ಹೈದರಾಬಾದ್: ಇಲ್ಲಿನ ಗಚ್ಚಿಬೌಲಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಯುವತಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮ್ಮು ಕಾಶ್ಮೀರದ ಕೃತಿ ಸಂಭಾಲ್ (27) ಹೈದರಾಬಾದ್‌ನ ಅಮೆಜಾನ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ತನ್ನ ಇಬ್ಬರು ಸ್ನೇಹಿತರೊಂದಿಗೆ ನಾನಕ್ರಮ್‌ಗುಡಾದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು.
ಇವರ ರೂಮ್‌ಮೇಟ್‌ಗಳಲ್ಲಿ ಒಬ್ಬರು ಎರಡು ದಿನಗಳ ಹಿಂದೆ ದೆಹಲಿಗೆ ಹೋಗಿದ್ದರು. ಇನ್ನೊಬ್ಬ ರೂಮ್‌ಮೇಟ್ ಕಚೇರಿಗೆ ಹೋಗಿದ್ದರು. ದುರಂತ ಎಂದರೆ ಈಕೆ ಒಳಗಿರುವುದನ್ನು ಮರೆತು ಬೀಗಹಾಕಿಕೊಂಡು ಹೋಗಿದ್ದಾರೆ.
ಆಕೆ ಕಚೇರಿಗೆ ತೆರಳಿದ ಬಳಿಕ ಕೃತಿ ತನ್ನ ಸ್ನೇಹಿತ ಸಚಿನ್ ಕುಮಾರ್‌ಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿದ್ದಾರೆ. ಸಂದೇಶವನ್ನು ಪಡೆದ ನಂತರ ಆತ ಫ್ಲಾಟ್‌ಗೆ ಧಾವಿಸಿ ನೋಡಿದಾಗ ಅದು ಲಾಕ್ ಆಗಿರುವುದು ಕಂಡುಬಂದಿದೆ.
ನಂತರ ಆತ ಕೃತಿ ಸ್ನೇಹಿತೆಯ ಕಚೇರಿಗೆ ಹೋಗಿ ಕೀ ಪಡೆದು ಬಂದು ಬಾಗಿಲು ತೆರೆದಾಗ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕೃತಿ ದೇಹ ಕಂಡು ಬಂದಿದೆ. ತಕ್ಷಣ ಸಚಿನ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರಾದರೂ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತ್ತಿತ್ತು: ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ