ಲಖನೌ( ಉತ್ತರಪ್ರದೇಶ): ಕೈಸರ್‌ಬಾಗ್‌ನ ಬೆಂಗಾಲಿ ತೋಲಾ ನಿವಾಸಿಯೊಬ್ಬರು ತಮ್ಮ ಸಾಕು ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ. ಸುಶೀಲಾ ತ್ರಿಪಾಠಿ (82) ಅವರನ್ನು ಬಲರಾಂಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸುಶೀಲಾ ತ್ರಿಪಾಠಿ ಅವರು ತಮ್ಮ ಕುಟುಂಬದ ಜೊತೆ ಎರಡು ಸಾಕು ನಾಯಿಗಳೊಂದಿಗೆ ವಾಸಿಸುತ್ತಿದ್ದರು. ಈ ಕುಟುಂಬವು ಲ್ಯಾಬ್ರಡಾರ್ ಮತ್ತು ಪಿಟ್ಬುಲ್ ಎಂಬ ನಾಯಿಗಳನ್ನು ಹೊಂದಿತ್ತು. ಮಂಗಳವಾರ ಬೆಳಗ್ಗೆ ತ್ರಿಪಾಠಿಯವರು ನಾಯಿಗಳ ಜೊತೆ ವಾಕಿಂಗ್ಗೆ ಹೋಗಿದ್ದಾಗ ಪಿಟ್‌ಬುಲ್ ಸುಶೀಲಾ ತ್ರಿಪಾಠಿ ಮೇಲೆ ದಾಳಿ ಮಾಡಿದೆ. ಆದರೆ, ನಾಯಿ ಮಾಲೀಕರಿಗೆ ವಯಸ್ಸಾದ ಕಾರಣ ಚೀರಾಡುವುದನ್ನು ಬಿಟ್ಟು ಬೇರೇನೂ ಮಾಡಲಾಗಿಲ್ಲ. ಪರಿಣಾಮ ನಾಯಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಿಟ್‌ಬುಲ್ ಮಾಲೀಕಳ ಹೊಟ್ಟೆ, ಕಿವಿ, ಮುಖ, ಪಾದಗಳು ಮತ್ತು ಕೈಗಳು ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಗಂಭೀರವಾದ ಗಾಯಗಳನ್ನು ಮಾಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ 13 ಸ್ಥಳಗಳಲ್ಲಿ ಕಚ್ಚಿದ ಗುರುತುಗಳು ಪತ್ತೆಯಾಗಿವೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ರೌಡಿಗಳಿಗೆ ಎಸ್.ಪಿ ವಂಶಿಕೃಷ್ಣ ಖಡಕ್ ವಾರ್ನಿಂಗ್...!