ETV Bharat / bharat

ಬಾಲ್ಯದಲ್ಲಿ ಇಬ್ಬರು ಪುರುಷರಿಂದ ಎದುರಾದ ಸಂಕಷ್ಟದ ಬಗ್ಗೆ ಹೇಳಿಕೊಂಡ ಜಿಲ್ಲಾಧಿಕಾರಿ.. - ಮಹಿಳಾ ಐಎಎಸ್ ಅಧಿಕಾರಿ

'ಇಬ್ಬರು ನನ್ನನ್ನು ಪ್ರೀತಿಯಿಂದ ಹತ್ತಿರ ಕರೆದರು. ಅವರು ನನ್ನನ್ನು ಏಕೆ ಸ್ಪರ್ಶಿಸುತ್ತಿದ್ದರು ಅಥವಾ ಪ್ರೀತಿಯಿಂದ ವರ್ತಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗಿರಲಿಲ್ಲ. ಅವರು ನನ್ನ ಬಟ್ಟೆಗಳನ್ನು ತೆಗೆದಾಗ ನನಗೆ ಬೇಸರವಾಯಿತು. ಅಷ್ಟರಲ್ಲಾಗಲೇ ನಾನು ಓಡಿಹೋಗಿದ್ದೆ' ಎಂದು ಜಿಲ್ಲಾಧಿಕಾರಿ ಡಾ. ದಿವ್ಯಾ ಎಸ್. ಅಯ್ಯರ್ ಬಹಿರಂಗಪಡಿಸಿದ್ದಾರೆ.

A woman IAS officer
ಜಿಲ್ಲಾಧಿಕಾರಿ ಡಾ ದಿವ್ಯಾ ಎಸ್ ಅಯ್ಯರ್
author img

By

Published : Mar 29, 2023, 8:21 PM IST

ಪತ್ತನಂತಿಟ್ಟ(ಕೇರಳ): ಕೇರಳದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು, ತಾವು ಆರು ವರ್ಷದವಳಿದ್ದಾಗ ಇಬ್ಬರು ಪುರುಷರಿಂದ ಎದುರಾದ ಸಂಕಷ್ಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ ಡಾ. ದಿವ್ಯಾ ಎಸ್. ಅಯ್ಯರ್ ಅವರು ತಮ್ಮ ಬಾಲ್ಯದ ವಯಸ್ಸಿನಲ್ಲಿ ತಾವು ಅನುಭವಿಸಿದ ಕಹಿ ಅನುಭವವನ್ನು ತೆರೆದಿಟ್ಟಿದ್ದಾರೆ.

ಬಾಲಕಿಯಾಗಿದ್ದಾಗ ನಡೆದ ಕೆಟ್ಟ ಅನುಭವದ ಬಗ್ಗೆ ಕಲೆಕ್ಟರ್ ಹೇಳಿದ್ದು ಹೀಗೆ: ''ಇಬ್ಬರು ನನ್ನನ್ನು ಪ್ರೀತಿಯಿಂದ ಹತ್ತಿರ ಕರೆದರು. ಅವರು ಏಕೆ ಸ್ಪರ್ಶಿಸುತ್ತಿದ್ದರು ಅಥವಾ ಪ್ರೀತಿಯಿಂದ ವರ್ತಿಸುತ್ತಿದ್ದಾರೆಂಬುದು ನನಗೆ ಅರ್ಥವಾಗಿರಲಿಲ್ಲ. ಅವರು ನನ್ನ ಬಟ್ಟೆಗಳನ್ನು ತೆಗೆದಾಗ ನನಗೆ ಬೇಸರವಾಯಿತು. ನಂತರ ನಾನು ಓಡಿಹೋಗಿದ್ದೆ. ಆ ಆಘಾತದಿಂದ ಪಾರಾಗಲು ನನ್ನ ತಂದೆ-ತಾಯಿ ನೀಡಿದ ಮಾನಸಿಕ ಬೆಂಬಲದಿಂದ ಮಾತ್ರ ಸಾಧ್ಯವಾಯಿತು. ನಂತರ, ನಾನು ಜನಸಂದಣಿಗೆ ಹೋದಾಗ, ನಾನು ಎಲ್ಲರ ಮೇಲೆ ಕಣ್ಣಿಡುತ್ತಿದ್ದೆ. ಆ ಎರಡು ಮುಖಗಳು ಎಲ್ಲೋ ಇವೆ ಅನಿಸುತ್ತಿತ್ತು. ಆದರೆ, ಅವರು ಯಾರೆಂದು ನನಗೆ ತಿಳಿಯಲಿಲ್ಲ. ಮತ್ತೆ ಅವರನ್ನು ನಾನು ನೋಡಿಲ್ಲ. ಆದರೆ, ಅವರ ಮುಖ ನನಗೆ ಇನ್ನೂ ನೆನಪಿದೆ. ಆ ಆರು ವರ್ಷದ ಬಾಲಕಿಗೆ ಆಗ ಏನನ್ನೂ ಗುರುತಿಸಲು ಸಾಧ್ಯವಾಗಲಿಲ್ಲ'' ಎಂದು ಒಂದನೇ ತರಗತಿಯಲ್ಲಿ ಓದುತ್ತಿದ್ದಾಗ ಎದುರಿಸಿದ ಸಂಕಷ್ಟದ ಬಗ್ಗೆ ಜಿಲ್ಲಾಧಿಕಾರಿ ಹೇಳಿದರು.

ಮಕ್ಕಳನ್ನು ಮಾನಸಿಕ ಆಘಾತಕ್ಕೆ ದೂಡದಂತೆ ಸಲಹೆ: ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ ಗುರುತಿಸುವುದನ್ನು ಕಲಿಸಿ ಚಿಟ್ಟೆಗಳಂತೆ ಹಾರಾಡಬೇಕಾದ ವಯಸ್ಸಿನಲ್ಲಿ ಮಕ್ಕಳನ್ನು ಮಾನಸಿಕ ಆಘಾತಕ್ಕೆ ದೂಡದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಮಕ್ಕಳು ಎದುರಿಸಬಹುದಾದ ಹಿಂಸೆಯ ಬಗ್ಗೆ ಪೋಷಕರು ಮತ್ತು ಶಿಕ್ಷಕರು ತಿಳಿಸಬೇಕು ಎಂದು ದಿವ್ಯಾ ಎಸ್ ಅಯ್ಯರ್ ಸಲಹೆ ನೀಡಿದರು.

ಬಾಲಕಿಯೊಬ್ಬಳು ಮಾನಸಿಕವಾಗಿ ಕುಸಿದಿರುವ ಘಟನೆ ಹಂಚಿಕೊಂಡ ಡಿಸಿ: ಕೋನ್ನಿ ತಾಲೂಕು ಕಚೇರಿ ಸಿಬ್ಬಂದಿ ವಿಹಾರ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಿಂದ ಬಾಲಕಿಯೊಬ್ಬಳು ಮಾನಸಿಕವಾಗಿ ಕುಸಿದಿರುವ ಘಟನೆಯನ್ನೂ ದಿವ್ಯಾ ಎಸ್ ಅಯ್ಯರ್ ಹಂಚಿಕೊಂಡಿದ್ದಾರೆ. ಕೊನ್ನಿ ತಾಲೂಕು ಕಚೇರಿಯಿಂದ ನೌಕರರು ವಿಹಾರಕ್ಕೆ ತೆರಳುವ ವಿಚಾರವಾಗಿ ವಿವಾದ ಉಂಟಾದಾಗ, ನೌಕರರು ಪ್ರವಾಸಕ್ಕೆ ತೆರಳಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಗುಂಪಿನಲ್ಲಿದ್ದ ಬಾಲಕಿಯೊಬ್ಬಳು ಅನುಭವಿಸಿದ ಮಾನಸಿಕ ಹಿಂಸೆ ಮಾಮೂಲಿಯಲ್ಲ. ವಿವಾದಾತ್ಮಕ ಮನರಂಜನಾ ಪ್ರವಾಸದಲ್ಲಿ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರ ಖಾಸಗಿ ಕ್ಷಣಗಳ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಯಾರೋ ವ್ಯಕ್ತಿಗಳ ಖಾಸಗಿ ಕ್ಷಣಗಳನ್ನು ಪರಿಗಣಿಸದೇ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದರ ಪರಿಣಾಮಗಳ ಬಗ್ಗೆ ಯೋಚಿಸದೆ ಮಾಡಿದ ಕೃತ್ಯವಾಗಿತ್ತು. ಒಬ್ಬ ವ್ಯಕ್ತಿಯು ಮುಂಭಾಗದಿಂದ ಹಾಡುತ್ತಿರುವ ಚಿತ್ರವು ಹೆಚ್ಚು ಪ್ರಸಾರವಾಗಿದೆ. ಆ ವ್ಯಕ್ತಿ ನಮ್ಮ ಉದ್ಯೋಗಿಯಾಗಿರಲಿಲ್ಲ. ಅವಳು ನಮ್ಮ ಅಧಿಕಾರಿಯೊಬ್ಬರ ಮಗಳು. ಒಂದೇ ದಿನದಲ್ಲಿ ಆ ವಿಡಿಯೋ ಒಂದು ಕೋಟಿ ವೀಕ್ಷಣೆ ಪಡೆದಿದೆ. ಇದು ಎಂದಿಗೂ ಒಳ್ಳೆಯದಲ್ಲ ಎಂದು ಡಿಸಿ ಆತಂಕ ವ್ಯಕ್ತಪಡಿಸಿದರು.

''ನನ್ನ ತಾಯಿಯೊಂದಿಗೆ ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಹುಡುಗಿ ಹಾಡು ಹಾಡುವುದಷ್ಟೆ. ಆದರೆ, ಆ ನಂತರ ವಿದ್ಯಾರ್ಥಿನಿ ಅನುಭವಿಸಬೇಕಾಗಿದ್ದ ಮಾನಸಿಕ ಸಂಘರ್ಷದ ಪ್ರಮಾಣ ಹೊರಜಗತ್ತಿಗೆ ತಿಳಿಯದೇ ಇರಬಹುದು. ಇಲ್ಲಿಗೆ ಬಂದ ಮರುದಿನವೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಅವಳನ್ನು ನೇರವಾಗಿ ಭೇಟಿಯಾಗಿ ಮಾತನಾಡಿಸಿದಾಗಲೂ ಇನ್ನು ಹಾಡಲಾರದ ಸ್ಥಿತಿಯಲ್ಲಿದ್ದಳು. ನಂತರ, ಮಗುವಿನ ಕುಟುಂಬ ಮತ್ತು ಸ್ನೇಹಿತರು ಸಾಕಷ್ಟು ಬೆಂಬಲವನ್ನು ನೀಡಬೇಕಾಯಿತು. ಆದರೆ, ಸಾಕಷ್ಟು ಮಾನಸಿಕ ಬಿಕ್ಕಟ್ಟು ಹಾಗೂ ಸಂಘರ್ಷದಿಂದಾಗಿ ಹಲವು ದಿನ ಕಾಲೇಜಿಗೆ ಹೋಗಲೂ ಸಾಧ್ಯವಾಗಿರಲಿಲ್ಲ. ನಮ್ಮ ದೇಶದಲ್ಲೂ ಇಂತಹ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಘಟನೆಯನ್ನು ಉಲ್ಲೇಖಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಜ್ಯ ಯುವ ಮಾಧ್ಯಮ ತರಬೇತಿ ಶಿಬಿರ: ಇಂತಹ ಘಟನೆಗಳಿಗೆ ನಾವೇ ಕಾರಣರಲ್ಲ ಎಂಬುದನ್ನು ಮನಗಾಣಬೇಕು. ನಾವು ಮಾಡುವ ಕೆಲಸದಿಂದ ಯಾರಿಗೆ ತೊಂದರೆಯಾಗುತ್ತದೆ ಎಂದು ಯೋಚಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಾ ಅವರು, ಇತರರ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುವಂತಹ ಅಸ್ತ್ರ ನಿಮ್ಮ ಕೈಯಲ್ಲಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸುದ್ದಿ ವರದಿ ಮಾಡುವಾಗ ಗಮನಿಸಬೇಕಾದ ವಿಷಯಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಲು ರಾಜ್ಯ ಯುವ ಕಲ್ಯಾಣ ಮಂಡಳಿ ಆಯೋಜಿಸಿದ್ದ ರಾಜ್ಯ ಯುವ ಮಾಧ್ಯಮ ತರಬೇತಿ ಶಿಬಿರದಲ್ಲಿ ಜಿಲ್ಲಾಧಿಕಾರಿ ಅವರು ಈ ಸಂಕಟವನ್ನು ಬಹಿರಂಗಪಡಿಸಿದರು. ಇವರ ಹೇಳಿಕೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಸಂಬಂಧಿಸಿದೆ. ಡಾ ದಿವ್ಯಾ ಎಸ್. ಅಯ್ಯರ್ ಅವರು ಮಾಜಿ ಶಾಸಕ ಮತ್ತು ಕಾಂಗ್ರೆಸ್ ನಾಯಕ ಕೆ.ಎಸ್. ಶಬರಿನಾಥನ್ ಅವರ ಪತ್ನಿಯೂ ಹೌದು.

ಇದನ್ನೂ ಓದಿ: ಗೂಗಲ್​ಗೆ 1,337.76 ಕೋಟಿ ರೂ. ದಂಡ.. ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಎಟಿ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.