ETV Bharat / bharat

ಪತಿ ಮೃತಪಟ್ಟ 11 ತಿಂಗಳ ನಂತರ ಮಗು ಪಡೆದ ಮಹಿಳೆ.. ಅದ್ಹೇಗಿ ಅಂದ್ರೇ ಹೀಗೆ.. - ಫರ್ಟಿಲಿಟಿ ಸೆಂಟರ್​ನ ಸಹಾಯದಿಂದ ಮಗು ಪಡೆದ ಮಹಿಳೆ

2021ರ ಮಾರ್ಚ್​ ತಿಂಗಳಲ್ಲಿ ವೈದ್ಯರು ಪರೀಕ್ಷೆಗಾಗಿ ಸ್ತ್ರೀ ಅಂಡಾಣು ಮತ್ತು ಪುರುಷ ವೀರ್ಯಗಳನ್ನು ಪಡೆದು ಸಂಗ್ರಹಿಸಿಟ್ಟಿದ್ದರು. ಆದರೆ, 2021ರಲ್ಲಿ ಕೋವಿಡ್ ಕಾರಣದಿಂದ ಪತಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಗುವನ್ನು ಪಡೆಯಬೇಕೆಂಬ ಪತಿಯ ಆಸೆಯನ್ನು ಈಡೇರಿಸಲು ಮಹಿಳೆ ಮುಂದಾಗಿದ್ದಾರೆ. ವಾರಂಗಲ್​ನ ಆಸ್ಪತ್ರೆಯಲ್ಲಿ ಸಂಗ್ರಹಿಸಿರುವ ಪತಿ ವೀರ್ಯದ ಮೂಲಕ ತಾಯಿಯಾಗಲು ನಿರ್ಧರಿಸಿದ್ದಾರೆ..

A WOMAN GOT PREGNANT AFTER HER HUSBAND DIED
ಪತಿ ಮೃತಪಟ್ಟ 11 ತಿಂಗಳ ನಂತರ ಮಗು ಪಡೆದ ಮಹಿಳೆ
author img

By

Published : Apr 8, 2022, 10:15 AM IST

ಮುಂಚೆರಿಯಲ್, ತೆಲಂಗಾಣ : ಪತಿ ಮೃತಪಟ್ಟ ಸುಮಾರು 11 ತಿಂಗಳ ನಂತರ ಮಹಿಳೆ ಮಗುವಿಗೆ ಜನ್ಮ ನೀಡಿರುವ ಘಟನೆ ತೆಲಂಗಾಣದ ವಾರಂಗಲ್​ನಲ್ಲಿ ನಡೆದಿದೆ. ಫರ್ಟಿಲಿಟಿ ಸೆಂಟರ್​ನ ಸಹಾಯದಿಂದ ವಾರಂಗಲ್ ಸಮೀಪದ ಮುಂಚೆರಿಯಲ್ ಮೂಲದ ಮಹಿಳೆಯೊಬ್ಬರು ಮಗು ಪಡೆದಿದ್ದಾರೆ.

2013ರಲ್ಲಿ ವಿವಾಹವಾಗಿದ್ದ ದಂಪತಿಗೆ ಸುಮಾರು ಏಳು ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ ದಂಪತಿ ಒಯಾಸಿಸ್ ಫರ್ಟಿಲಿಟಿ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಚಿಕಿತ್ಸೆ ಪಡೆಯುವಾಗ ಆಸ್ಪತ್ರೆ ಸಂಗ್ರಹಿಸಿಟ್ಟಿದ್ದ 'ಮಾದರಿ' ಮಹಿಳೆಗೆ ಸಂತಾನಭಾಗ್ಯ ಒದಗಿಸಿದೆ. ಸಂತಾನಭಾಗ್ಯವಿಲ್ಲದ ಕಾರಣದಿಂದ ದಂಪತಿ 2020ರಿಂದ ಒಯಾಸಿಸ್ ಫರ್ಟಿಲಿಟಿ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

2021ರ ಮಾರ್ಚ್​ ತಿಂಗಳಲ್ಲಿ ವೈದ್ಯರು ಪರೀಕ್ಷೆಗಾಗಿ ಸ್ತ್ರೀ ಅಂಡಾಣು ಮತ್ತು ಪುರುಷ ವೀರ್ಯಗಳನ್ನು ಪಡೆದು ಸಂಗ್ರಹಿಸಿಟ್ಟಿದ್ದರು. ಆದರೆ, 2021ರಲ್ಲಿ ಕೋವಿಡ್ ಕಾರಣದಿಂದ ಪತಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಗುವನ್ನು ಪಡೆಯಬೇಕೆಂಬ ಪತಿಯ ಆಸೆಯನ್ನು ಈಡೇರಿಸಲು ಮಹಿಳೆ ಮುಂದಾಗಿದ್ದಾರೆ. ವಾರಂಗಲ್​ನ ಆಸ್ಪತ್ರೆಯಲ್ಲಿ ಸಂಗ್ರಹಿಸಿರುವ ಪತಿ ವೀರ್ಯದ ಮೂಲಕ ತಾಯಿಯಾಗಲು ನಿರ್ಧರಿಸಿದ್ದಾರೆ.

ಈ ಕುರಿತು ತನ್ನ ಪತಿಯ ಕುಟುಂಬದವರಿಗೂ ತಿಳಿಸಿದ ಆಕೆ, ನಂತರ ವೈದ್ಯ ನಿಪುಣರನ್ನು ಸಂಪರ್ಕಿಸಿದ್ದಾರೆ. ಇಂತಹ ಸಂತಾನಕ್ರಮಕ್ಕೆ ಕಾನೂನು ತೊಂದರೆಗಳಿರುವ ಕಾರಣದಿಂದ ಹೈಕೋರ್ಟ್​ನ ಮೊರೆ ಹೋಗಿದ್ದು, ಅಲ್ಲಿಯೂ ಅನುಮತಿ ಪಡೆದುಕೊಂಡಿದ್ದಾರೆ. ನಂತರ ವೈದ್ಯರು 2021ರ ಆಗಸ್ಟ್‌ನಲ್ಲಿ ಆಕೆಯ ಅಂಡಾಣು ಮತ್ತು ಪತಿಯ ವೀರ್ಯದೊಂದಿಗೆ ಐವಿಎಫ್ ಕಾರ್ಯವಿಧಾನವನ್ನು ಪ್ರಾರಂಭಿಸಿದ್ದು, 2022ನೇ ಮಾರ್ಚ್​ 22ರಂದು ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ: 20 ರಿಂದ 39 ವರ್ಷ ವಯಸ್ಸಿನವರಲ್ಲಿ ಪ್ರಿಡಯಾಬಿಟಿಕ್ಸ್‌ ಶೇ.11ರಷ್ಟು ಏರಿಕೆ : ಮೆಡಾಲ್ ಹೆಲ್ತ್‌ಕೇರ್ ವರದಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.