ಅನಂತನಾಗ್ : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಅರ್ವಾನಿ ಪ್ರದೇಶದ ಮುಮನ್ಹಾಲ್ನಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯುತ್ತಿದೆ. ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು, ಮುಮನ್‌ಹಾಲ್ ಪ್ರದೇಶದಲ್ಲಿ ಉಗ್ರರು ಇರುವ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದ್ದು, ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಸೇನೆಯು ಪ್ರದೇಶವನ್ನು ಸಂಪೂರ್ಣ ಸುತ್ತುವರಿದಿದೆ.
ಈ ಸಮಯದಲ್ಲಿ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಪ್ರತ್ಯುತ್ತರವಾಗಿ ಭದ್ರತಾ ಪಡೆ ಸಹ ಗುಂಡು ಹಾರಿಸಿ ಓರ್ವ ಉಗ್ರನನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದೆ.
-
Encounter breaks out between terrorists and security forces in Mumanhal locality of Arwani area in Anantnag, Jammu and Kashmir: Police
— ANI (@ANI) December 23, 2021 " class="align-text-top noRightClick twitterSection" data="
">Encounter breaks out between terrorists and security forces in Mumanhal locality of Arwani area in Anantnag, Jammu and Kashmir: Police
— ANI (@ANI) December 23, 2021Encounter breaks out between terrorists and security forces in Mumanhal locality of Arwani area in Anantnag, Jammu and Kashmir: Police
— ANI (@ANI) December 23, 2021
ಕಳೆದ ಮಂಗಳವಾರ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕರ ನಾಲ್ವರು ಸಹಚರರನ್ನು ಬಂಧಿಸಿದ್ದರು.
ಜುಬೇರ್ ಗುಲ್, ಆದಿಲ್ ಫಯಾಜ್ ಘನಿ, ಬಸಿತ್ ಅಲಿ ಮತ್ತು ಶಾಹಿದ್ ನಬಿ ಪಂಡಿತ್ ಬಂಧಿತ ಆರೋಪಿಗಳು. ಇವರು ಅವಂತಿಪೋರಾ ಮತ್ತು ಪಾಂಪೋರ್ ಪ್ರದೇಶಗಳಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು ಎಂದು ತಿಳಿದು ಬಂದಿದೆ.