ಸಿದ್ದಿಪೇಟೆ, ತೆಲಂಗಾಣ: ಇತ್ತೀಚಿನ ದಿನಗಳಲ್ಲಿ ನಾವು ವಿವಾಹೇತರ ಸಂಬಂಧಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಅಷ್ಟೇ ಅಲ್ಲ ಆ ವ್ಯಾಮೋಹಕ್ಕೆ ಬಿದ್ದು ಅನ್ಯಾಯವಾಗಿ ಅದೆಷ್ಟೋ ಜನರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿವಾಹೇತರ ಸಂಬಂಧದಲ್ಲಿ ಬಿದ್ದವರು ಯಾರ ಮಾತುಗಳನ್ನು ಕೇಳಲು ಇಷ್ಟಪಡುವುದಿಲ್ಲ. ಇದನ್ನು ಪ್ರಶ್ನಿಸಿದವರನ್ನೇ ಅವರು ಕೊಲ್ಲಲು ಹಿಂಜರಿಯುವುದಿಲ್ಲ. ಕ್ಷಣಿಕ ಸುಖಕ್ಕಾಗಿ ಕುಟುಂಬಗಳು ಬೀದಿಪಾಲಾಗುತ್ತಿರುವ ಘಟನೆಗಳು ಹಲವು. ಅಂತಹುದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ವಿದ್ಯಾರ್ಥಿಯೊಬ್ಬರು ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದ್‌ಗೆ ತೆರಳಿದ್ದರು. ಆ ವಿದ್ಯಾರ್ಥಿ ತನ್ನ ಜೀವನಕ್ಕೆ ಹೊರೆಯಾಗದಂತೆ ಶಾಪಿಂಗ್ ಮಾಲ್ನಲ್ಲಿ ಕೆಲಸ ಮಾಡಿಕೊಂಡು ಓದುತ್ತಿದ್ದನು. ಈ ವೇಳೆ ಅಲ್ಲಿ ವಿವಾಹಿತ ಮಹಿಳೆಯೊಬ್ಬರ ಪರಿಚಯವಾಗಿದೆ. ಅದು ವಿವಾಹೇತರ ಸಂಬಂಧಕ್ಕೆ ಕಾರಣವಾಯಿತು. ಆದ್ರೆ ಮುಂದಿನ ದಿನಗಳಲ್ಲಿ ಆಕೆ ಬೇರೊಬ್ಬ ಪುರುಷನೊಂದಿಗೆ ಸಲುಗೆ ಬೆಳೆಸುತ್ತಿರುವುದನ್ನು ಸಹಿಸಲಾರದೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೋಷಕರ ದೂರು ಮತ್ತು ಸ್ಥಳೀಯರ ಪ್ರಕಾರ.. ಸಿದ್ದಿಪೇಟೆ ಜಿಲ್ಲೆಯ ಕುಕುನೂರುಪಲ್ಲಿ ತಾಲೂಕಿನ ಮಂಗೋಲ್ ಮೂಲದ ಲಗಿಶೆಟ್ಟಿ ಅಭಿಷೇಕ್ ಹೈದರಾಬಾದ್ನಲ್ಲಿ ಪದವಿ ಓದುತ್ತಿದ್ದರು. ಮನೆಯವರೆಗೆ ಹೊರೆ ಆಗಬಾರದು ಎಂದು ಅಭಿಷೇಕ್ ಸುಚಿತ್ರಾ ಪ್ರದೇಶದ ಶಾಪಿಂಗ್ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅಭಿಷೇಕ್ಗೆ ವಿವಾಹಿತ ಮಹಿಳೆಯೊಬ್ಬರ ಪರಿಚಯವಾಗಿದೆ. ಆ ಪರಿಚಯ ವಿವಾಹೇತರ ಸಂಬಂಧಕ್ಕೆ ಕಾರಣವಾಯಿತು. ಇತ್ತೀಚೆಗಷ್ಟೇ ಆಕೆ ಬೇರೊಬ್ಬನೊಂದಿಗೆ ಸಲುಗೆಯಿಂದ ಇರುತ್ತಿರುವುದು ಅಭಿಷೇಕ್ ಗಮನಿಸಿದ್ದ. ಇದನ್ನು ಸಹಿಸಲಾಗದೆ ಅಭಿಷೇಕ್ ಖಿನ್ನತೆಗೆ ಒಳಗಾಗಿದ್ದರು ಎಂದು ಸಂಬಂಧಿಕರು ಮತ್ತು ಪೋಷಕರು ಆರೋಪಿಸಿದ್ದಾರೆ.
ಕೆಲ ದಿನಗಳ ಬಳಿಕ ಬೇರೊಬ್ಬನ ಜೊತೆ ಆ ಮಹಿಳೆ ಇರುವುದನ್ನು ಕಂಡ ಅಭಿಷೇಕ್ ಮನನೊಂದು ತಮ್ಮ ಸ್ವಗ್ರಾಮದತ್ತ ಪ್ರಯಾಣ ಬೆಳಿಸಿದ್ದರು. ಇದೇ ತಿಂಗಳ 17ರಂದು ಜಮೀನಿನಲ್ಲಿ ಯಾರೂ ಇಲ್ಲದ ವೇಳೆ ಅಭಿಷೇಕ್ ಆತ್ಮಹತ್ಯೆಗೆ ಯತ್ನಿಸಿದ್ದರು. ಗಮನಿಸಿದ ಪೋಷಕರು ಕೂಡಲೇ ಆತನನ್ನು ಚಿಕಿತ್ಸೆಗಾಗಿ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅಭಿಷೇಕ್ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಬೆಳೆದು ನಿಂತ ಮಗ ಏಕಾಏಕಿ ಸಾವನ್ನಪ್ಪಿರುವುದನ್ನು ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮ ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ: ಬೆಂಗಳೂರು: ಹಣಕ್ಕೆ ಬೇಡಿಕೆಯಿಟ್ಟ PSI ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು
ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನ: ಇತ್ತಿಚೇಗೆ ಹೈದರಾಬಾದ್ನಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಇಲ್ಲಿನ ಸರೂರ್ನಗರ ಸಿಐ ಜಾನಕಿರೆಡ್ಡಿ ಪ್ರಕಾರ, ಎನ್ಟಿಆರ್ ನಗರದ ಸುರೇಶ್ ಎಂಬಾತ ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಈ ಕ್ರಮದಲ್ಲಿ ಪತ್ನಿ ತನ್ನ ಮಕ್ಕಳ ಸಮೇತ ಮನೆ ಬಿಟ್ಟು ತವರು ಮನೆ ಸೇರಿದ್ದರು. ಹೀಗಾಗಿ ಪತ್ನಿ, ಮಕ್ಕಳು ದೂರವಾಗಿದ್ದಾರೆ ಎಂದು ಸುರೇಶ್ ಖಿನ್ನತೆಗೆ ಒಳಗಾಗಿದ್ದರು. ಈ ಕ್ರಮದಲ್ಲಿ ಕೊತ್ತಪೇಟ್ ಛೇದಕ ತಲುಪಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಸಂತ್ರಸ್ತೆಯನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದರು. ಸದ್ಯ ಸುರೇಶ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಸಿಐ ಜಾನಕಿರೆಡ್ಡಿ ತಿಳಿಸಿದ್ದಾರೆ.