಸಿದ ಮಹಿಳೆ
ಆಂಬ್ಯುಲೆನ್ಸ್​ ಸೇವೆ ಆರಂಭಿಸಿದ ಮಹಿಳೆ
author img

By

Published : Dec 29, 2022, 5:45 PM IST

ರಾಜ​ಕೋಟ್​( ಗುಜರಾತ್​)​: ತಮ್ಮ ಬದುಕಿನ ಭಾಗವಾಗಿದ್ದ ಜನರ ನೆನಪನ್ನು ಚಿರಸ್ಥಾಯಿಯಾಗಿಡುವ ಕೆಲಸವನ್ನು ಅನೇಕರು ಮಾಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಗಂಡನ ನೆನಪು ಅಮರಾವಾಗಿಸುವ ಜೊತೆಗೆ ಬೇರೆಯವರ ಸಂಕಷ್ಟ ಕಾಲದಲ್ಲಿ ಮಿಡಿಯುವ ಮಾತೃ ಹೃದಯದಾತೆ ಆಗಿದ್ದಾರೆ.

ರಾಜ್​ಕೋಟ್​​ನ ಸಂಗೀತ ಬೆನ್​ ಕಳೆದ ಒಂದೂವರೆ ವರ್ಷದ ಹಿಂದೆ ಹರೇಶ್​ಬಾಯ್​ ಮನ್ಸುಖ್ಲಾಲ್​ ಶಾ ಅವರನ್ನು ಕಳೆದು ಕೊಂಡಿದ್ದರು. ಪತಿಯ ನೆನಪಿನಲ್ಲಿ ಇತರರಿಗೆ ನೆರವಾಗುವ ಉದ್ದೇಶದಿಂದಾಗಿ ಸಂಗೀತಬೆನ್​ ರಿಯಾಯ್ತಿ ದರದಲ್ಲಿ ಅಂಬ್ಯುಲೆನ್ಸ್​ ಸೇವೆ ಆರಂಭಿಸಿದ್ದಾರೆ. ಇದರಿಂದ ಅನೇಕರಿಗೆ ಲಾಭವಾಗಿದೆ. ಈ ಆಂಬ್ಯುಲೆನ್ಸ್​ ರಾಜ್​ಕೋಟ್​, ಮೊರ್ಬಿ, ನೇಪಾಳದಲ್ಲೂ ಸೇವೆ ನೀಡುತ್ತಿದೆ.

ಈ ಆಂಬ್ಯುಲೆನ್ಸ್​ ಸೇವೆಯಿಂದಾಗಿ ಅನೇಕ ಮಂದಿ ಪ್ರಯೋಜನ ಪಡೆದಿದ್ದು, ಸಂಕಷ್ಟ ಸಮಯದಲ್ಲಿ ಕಡಿಮೆ ವೆಚ್ಚದಲ್ಲಿ ನೂರಾರು ರೋಗಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್​ಕೋಟ್​ ನಿವಾಸಿಯಾಗಿರುವ ಸಂಗೀತ ಬೆನ್ ಮುಂಬೈನ​ ಆಲ್ಫಾ ಫೌಂಡೇಶನ್​ ಸದಸ್ಯರು ಆಗಿದ್ದಾರೆ.

ರಿಯಾಯಿತಿ ದರದ ಆಂಬ್ಯುಲೆನ್ಸ್​ ಸೇವೆ ಹೊರತಾಗಿ ಅವರು ಅವಶ್ಯಕತೆ ಹೊಂದಿರುವ ಮಕ್ಕಳಿಗೆ ಗ್ಲೋಕೋಸ್​ ಬಾಟಲ್​ಗಳನ್ನು ವಿತರಣೆ ಮಾಡುತ್ತಿದ್ದಾರೆ. ಜೊತೆಗೆ ಮುಂಬೈನ ಸ್ಲಂಗಳಿಗೆ ಭೇಟಿ ನೀಡಿ ಅಲ್ಲಿ ಸಾಮಾಜಿಕ ಕಾರ್ಯ ನಡೆಸುವ ಜೊತೆಗೆ ಆಹಾರವನ್ನು ವಿತರಣೆ ಮಾಡುವ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ: 8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿಕೊಂಡ ಪೊಲೀಸ್​ ಅಧಿಕಾರಿ.. ದೃಢ ಸಂಕಲ್ಪಕ್ಕೆ ಸಿಕ್ಕಿತು ಪ್ರಮಾಣಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.